ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರುಕಾಳು ಖರೀದಿ ಕೇಂದ್ರ ಇಂದು ಆರಂಭ

Last Updated 1 ಸೆಪ್ಟೆಂಬರ್ 2022, 16:53 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯ ವಿವಿಧೆಡೆ ಸೆ. 2ರಿಂದ ಹೆಸರುಕಾಳು ಖರೀದಿ ಹಾಗೂ ನೋಂದಣಿ ಕೇಂದ್ರಗಳನ್ನು ಪ್ರಾರಂಭಿಸಲು ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ನೇತೃತ್ವದಲ್ಲಿ ಗುರುವಾರ ನಡೆದ ಕಾರ್ಯಪಡೆ ಸದಸ್ಯರ ಸಭೆಯಲ್ಲಿ 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‌ಗೆ ₹7,755ರಂತೆ ರಾಜ್ಯಕ್ಕೆ ಗರಿಷ್ಠ 36,390 ಮೆಟ್ರಿಕ್ ಟನ್ ಎಫ್.ಎ.ಕ್ಯೂ. ಗುಣಮಟ್ಟದ ಹೆಸರುಕಾಳು ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ಜಿಲ್ಲೆಯ ರೈತರಿಂದ ಖರೀದಿಸುವ ಕುರಿತು ಚರ್ಚೆ ನಡೆಯಿತು.

ಕೇಂದ್ರಗಳು: ಕೊಪ್ಪಳದ ಟಿಎಪಿಎಂಸಿ, ಹಿರೇಸಿಂಧೋಗಿಯ ಪಿಎಸಿಎಸ್, ಕುಕನೂರು ಪಿಎಸಿಎಸ್, ಮಸಬಹಂಚಿನಾಳ ಪಿಎಸಿಎಸ್, ಯಲಬುರ್ಗಾ ಟಿಎಪಿಎಂಸಿ, ಹನುಮಸಾಗರ ಪಿಎಸಿಎಸ್ ಹಾಗೂ ತಾವರಗೇರಾದ ಪಿಎಸಿಎಸ್ ಮೆಣದಾಳ.

ನೋಡಲ್‌ ಅಧಿಕಾರಿಗಳು: ಕೊಪ್ಪಳ ತಾಲ್ಲೂಕು ಹಾಗೂ ಹಿರೇಸಿಂಧೋಗಿ ಎಪಿಎಂಸಿ ಸಮಿತಿ ಕಾರ್ಯದರ್ಶಿ ಜಿ.ಎಂ. ಮರುಳುಸಿದ್ದಯ್ಯ (8495056203), ಯಲಬುರ್ಗಾ ಹಾಗೂ ಕುಕನೂರಿನ ಸಿದ್ದಯ್ಯಸ್ವಾಮಿ (9902224089), ಹನುಮಸಾಗರ ಮತ್ತು ತಾವರಗೇರಾದಲ್ಲಿ ಟಿ.ನೀಲಪ್ಪಶೆಟ್ಟಿ (916827751). ಹೆಚ್ಚಿನ ಮಾಹಿತಿಗಾಗಿ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಶಾಖಾ ವ್ಯವಸ್ಥಾಪಕ ವಿಶಾಲ (08539-230010) ಸಂಪರ್ಕಿಸಬೇಕು ಎಂದು ಜಿಲ್ಲಾ ಕಾರ್ಯದರ್ಶಿ ಸಮಿತಿಯ ಸದಸ್ಯ ಕಾರ್ಯದರ್ಶಿ ಎಸ್. ಶ್ಯಾಮ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT