ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂಗೆ ತಮ್ಮ ಸರ್ಕಾರ ಉಳಿಸಿಕೊಳ್ಳೋದು ಮುಖ್ಯ, ರೈತರ ಹಿತವಲ್ಲ: ಡಿ.ಕೆ‌. ಶಿವಕುಮಾರ

Last Updated 23 ನವೆಂಬರ್ 2020, 6:33 IST
ಅಕ್ಷರ ಗಾತ್ರ

ಕೊಪ್ಪಳ: ರಾಜ್ಯದ ಮುಖ್ಯಮಂತ್ರಿಗಳಿಗೆ ತಮ್ಮ‌ ಸರ್ಕಾರ ಉಳಿಸಿಕೊಳ್ಳುವುದು ಮುಖ್ಯವಾಗಿದೆಯೇ ಹೊರತು ರೈತರ ಹಿತ ಅವರಿಗೆ ಮುಖ್ಯವಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಸರ್ಕಾರದ ವಿರುದ್ದ ಗುಡುಗಿದರು.

ಕೊಪ್ಪಳ ತಾಲೂಕಿನ ಹಿಟ್ನಾಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕೊಪ್ಪಳ-ರಾಯಚೂರು ಭಾಗದಲ್ಲಿ ಬೆಳೆದ ಭತ್ತಕ್ಕೆ ಬೆಲೆ ಸಿಗುತ್ತಿಲ್ಲ. ಈಗಿರುವ ಭತ್ತದ ಬೆಲೆ ಜೊತೆಗೆ ಹೆಚ್ಚುವರಿ ₹ 500 ಬೆಲೆ ಹೆಚ್ಚಳ ಮಾಡಬೇಕು. ಪ್ರತಿ ದಿನವೂ ಬೆಲೆ ಏರಿಕೆ ಆಗುತ್ತಿದೆ. ಈಗ ವಿದ್ಯುತ್ ಸಹ ಹೆಚ್ಚಳ ಮಾಡಲಾಗಿದೆ. ಸರ್ಕಾರ ಭತ್ತಕ್ಕೆ ಹೆಚ್ಚುವರಿ ₹ 500 ಬೆಂಬಲ ಬೆಲೆ ಘೋಷಣೆ ಮಾಡಬೇಕು. 40 ಪೈಸೆ ವಿದ್ಯುತ್ ಶುಲ್ಕ ಹೆಚ್ಚಳ ಮಾಡಿದ್ದು, ಕೊರೊನಾ ವರ್ಷದಲ್ಲಿ ಜನರು ತುಂಬ ಸಂಕಷ್ಟ ಎದುರಿಸುತ್ತಿದ್ದಾರೆ.‌ ಕೂಡಲೇ ಶುಲ್ಕ ಇಳಿಕೆ ಮಾಡಬೇಕು ಎಂದು ಒತ್ತಾಯ ಮಾಡಿದರು.

ರೈತ ಬೆಲೆ ಇಲ್ಲದೆ ಕಂಗಾಲಾಗಿದ್ದಾನೆ. ಮುಖ್ಯಮಂತ್ರಿಗಳು ಮೊದಲು ರೈತರನ್ನು ಉಳಿಸಲು ಆಧ್ಯತೆ ನೀಡಲಿ, ಮೆಕ್ಕೆಜೋಳದ ಬೆಲೆಯೂ ಸಂಪೂರ್ಣ ಕುಸಿದಿದೆ. ಕೂಡಲೇ ಖರೀದಿ ಕೇಂದ್ರ ಆರಂಭ ಮಾಡಲಿ ಎಂದರು.

ಬಿಜೆಪಿ ಜಾತಿ ಜಾತಿಗಳನ್ನು ಕೂಡಿಸುವುದನ್ನು ಬಿಟ್ಟು ಒಡೆಯುವ ಕೆಲಸ ಮಾಡುತ್ತಿದೆ.‌ ಮರಾಠ ಅಭಿವೃದ್ಧಿ ನಿಗಮ‌ ಸ್ಥಾಪನೆ ಮಾಡಿದ್ದಾರೆ. ಹೀಗೆ ಜಾತಿಗೊಂದು ನಿಗಮ ಮಾಡಲು ಹೊರಟಿದ್ದಾರೆ. ರೈತರ ಬೆಳೆಗೆ ಬೆಂಬಲ ಬೆಲೆ ಸೇರಿ ನಿಗಮಗಳ ಕುರಿತಂತೆ ಸುದೀರ್ಘ ಚರ್ಚೆ ನಡೆಸಲು ನ.30 ರಂದು ಹಿರಿಯರ ಸಭೆ ಕರೆದಿದ್ದೇನೆ. ಸಭೆಯಲ್ಲಿ ಹಲವು ವಿಚಾರಗಳ ಕುರಿತು ಸುದೀರ್ಘ ಚರ್ಚೆ ನಡೆಯಲಿದೆ ಎಂದರು.

ಕಾಂಗ್ರೆಸ್‌ನಿಂದ‌ ಬಿಜೆಪಿಗೆ ಹೋಗುವವರು ಯಾರೂ ಇಲ್ಲ. ಬಿಜೆಪಿಯಿಂದಲೇ ಕಾಂಗ್ರೆಸ್‌ಗೆ ಬರ್ತಾರೆ ಎಂದರಲ್ಲದೆ, ಸರ್ಕಾರ ಶಾಲೆಗಳ ಆರಂಭದ ಕುರಿತು ಚರ್ಚೆ ನಡೆಸುತ್ತಿದೆ. ಅವರು ಏನು ನಿರ್ಧಾರ ಕೈಗೊಳ್ತಾರೋ ನೋಡೋಣ. ನಮ್ಮ ಅಭಿಪ್ರಾಯವನ್ನ ಅವರು ಕೇಳಿಲ್ಲ. ಈ ಹಿಂದೆ ಒಂದು ಬಾರಿ ನಮ್ಮ ಸಲಹೆ ಕೇಳಿದ್ದರು.‌ ಶಾಲೆ ಆರಂಭದ ಕುರಿತು ಸರ್ಕಾರದ ನಿರ್ಧಾರದ ಮೇಲೆ ನಾವು ತೀರ್ಮಾನ ಹೇಳುತ್ತೇವೆ ಎಂದರು.

ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸಣ್ಣ ಅಂತರದಿಂದ ಸೋತ ಬಸವನಗೌಡ ತುರ್ವಿಹಾಳ ಅವರನ್ನು ನಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಿದ್ದೇವೆ. ಎಲ್ಲರೂ ಚುನಾವಣಾ ತಯಾರಿ ನಡೆಸಲು ಸಿದ್ದರಾಗಿದ್ದಾರೆ ಎಂದರು.
ಈ ವೇಳೆ ಶಾಸಕರಾದ ಅಮರೆಗೌಡ ಬಯ್ಯಾಪುರ, ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ವಿ ಎಸ್ ಉಗ್ರಪ್ಪ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT