ಕನಕಗಿರಿ: ಸಮೀಪದ ಶಿರಿವಾರ ಗ್ರಾಮದಲ್ಲಿರುವ 200 ಎಕರೆ ಸರ್ಕಾರಿ ಭೂಮಿಯಲ್ಲಿ ತೋಟಗಾರಿಕೆ ಟೆಕ್ನಾಲಜಿ ಪಾರ್ಕ್ ಸ್ಥಾಪಿಸಲು ಯೋಜಿಸಲಾಗಿದೆ ಎಂದು ಶಾಸಕ ಬಸವರಾಜ ದಢೇಸೂಗೂರು ತಿಳಿಸಿದರು.

ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಟ್ಟಡ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಟೆಕ್ನಾಲಜಿ ಪಾರ್ಕ್‌ನಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ, ಶಿಥಲೀಕರಣ ಘಟಕ, ತರಬೇತಿ ಕೇಂದ್ರ ಸ್ಥಾಪಿಸಲಾಗುವುದು. ಪಾರ್ಕ್ ಸ್ಥಾಪನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ಅಂತಿಮ ಹಂತದಲ್ಲಿದೆ. ಆನಂತರ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ಅವರು ಹೇಳಿದರು.

ಚಿಕ್ಕಮಾದಿನಾಳ–ಮುಸಲಾಪುರ, ಹೇರೂರು, ಹುಲಿಹೈದರ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ಒಟ್ಟು ₹ 36 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಈ ಯೋಜನೆಯ ಮೂಲಕ ಆಯಾ ಗ್ರಾಮಗಳ ಜನಸಂಖ್ಯೆಗೆ ತಕ್ಕಂತೆ ಕುಡಿಯುವ ನೀರನ್ನು ಪೈಪ್‌ಲೈನ್ ಮೂಲಕ ಸರಬರಾಜು ಮಾಡಲಾಗುವುದು, ಕ್ಷೇತ್ರದ ಅನೇಕ ಗ್ರಾಮಗಳ ಜನ ಇದರ ಸೌಲಭ್ಯವನ್ನು ಪಡೆಯಲಿದ್ದಾರೆ. 10 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಅವರು ವಿವರಿಸಿದರು.

ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಪಟ್ಟಣದ ಶಾಸಕರ ಮಾದರಿಯ ಶಾಲೆಯ ನಾಲ್ಕು ಕೊಠಡಿಗಳಿಗೆ ₹ 40 ಲಕ್ಷ, ಗುಡದೂರು ಶಾಲೆಯ ಐದು ಕೊಠಡಿಗಳಿಗೆ ₹ 50 ಲಕ್ಷ, ಬುನ್ನಟ್ಟಿಯ ಎರಡು ಕೊಠಡಿಗಳಿಗೆ ₹ 21.04 ಲಕ್ಷ, ಕರಡೋಣ ಎರಡು ಕೊಠಡಿಗೆ ₹ 21.04 ಲಕ್ಷ, ಇಲ್ಲಿನ ಎಸ್‌ಸಿ ಬಾಲಕರ ವಸತಿ ನಿಲಯದ ಹೆಚ್ಚುವರಿ ಕೊಠಡಿಗಳಿಗೆ ₹ 33. 50 ಲಕ್ಷ, ಪಶು ಸಂಗೋಪನೆಯ ₹ 21. 12 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಅವರು
ತಿಳಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯ ಸುಭಾಸ, ಪುರಸಭೆ ಸದಸ್ಯ ಜಿ. ತಿಮ್ಮನಗೌಡ,ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪರಸಪ್ಪ, ಮುಖ್ಯಶಿಕ್ಷಕ ಈಶಪ್ಪ ಇಟಗಿ, ಎಸ್‌ಡಿಎಂಸಿ ಅಧ್ಯಕ್ಷ ಸಣ್ಣ ಕನಕಪ್ಪ, ಉಪಾಧ್ಯಕ್ಷೆ ರಾಜೇಶ್ವರಿ ಓಣಿಮನಿ, ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸದಸ್ಯ ಡಾ.ದೊಡ್ಡಯ್ಯ ಅರವಟಗಿಮಠ, ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ್, ಬಿಜೆಪಿ ಮುಖಂಡರಾದ ಗ್ಯಾನಪ್ಪ ಗಾಣದಾಳ, ಅಮರಗುಂಡಪ್ಪ ತೆಗ್ಗಿನಮನಿ, ಪ್ರಕಾಶ ಹಾದಿಮನಿ, ಶರಣಪ್ಪ ಭಾವಿಕಟ್ಟಿ, ಕಂಠಿ ಮ್ಯಾಗಡೆ, ವಾಗೀಶ ಹಿರೇಮಠ, ಸಿ. ದುರ್ಗಾರಾವ್, ತಿಪ್ಪಣ್ಣ ಮಡಿವಾಳರ, ರಂಗಪ್ಪ ಕೊರಗಟಗಿ, ಅಶ್ವಿನಿ ದೇಸಾಯಿ, ಹುಲಿಗೆಮ್ಮ ನಾಯಕ, ನಿಂಗಪ್ಪ ಪೂಜಾರ. ಪಾಮಣ್ಣ ಅರಳಿಗನೂರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.