ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವದಿ ಕಾಲಿಗೆ ಬಿದ್ದು ಕಣ್ಣೀರಿಟ್ಟ ರೈತ: ಪ್ರಚಾರ ಬೇಕೊ, ಪರಿಹಾರ ಬೇಕೊ ಎಂದ ಸಚಿವ

Last Updated 1 ನವೆಂಬರ್ 2019, 9:53 IST
ಅಕ್ಷರ ಗಾತ್ರ

ಕೊಪ್ಪಳ: 35 ವರ್ಷಗಳಿಂದ ಬಾಕಿ ಇರುವ ಬೆಳೆ ನಷ್ಟ ಪರಿಹಾರ ಕೊಡುವಂತೆ ಒತ್ತಾಯಿಸಿ ಕಣ್ಣೀರಿಡುತ್ತಲೇ ರೈತ ಮಂಜುನಾಥ ಪುರದ್ ಡಿಸಿಎಂ ಲಕ್ಷ್ಮಣ್ ಸವದಿ ಮುಂದೆ ಕಾಲಿಗೆರಗಿ ಬೇಡಿದ ಪ್ರಸಂಗ ಗುರುವಾರ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆ.

ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿದ ಬಳಿಕ ಜನರಿಂದ ಮನವಿ ಸ್ವೀಕರಿಸುವ ವೇಳೆ ಈ ಪ್ರಸಂಗ ನಡೆದಿದೆ.

‘ಜಿಲ್ಲೆಯ ಹುಲಿಯಾಪುರ ಗ್ರಾಮದಲ್ಲಿ ಜಿಲ್ಲಾಡಳಿತ ಕೆರೆಗಾಗಿ ರೈತರ ಭೂಮಿಯನ್ನು 1985ರಲ್ಲೆ ಸ್ವಾಧೀನ ಮಾಡಿಕೊಂಡಿದೆ. ಭೂಮಿ ಸ್ವಾಧೀನ ಪರಿಹಾರ ನೀಡಿದೆ. ಆದರೆ ಕೆರೆಯ ನೀರಿನಿಂದ ಬೆಳೆ ನಷ್ಟವಾಗಿದೆ. ಆಗಿನಿಂದಲೂ ನಾವು ಕೇಳುತ್ತಾ ಬಂದಿದ್ದೇವೆ. 45 ರೈತರ ಬೆಳೆ ನಷ್ಟ ಪರಿಹಾರ ಕೊಡಬೇಕಿದೆ’ ಎಂದು ಹೇಳಿ ರೈತ ಮಂಜುನಾಥ ಪುರದ್ ಡಿಸಿಎಂ ಲಕ್ಷ್ಮಣ್ ಸವದು ಕಾಲಿಗೆ ಬಿದ್ದು ಕಣ್ಣೀರಿಟ್ಟರು.

‘ಧಾರವಾಡ ಹೈಕೋರ್ಟ್ ಸಹಿತ ಬೆಳೆ ನಷ್ಟ ಪರಿಹಾರ ಕೊಡುವಂತೆ ಆದೇಶ ಮಾಡಿದೆ. ಆದರೆ ಜಿಲ್ಲಾಡಳಿತ ಬೆಳೆ ನಷ್ಟ ಪರಿಹಾರ ಕೊಡುತ್ತಿಲ್ಲ. ಕಳೆದ 55 ವರ್ಷದಿಂದ ಕೋರ್ಟ್ ನಲ್ಲಿ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಕೂಡಲೇ ನಮಗೆ ಬೆಳೆ ನಷ್ಟ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಕಾಲು ಹಿಡಿದುಕೊಂಡೆಮನವಿ ಮಾಡಿದರು.

ಪೊಲೀಸರು ಆ ರೈತನನ್ನು ಬೇರೆಡೆ ಕರೆದುಕೊಂಡು ಹೋಗುವ ಪ್ರಯತ್ನ ನಡೆಸಿದರು. ಬಳಿಕ ಸವದಿ ರೈತನಿಗೆ ಸಮಾಧಾನ ಹೇಳಿ ‘ನಿನಗೆ ಪ್ರಚಾರ ಬೇಕೋ ಪರಿಹಾರ ಬೇಕೋ’ ಎನ್ನುತ್ತಲೆ ನಿನಗೆ ಪರಿಹಾರ ಕೊಡಿಸುವ ಪ್ರಯತ್ನ ಮಾಡುವೆ ಎಂದು ಕಾರು ಹತ್ತಿ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT