ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಗಾವತಿ | ಚೆಕ್‌ಪೋಸ್ಟ್‌ಗೆ ಜಿ.ಪಂ ಸಿಇಒ ಭೇಟಿ: ಪರಿಶೀಲನೆ

Published 3 ಏಪ್ರಿಲ್ 2024, 16:10 IST
Last Updated 3 ಏಪ್ರಿಲ್ 2024, 16:10 IST
ಅಕ್ಷರ ಗಾತ್ರ

ಗಂಗಾವತಿ: ಲೋಕಸಭಾ ಚುನಾವಣೆ ನಿಮಿತ್ತ ತೆರೆಯಲಾಗಿರುವ ತಾಲ್ಲೂಕಿನ ಕಡೆಬಾಗಿಲು ಕ್ರಾಸ್, ಚಿಕ್ಕಜಂತಕಲ್, ಜಂಗಮರ ಕಲ್ಗುಡಿ ಚೆಕ್‌ಪೋಸ್ಟ್‌ಗಳಿಗೆ ಬುಧವಾರ ಜಿ.ಪಂ.ಸಿಇಒ ರಾಹುಲ್ ರತ್ನಂ ಪಾಂಡೆಯ ಭೇಟಿ ನೀಡಿ ಪರಿಶೀಲಿಸಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದಾಖಲೆಯಿಲ್ಲದ ಸಾಗಿಸುವ ಹಣ, ಅಕ್ರಮ ಮದ್ಯ ಸೇರಿ ವಿವಿಧ ಸಾಮಗ್ರಿಗಳು ಸರಬರಾಜು ಆಗಲಿದ್ದು, ಅಧಿಕಾರಿಗಳು ಚಾಚು ತಪ್ಪದೆ ಎಲ್ಲ ವಾಹನಗಳನ್ನು ತಪಾಸಣೆ ಮಾಡಬೇಕು. ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅನುಮಾನಸ್ಪದ ವಾಹನಗಳ ಸಂಖ್ಯೆಯನ್ನು ನೋಂದಣಿ ಮಾಡಿಕೊಂಡು ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು. ನಂತರ ಚೆಕ್ ಪೋಸ್ಟ್ ಗಳಲ್ಲಿ ಕುಡಿಯುವ ನೀರು, ವಿದ್ಯುತ್ ಸೇರಿ ಮೂಲಸೌಕರ್ಯ ವ್ಯವಸ್ಥೆಯನ್ನು ಪರಿಶೀಲಿಸಿದರು‌

ತಾ.ಪಂ.ಇಒ ಲಕ್ಷ್ಮಿದೇವಿ, ಆರ್‌ಡಬ್ಲ್ಯೂಎಸ್ ಎಇಇ ವಿಜಯಕುಮಾರ, ತಾ.ಪಂ ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ, ಆನೆಗೊಂದಿ, ಜಂಗಮರಕಲ್ಗುಡಿ, ಚಿಕ್ಕಜಂತಗಲ್ ಪಿಡಿಒಗಳು,  ಚೆಕ್‌ಪೋಸ್ಟ್‌ ಸಿಬ್ಬಂದಿ  ಉಪಸ್ಥಿತರಿದ್ದರು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT