ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಿಹರೆಯದವರಿಗೆ ಆರೋಗ್ಯ ಜಾಗೃತಿ

Last Updated 23 ಜನವರಿ 2022, 11:31 IST
ಅಕ್ಷರ ಗಾತ್ರ

ಅಳವಂಡಿ: ಕವಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಿಲೋಗಿಪುರದ ಉಪ ಕೇಂದ್ರದ ವತಿಯಿಂದ ಹಲವಾಗಲಿ ಗ್ರಾಮದಲ್ಲಿ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಮತ್ತು ಮಕ್ಕಳ ಸಹಾಯವಾಣಿ ಕಾರ್ಯ ಚಟುವಟಿಕೆಗಳ ಕುರಿತ ಕಾರ್ಯಕ್ರಮ ನಡೆಯಿತು.

ಮುಖ್ಯ ಶಿಕ್ಷಕ ಜಡಿಯಪ್ಪ ಇಡಗಲ ಹಾಗೂ ಇತರರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹದಿಹರೆಯದವರಿಗೆ ಸ್ವಚ್ಛತೆ, ಪೌಷ್ಟಿಕಾಂಶ ಕೊರತೆ, ಮಾನಸಿಕ ಆರೋಗ್ಯ ಸಮಸ್ಯೆಗಳು, ಋತುಚಕ್ರ ಸಂಬಂಧಿ ಶುಚಿತ್ವ, ಲೈಂಗಿಕತೆ ಮತ್ತು ಸಂತಾನೋತ್ಪತ್ತಿ ಸಮಸ್ಯೆಗಳ ಕುರಿತು ಮಾಹಿತಿ ನೀಡಲಾಯಿತು.

ಆರೋಗ್ಯ ನಿರೀಕ್ಷಣಾಧಿಕಾರಿ ಉದಯಕುಮಾರ ಮಡಿವಾಳ, ಆಪ್ತ ಸಮಾಲೋಚಕಿ ಕಲ್ಪನಾ.ಕೆ, ಆರೋಗ್ಯ ಸುರಕ್ಷತಾಧಿಕಾರಿ ಪ್ರತಿಭಾ ಅಂಗಡಿ, ಸಮುದಾಯ ಆರೋಗ್ಯಾಧಿಕಾರಿ ಶೋಭಾ ಚಿಲವಾಡ್ಗಿ, ಶಿಕ್ಷಕ ಮಂಜುನಾಥ ಕೆಸ್ಲಾಪುರ, ಮಕ್ಕಳ ಸಹಾಯವಾಣಿಯ ಅನುರಾಧ.ಎಸ್, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT