ಶನಿವಾರ, ಸೆಪ್ಟೆಂಬರ್ 18, 2021
21 °C

ಪತ್ನಿ ರಕ್ಷಿಸಿ, ಮಕ್ಕಳ ಜತೆ ತಂದೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ತಾಲ್ಲೂಕಿನ ಚಳಗೇರಾ ಗ್ರಾಮದ ಜಮೀನಿನಲ್ಲಿ ಕಟಾವು ಮಾಡಿದ ಸೂರ್ಯಕಾಂತಿಯನ್ನು ಟ್ರ್ಯಾಕ್ಟರ್‌ನಲ್ಲಿ ಪಕ್ಕದ ಜಮೀನಿಗೆ ಸಾಗಿಸುತ್ತಿದ್ದಾಗ ಹೈಟೆನ್ಷನ್‌ ತಂತಿ ಬಿದ್ದು ತಂದೆ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.

ಗ್ರಾಮದ ರೈತ ಹನುಮಂತ ಬೀರಪ್ಪನವರ (35) ಹಾಗೂ ಪುತ್ರಿ ಪ್ರಿಯಾಂಕಾ (4) ಹಾಗೂ ಬೀರಪ್ಪ (2) ಮೃತರು.

ಹನುಮಂತ ಅವರ ಪತ್ನಿ ಶಿಲ್ಪಾ ಕಾಲಿಗೆ ಗಾಯವಾಗಿದೆ. ಟ್ರ್ಯಾಕ್ಟರ್‌ ಚಾಲಕ ಗ್ಯಾನಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜಮೀನಿನಲ್ಲಿ ಹಾದುಹೋಗಿರುವ 11 ಕೆ.ವಿ ವಿದ್ಯುತ್‌ ತಂತಿ ಟ್ರಾಲಿ ಮೇಲೆ ಹರಿದುಬಿದ್ದಿದೆ. ವಿದ್ಯುತ್‌ ಪ್ರವಹಿಸುತ್ತಿದ್ದಂತೆ ಟ್ರಾಲಿಯಲ್ಲಿ ಕುಳಿತಿದ್ದ ಶಿಲ್ಪಾ ಅವರನ್ನು ಗಂಡ ಹನುಮಂತಪ್ಪ ತಕ್ಷಣ ಕಾಲಿನಿಂದ ಒದ್ದು ಕೆಳಗೆ ಬೀಳಿಸಿದ್ದಾರೆ. ಆದರೆ, ಮಕ್ಕಳನ್ನು ಟ್ರಾಲಿಯಿಂದ ಕೆಳಕ್ಕಿಳಿಸಬೇಕು ಎನ್ನುವಷ್ಟರಲ್ಲಿಯೇ ಮೂವರೂ ಅಸುನೀಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು