ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ

Last Updated 10 ಮೇ 2021, 11:15 IST
ಅಕ್ಷರ ಗಾತ್ರ

ಕನಕಗಿರಿ: ಪಟ್ಟಣ ಸೇರಿ ವಿವಿಧ ಗ್ರಾಮಗಳಲ್ಲಿ ಸೋಮವಾರ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.

ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ರವೀಂದ್ರ ಸಜ್ಜನ್ ಮಾತನಾಡಿ,‘ಹೇಮರಡ್ಡಿ ಮಲ್ಲಮ್ಮನವರು ಶೋಷಣೆಗೆ ಒಳಗಾಗಿದ್ದರು. ತಾಳ್ಮೆ ಹಾಗೂ ಭಕ್ತಿಯಿಂದ ಇಡೀ ಕುಟುಂಬ ನಡೆಸಿ ಮಹಿಳೆಯರ ಕಣ್ಮಣಿಯಾಗಿದ್ದರು’ ಎಂದರು.

ಸದಸ್ಯರಾದ ಮಂಜುನಾಥರೆಡ್ಡಿ ಮಾದಿನಾಳ, ಹುಲಗಪ್ಪ ವಾಲೇಕಾರ, ಸುಭಾಸ ಕಂದಕೂರು, ಪ್ರಮುಖರಾದ ಇಬ್ರಾಯಿಂಸಾಬ ಹಾಗೂ ಪ್ರಕಾಶ ಹಾದಿಮನಿ ಇದ್ದರು.

ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರವಿ ಅಂಗಡಿ ಮಾತನಾಡಿ,‘ಸಮಾಜಕ್ಕೆ ಮೌಲ್ಯಗಳನ್ನು ಬೋಧಿಸಿದ ಸಂತರು, ಶರಣರನ್ನು ಒಂದು ಸಮಾಜಕ್ಕೆ ಸೀಮಿತಗೊಳಿಸಬಾರದು’ ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ರವೀಂದ್ರ ಸಜ್ಜನ್, ಸದಸ್ಯ ಶರಣಬಸಪ್ಪ ಭತ್ತದ ಅವರು ಮಾತನಾಡಿದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ಮಂಜುನಾಥರೆಡ್ಡಿ ಮಾದಿನಾಳ, ಖಾಜಾಸಾಬ ಗುರಿಕಾರ ಹಾಗೂ ಇತರರು ಇದ್ದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಿರ್ದೇಶಕರಾದ ಶೇಖರಪ್ಪ ಭಾವಿಕಟ್ಟಿ, ಸಗರಪ್ಪ ಕಂಪ್ಲಿ, ಸಿಬ್ಬಂದಿ ಮಂಜುನಾಥರೆಡ್ಡಿ ಎಚ್ ಮಾದಿನಾಳ, ಶಕ್ಷಾವಲಿ ಬಿಳಿಕುದುರಿ ಹಾಗೂ ವೀರೇಶ ಇದ್ದರು.

ಸಮೀಪದ ನವಲಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಜಯಂತಿಯಲ್ಲಿ ಸಂಘದ ಅಧ್ಯಕ್ಷ ಭೀಮನಗೌಡ ಹರ್ಲಾಪುರ,
ಗ್ರಾ.ಪಂ. ಸದಸ್ಯ ಕಾಡನಗೌಡ, ಪ್ರಮುಖರಾದ ಮಲ್ಲಿಕಾರ್ಜುನ ಬಳಗಾನೂರು ಹಾಗೂ ನಿಂಗಪ್ಪ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT