ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಲ ಹೆಚ್ಚಿಸಿದ ನಾಲಾ

ನರೇಗಾ ಯೋಜನೆಯಡಿ ನಾಲಾ ಅಭಿವೃದ್ಧಿಪಡಿಸಿದ ಗ್ರಾಮ ಪಂಚಾಯಿತಿ
Last Updated 19 ಆಗಸ್ಟ್ 2021, 1:49 IST
ಅಕ್ಷರ ಗಾತ್ರ

ಕುಕನೂರು: ಹಲವು ವರ್ಷಗಳಿಂದ ಭೂಮಿಯಲ್ಲಿಯ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದರಿಂದಾಗಿ ಮನುಷ್ಯನಿಗೆ ಅವಶ್ಯಕವಾಗಿರುವ ಜಲ ಬರಿದಾಗುತ್ತಿದೆ.

ಇದನ್ನರಿತ ಸರ್ಕಾರ ಈಗ ನರೇಗಾ ಯೋಜನೆ ಹಾಗೂ ಜಲಶಕ್ತಿ ಅಭಿಯಾನದ ಅಡಿಯಲ್ಲಿ ನೀರಿನ ಮೂಲಗಳನ್ನು ಹೆಚ್ಚಳ ಮಾಡಲು ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದು ಅಂತರ್ಜಲ ಮಟ್ಟವನ್ನು ಹೆಚ್ಚಳ ಮಾಡಲು ಪಣತೊಟ್ಟಿದೆ. ಇಷ್ಟು ದಿನ ಮಳೆ ನೀರು ಪೋಲಾಗಿ ಹೋಗುತ್ತಿರುವುದನ್ನು ತಡೆದು ಅದನ್ನು ನೇರವಾಗಿ ಭೂಮಿಯಲ್ಲಿ ಇಂಗಿಸುವಂಥ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಅದಕ್ಕಿಗ ನಿದರ್ಶನ ಎನ್ನುವಂತೆ ಇಲ್ಲೊಂದು ನಾಲಾ ಮೈದುಂಬಿ ನಿಂತಿದೆ.

ಉದ್ಯೋಗ ಖಾತ್ರಿ ಯೋಜನೆಯಡಿ ತಾಲ್ಲೂಕಿನ ಮಸಬಹಂಚಿನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾವರಾಳ ಗ್ರಾಮದ ನಾಲಾ ಅಭಿವೃದ್ಧಿಪಡಿಸಲಾಗಿದೆ. ಇದರಿಂದ ನೂರಾರು ಜನರಿಗೆ ಉದ್ಯೋಗ ದೊರೆತಿದೆ. ಇಷ್ಟುದಿನ ಹರಿದು ಹಳ್ಳ ಸೇರುತ್ತಿದ್ದ ನೀರು ಭೂಮಿಯಲ್ಲಿ ಇಂಗುವಂತಾಗಿದೆ. ಈಚೆಗೆ ಬಿದ್ದ ಮಳೆಯಿಂದಾಗಿ ಈಗ ಲಕ್ಷಾಂತರ ಲೀಟರ್‌ ನೀರು ಸಂಗ್ರಹವಾಗಿದೆ.

ಪ್ರಸಕ್ತ ವಾರ್ಷಿಕ ಯೋಜನೆಯಲ್ಲಿ ₹3 ಲಕ್ಷ ವೆಚ್ಚದಲ್ಲಿ 881 ಅಕುಶಲ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ ಕೈಗೊಂಡು ಒಂದು ಕಿ.ಮೀ ವರೆಗೆ ಮಳೆ ನೀರು ನಿಂತು ಭೂಮಿಯಲ್ಲಿ ಇಂಗುವಂತೆ ಮಾಡಲಾಗಿದೆ. ಇದರಿಂದಾಗಿ ಸುತ್ತಮುತ್ತಲಿನ ಕೊಳವೆಬಾವಿಗಳ ನೀರು ಹೆಚ್ಚಾಗುತ್ತಿದೆ. ರೈತರ ನೀರಾವರಿ ಜಮೀನು ಹೆಚ್ಚಾಗುತ್ತಿದೆ. ಅಂತರ್ಜಲ ಮಟ್ಟ ಹೆಚ್ಚಾಗುತ್ತಿವೆ ಎಂದು ಇಲ್ಲಿನ ರೈತರು ಖುಷಿ ವ್ಯಕ್ತಪಡಿಸುತ್ತಿದ್ದಾರೆ.

ಬೇಸಿಗೆ ಕಾಲದಲ್ಲಿ ಪ್ರಾಣಿ-ಪಕ್ಷಿಗಳು ಕುಡಿಯುವ ನೀರಿಗಾಗಿ ಕಿಲೋ ಮೀಟರ್‌ ಗಟ್ಟಲೆ ಸುತ್ತಾಡಬೇಕಿತ್ತು. ಅಷ್ಟು ಸುತ್ತಿದರೂ ನೀರು ಸಿಗುವುದು ಕಷ್ಟವಾಗುತ್ತಿತ್ತು. ಅಲ್ಲದೆ, ಇಲ್ಲಿನ ನಾಲಾದಲ್ಲಿರುವ ಗಿಡ-ಮರಗಳು ನೀರಿಲ್ಲದೆ ಒಣಗುವ ಸ್ಥಿತಿಗೆ ತಲುಪಿದ್ದವು. ಆದರೆ, ಈ ಬಾರಿ ಮಳೆಯಾಗಿದ್ದರಿಂದ, ಇಲ್ಲಿ ನರೇಗಾ ಯೋಜನೆಯಡಿ ಕಾಮಗಾರಿ ಮಾಡಿದ್ದರಿಂದ ಮಳೆಯಾಗಿ ಈಗ ನಾಲಾ ತುಂಬಿಕೊಂಡು ನಿಂತಿದೆ. ಇದರಿಂದಾಗಿ ಅಕ್ಕಪಕ್ಕದ ಒಡ್ಡಿನ ಮೇಲಿರುವ ಗಿಡಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಪಕ್ಷಿಗಳು ಅಲ್ಲೇ ಗೂಡು ಕಟ್ಟಿಕೊಂಡಿವೆ. ಹರಿಸಿನಿಂದ ಕಂಗೊಳಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT