ಬುಧವಾರ, ಮೇ 25, 2022
29 °C

ಕಲ್ಲಭಾವಿ: ವಿಜೃಂಭಣೆಯ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಬುರ್ಗಾ: ತಾಲ್ಲೂಕಿನ ಕಲ್ಲಭಾವಿ ಗ್ರಾಮದಲ್ಲಿ ಮಾರುತೇಶ್ವರ ದೇವರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ಕೋವಿಡ್ ಕಾರಣ ಎರಡು ವರ್ಷಗಳಿಂದ ಸರಳವಾಗಿ ರಥೋತ್ಸವ ನಡೆದಿತ್ತು. ಈ ಬಾರಿ ಅದ್ದೂರಿಯಾಗಿ ನಡೆಯಿತು.

ತಾಲ್ಲೂಕಿನ ಹಿರೇವಂಕಲಕುಂಟಾ, ಚಿಕ್ಕವಂಕಲಕುಂಟಾ, ಮರಕಟ್ಟು, ಮಾಟಲದಿನ್ನಿ, ಉಚ್ಚಲಕುಂಟಾ, ಯಡ್ಡೋಣಿ, ತಾಳಕೇರಿ, ಚೌಡಾಪೂರ, ಗುಳೆ, ಗುಂಟಮಡು ಸೇರಿ ಸುತ್ತಮುತ್ತಲಿನ ಗ್ರಾಮಗಳು, ಜಿಲ್ಲೆಯ ವಿವಿಧ ಪ್ರದೇಶಗಳಿಂದ ಸಾಕಷ್ಟು ಸಂಖ್ಯೆಯ ಭಕ್ತರು
ಪಾಲ್ಗೊಂಡಿದ್ದರು.

ಜಾತ್ರೆ ಪ್ರಯುಕ್ತ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ಹರಿಕೆ ತೀರಿಸಿದರು.

ಈ ಭಾಗದ ದೊಡ್ಡ ಜಾತ್ರೆಗಳಲ್ಲಿ ಕಲ್ಲಭಾವಿ ಮಾರುತೇಶ್ವರನ ಜಾತ್ರೆಯೂ ಒಂದು. ಇದನ್ನು ನೋಡಲೆಂದು ನವ ದಂಪತಿಗಳು ಆಗಮಿಸುವುದು ವಿಶೇಷ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು