ಗುರುವಾರ , ಜನವರಿ 30, 2020
19 °C

ಬಡವರಿಗೆ ಆರೋಗ್ಯ ಶಿಬಿರ ಸಹಕಾರಿ :ಶಾಸಕ ಬಸವರಾಜ ದಢೇಸುಗೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರಟಗಿ: ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ನಡೆಯಬೇಕಿದೆ. ಶಿಬಿರಗಳು ಬಡವರಿಗೆ ಸಹಕಾರಿ ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.

ತಾಲೂಕಿನ ಸಿದ್ದಾಪುರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರಟಗಿ ವಿಶೇಷ ಎಪಿಎಂಸಿ, ಗಂಗಾವತಿ ಲಯನ್ಸ್ ಕ್ಲಬ್ ಹಾಗೂ ಇತರ ಆಸ್ಪತ್ರೆಗಳ ಸಹಯೋಗದಲ್ಲಿ ಈಚೆಗೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿವಿಧ ಗಂಭೀರ ಕಾಯಿಲೆಗಳಿಗೆ ಬಡವರು ದುಬಾರಿ ವೆಚ್ಚ ವ್ಯಯಿಸಿ ಚಿಕಿತ್ಸೆ ಪಡೆಯುವುದು ಅಸಾಧ್ಯ. ಸರ್ಕಾರ ಆರೋಗ್ಯ ರಕ್ಷಣೆಗೆ ಕ್ರಮ ಕೈಗೊಂಡಿದೆ. ಆದರೂ ಖಾಸಗಿಯವರು ಕೈಜೋಡಿಸಿದಾಗಲೇ ಅರ್ಹರಿಗೆ ಆರೋಗ್ಯ ಭಾಗ್ಯ ದೊರೆಯಲು ಸಾಧ್ಯ ಎಂದರು.

ಜಿಲ್ಲಾ ‌ಚಾಯಿತಿ ಅಧ್ಯಕ್ಷ ವಿಶ್ವನಾಥ ರಡ್ಡಿ ಮಾತನಾಡಿದರು.

ಕಾರಟಗಿ ವಿಶೇಷ ಎಪಿಎಂಸಿ ಅಧ್ಯಕ್ಷ ಶರಣಪ್ಪ ಭಾವಿ ಮುಖಂಡರಾದ ಬಿ.ಬಸವರಾಜಪ್ಪ, ಬಸವರಾಜ ನೀರಗಂಟಿ, ಚಂದ್ರಶೇಖರಗೌಡ ಪೊಲೀಸ್ ಪಾಟೀಲ, ಡಾ. ಕೆ. ಎನ್. ಪಾಟೀಲ, ಪಂಪನಗೌಡ ಕ್ಯಾಡೇದ್, ಮಂಜುನಾಥ, ವಿನಯ್ ಭಾವಿ ತಜ್ಞ ವೈದ್ಯರಾದ ಚಂದ್ರಪ್ಪ, ಸೋಮರಾಜು, ಸಿ. ಬಿ. ಚಿನಿವಾಲರ, ಕೆ. ಚಕ್ಲಿ, ಸುಬ್ಬಣ್ಣ, ಅನಂತರಾಜ ಗೋಗಿ, ಅಭಿಷೇಕ, ಶ್ರೀನಿವಾಸ ರಡ್ಡಿ, ಮಾಧವಶೆಟ್ಟಿ, ಕಾರ್ತಿಕ್‌ ಗೌಡ
ಇದ್ದರು.

20ಕ್ಕೂ ಹೆಚ್ಚು ವೈದ್ಯರಿಂದ ಪರೀಕ್ಷೆ, ಚಿಕಿತ್ಸೆ: ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ನೀಡುವ ಶಿಬಿರದಲ್ಲಿ ಸಿದ್ದಾಪುರವಲ್ಲದೆ ಕೊಟ್ನೆಕಲ್, ಬರಗೂರು, ಕಿಂದಕ್ಯಾಂಪ್, ರವಿನಗರ, ಹುಳ್ಕಿಹಾಳ, ಗುಂಡೂರು,
ಎಸ್. ಬಿ. ರಡ್ಡಿಕ್ಯಾಂಪ್, ಮುಸ್ಟೂರು, ಲಕ್ಷ್ಮೀಕ್ಯಾಂಪ್ ಮೊದಲಾದ ಗ್ರಾಮಗಳ ನೂರಾರು ಜನರು ವಿವಿಧ ಕಾಯಿಲೆಗಳ ಪರೀಕ್ಷೆ, ಚಿಕಿತ್ಸೆಗೊಳಗಾದರು.
ಬೆಂಗಳೂರು, ಗಂಗಾವತಿ ಸಹಿತ ವಿವಿಧೆಡೆಯ 20ಕ್ಕೂ ಹೆಚ್ಚು ನುರಿತ ವೈದ್ಯರು ರಕ್ತ ತಪಾಸಣೆ, ಸ್ತನ ಕ್ಯಾನ್ಸರ್, ಕಣ್ಣು, ಹೃದಯ, ತಲೆ, ಹೊಟ್ಟೆಗೆ ಸಂಬಂಧಿಸಿಸಿ ನಾನಾ ರೋಗಗಳ ಬಗ್ಗೆ ಪರೀಕ್ಷೆ ನಡೆಸಿ, ಚಿಕಿತ್ಸೆ ನೀಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು