ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಕಾಮಗಾರಿ ಮಾಡಿ: ಶಾಸಕ ಬಸವರಾಜ ದಢೇಸುಗೂರ

Last Updated 13 ಜುಲೈ 2021, 6:38 IST
ಅಕ್ಷರ ಗಾತ್ರ

ಕಾರಟಗಿ: ಎಲ್ಲಾ ಗ್ರಾಮಗಳಲ್ಲಿ ಪ್ರತಿ ಮನೆಗೆ ನೀರೊದಗಿಸುವ ಮಹತ್ವದ ಉದ್ದೇಶದ ಜಲ ಜೀವನ ಮಿಷನ್‌ ಯೋಜನೆಯಾಗಿದೆ. ಆಯಾ ಗ್ರಾಮ ಪಂಚಾಯಿತಿಯವರು ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ಪಂಚಾಯಿತಿ ಅಧ್ಯಕ್ಷ ಹಾಗೂ ಅಭಿವೃದ್ಧಿ ಅಧಿಕಾರಿಗಳಲ್ಲದೇ ಜನರೂ ಗುಣಮಟ್ಟದ ಬಗ್ಗೆ ತೀವ್ರ ನಿಗಾ ವಹಿಸಬೇಕು. ಕಳಪೆಯಾದರೆ ಮೇಲಾಧಿಕಾರಿಗಳ ಅಥವಾ ತಮ್ಮ ಗಮನಕ್ಕೆ ತರಬೇಕು. ಯೋಜನೆಯ ಲಾಭ ಗ್ರಾಮೀಣ ಪ್ರದೇಶದ ಜನರಿಗೆ ತಲುಪಬೇಕು ಎಂದು ಶಾಸಕ ಬಸವರಾಜ ದಢೇಸುಗೂರ ಹೇಳಿದರು.

ಭಾನುವಾರ ವಿವಿಧ ಗ್ರಾಮಗಳಲ್ಲಿಯ ಜಲ ಜೀವನ ಮಿಷನ್‌ ಯೋಜನೆ ಕಾಮಗಾರಿಗಳಿಗೆ ಭಾನುವಾರ ಚಾಲನೆ ನೀಡಿ ನಾಗನಕಲ್‌ನಲ್ಲಿ ಮಾತನಾಡಿ, ಯೋಜನೆಯ ಯಶಸ್ವಿಗೆ ಜನಪ್ರತಿನಿಧಿಗಳು, ಜನರು ಸಹಕರಿಸಬೇಕು. ದೂರದೃಷ್ಟಿಯನ್ನಿಟ್ಟುಕೊಂಡು ಜಾರಿಗೊಳಿಸುತ್ತಿರುವ ಯೋಜನೆಯ ಯಶಸ್ವಿಗೆ ಸಮುದಾಯವು ಸಹಕರಿಸಬೇಕು ಎಂದರು.

ಒಟ್ಟು ₹24 ಕೋಟಿ ಮೊತ್ತದ ಜಲ ಜೀವನ ಮಿಷನ್‌ ಯೋಜನೆಯಡಿ ನಾಗನಕಲ್‌, ಚಳ್ಳೂರು, ಹುಳ್ಕಿಹಾಳ, ಯರಡೋಣ, ಉಳೇನೂರ, ಬೆನ್ನೂರ, ಬರಗೂರ, ಗುಂಡೂರು , ಶ್ರೀರಾಮನಗರ, ಹೊಸ್ಕೇರ, ಮರಳಿ, ಜಂಗಮರ ಕಲ್ಗುಡಿ, ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿಯ ಕಾಮಗಾರಿಗಳಿಗೆ ಶಾಸಕ ದಢೇಸುಗೂರ ಚಾಲನೆ ನೀಡಿದರು.

ಪ್ರಮುಖರಾದ ಬೀರೇಶ ಸಾಲೋಣಿ, ಬಿಲ್ಗಾರ ನಾಗರಾಜ್‌, ಚಂದ್ರಶೇಖರ ಮುಸಾಲಿ, ಶಿವಶರಣೇಗೌಡ, ನಾಗರಾಜ್‌ ಸಜ್ಜನ್‌, ಗುರಪ್ಪ ನಾಗನಕಲ್‌, ಗುರುಸಿದ್ದಪ್ಪ ಎರಕಲ್‌, ಜಿ. ತಿಮ್ಮನಗೌಡ, ಚನ್ನಬಸವ ಸುಂಕದ, ರುದ್ರಗೌಡ ನಂದಿಹಳ್ಳಿ, ಅಮರೇಶ ಕುಳಗಿ, ಪಂಪನಗೌಡ ಜಂತಗಲ್‌, ಜಿ. ಸುರೇಶ, ಶರಣಪ್ಪ ಸಾಹುಕಾರ, ಬಿ. ಕಾಶಿವಿಶ್ವನಾಥ, ನಿರುಪಾದಿ ಮಕಾಸಿ, ಶ್ರೀಶೈಲಗೌಡ, ಸೋಮಶೇಖರಗೌಡ ಮುಸ್ಟೂರ, ಅರಳಿ ನಾಗರಾಜ್‌, ದುರ್ಗಾರಾವ್‌, ಅಧಿಕಾರಿಗಳಾದ ಸತೀಶ, ಚಂದ್ರಶೇಖರ, ನರಸಪ್ಪ, ವಿವಿಧ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT