ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಬುರ್ಗಾ; ನೋಡುಗರ ರಂಜಿಸಿದ ಕಳಬೇಡನ ಕುಣಿತ

Last Updated 20 ಮಾರ್ಚ್ 2022, 5:47 IST
ಅಕ್ಷರ ಗಾತ್ರ

ಯಲಬುರ್ಗಾ: ಪಟ್ಟಣದಲ್ಲಿ ಶನಿವಾರ ಸಡಗರದಿಂದ ಹೋಳಿ ಹಾಗೂ ಕಾಮದಹನ ಆಚರಿಸಲಾಯಿತು.

ಇಲ್ಲಿನ ಕಾಮನಕಟ್ಟೆಯಲ್ಲಿ ಕಳೆದ 4 ದಿನಗಳಿಂದ ನಡೆದ ಧಾರ್ಮಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ನೋಡುಗರನ್ನು ರಂಜಿಸಿದವು. ಚಿತ್ರವಿಚಿತ್ರ ವೇಷಧಾರಿಗಳ ಮೋಜು ಮಸ್ತಿ, ಅಣುಕು ಶವಯಾತ್ರೆ, ಕಳಬೇಡನ ಕುಣಿತ ಹಬ್ಬಕ್ಕೆ ಮೆರಗು ತಂದವು.

ಕಾಮದಹನದ ಹಿಂದಿನ ದಿನದ ರಾತ್ರಿ ವೇಳೆ ಗಾಳೆಯರ್ ಕಾಮಣ್ಣ ಸಮಿತಿಯವರು ಕಳಬೇಡನ ಕುಣಿತ ಆರಂಭಿಸಿದರು. ಆ ಬಳಿಕ ಕಂಡೇರಕಾಮ, ದೈವದಕಾಮ ಹಾಗೂ ಸರ್ಕಾರಿ ಕಾಮಣ್ಣ ಸಮಿತಿಯವರ ಕಳಬೇಡನ ಕುಣಿತ ನಡೆಸಿಕೊಟ್ಟರು. ಪಟ್ಟಣ ಸೇರಿದಂತೆ ನೆರೆಯ ಗ್ರಾಮಗಳ ಜನರು ಕುಣಿತ ವೀಕ್ಷಿಸಿ ಸಂಭ್ರಮಿಸಿದರು.

ಕುಣಿತ ಅಂತ್ಯದ ಬಳಿಕ ರೇಣುಕಾಚಾರ್ಯ ವೃತ್ತದ ಸಮೀಪದ ಉಸುಗಿನಕಟ್ಟೆ ಬಳಿ ಸೇರುತ್ತಾರೆ. ದೈವದ ಕಾಮಣ್ಣನನ್ನು ದಹಿಸಿದ ನಂತರ ಉಳಿದ ಕಾಮನನ್ನು ನಿರ್ದಿಷ್ಟ ಸ್ಥಳಕ್ಕೆ ಮರಳಿಸಿ ದಹಿಸಲಾಗುತ್ತದೆ.

ಕಾಮ ದಹನದ ಬಳಿಕ ತಂಡೋಪತಂಡವಾಗಿ ಯುವಕರು ಬಣ್ಣ ಎರಚಿದರು. ಮಧ್ಯಾಹ್ನದ ವರೆಗೂ ಬಣ್ಣದೋಕಳಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT