ಕೆಲಸ ಬಿಟ್ಟು ದಿನಪೂರ್ತಿ ಅಲೆದಾಟ ಆರು ತಿಂಗಳಿಂದ ಸಾರ್ವಜನಿಕರಿಗೆ ಸಮಸ್ಯೆ
ಒಂದು ಸರಳ ಆಧಾರ್ ತಿದ್ದುಪಡಿಗೆ ನಾವು 30 ಕಿಲೋಮೀಟರ್ ಹಾದು ಹೋಗುತ್ತಿದ್ದೇವೆ. ಸ್ವಾತಂತ್ರ್ಯಭಾರತದಲ್ಲಿ ಹಳ್ಳಿಗರಿಗೆ ಮೂಲಸೌಲಭ್ಯಗಳು ಇನ್ನೂ ದೂರವಾಗಿವೆ ಎಂಬುದರ ಜೀವಂತ ಸಾಕ್ಷಿ
ರಾಹುಲ್ ದೇವಸಿಂಗ್ ಜಿಲ್ಲಾ ಉಪಾಧ್ಯಕ್ಷ ಕೆಆರ್‌ಎಸ್ ಪಕ್ಷ ಕೊಪ್ಪಳ
ಒಂದೂವರೆ ವರ್ಷಗಳಿಂದ ಹೋಬಳಿಯ ಜನ ಆಧಾರ್ ತಿದ್ದುಪಡಿಗೆ ತಾಲ್ಲೂಕು ಕಚೇರಿಗಳ ಬಾಗಿಲಿಗೆ ಅಲೆದಾಡುತ್ತಿದ್ದಾರೆ. ಇಲ್ಲಿಯೇ ತಾತ್ಕಾಲಿಕ ಆಧಾರ್ ಕೇಂದ್ರ ಸ್ಥಾಪನೆ ಮಾಡುವುದು ತುರ್ತು ಅಗತ್ಯವಾಗಿದೆ
ಯಮನಪ್ಪ ಮಡಿವಾಳರ ರೈತ ಸಂಘದ ಘಟಕದ ಅಧ್ಯಕ್ಷ
ಆಧಾರ್ ಕಾರ್ಡ್ ತಿದ್ದುಪಡಿ ಕೇಂದ್ರ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿದೆ. ನಾವೂ ಮನವಿ ಸಲ್ಲಿಸಿದ್ದೇವೆ. ಸಮಸ್ಯೆಯನ್ನು ಪರಿಹರಿಸಲಾಗುವುದು