ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅರ್ಜಿ ಸಲ್ಲಿಸಿದ ಎಲ್ಲರಿಗೂ ಕೂಲಿ ಕೆಲಸ ನೀಡಿ’

Last Updated 18 ಜೂನ್ 2020, 11:42 IST
ಅಕ್ಷರ ಗಾತ್ರ

ಕೊಪ್ಪಳ: ತಾಲ್ಲೂಕಿನ ಕವಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ನಡೆಯುತ್ತಿರುವ ಕಂದಕ, ಬದು ನಿರ್ಮಾಣ ಅನುಷ್ಠಾನ ಕಾಮಗಾರಿಗಳ ಸ್ಥಳಕ್ಕೆ ಬುಧವಾರ ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತ ಅನಿರುದ್ಧ್‌ ಶ್ರವಣ್ ಭೇಟಿ ನೀಡಿ, ಪರಿಶೀಲಿಸಿದರು.

ಬದು ನಿರ್ಮಾಣ ಮಾಸಾಚರಣೆ ಮುಕ್ತಾಯವಾಗಲಿದ್ದು, ಸದ್ಯದಲ್ಲಿ ಬದು ಬೇಸಾಯ ಮಾಸಾಚರಣೆ ಆರಂಭವಾಗುವುದರಿಂದ ಬದು ನಿರ್ಮಿಸಿಕೊಂಡ ಎಲ್ಲಾ ರೈತರು ಅದರ ಸುತ್ತ ವಿವಿಧ ಬಗೆಯ ಸಸಿಗಳನ್ನು ನೆಡುವ ಕಾರ್ಯಕ್ರಮ ಪ್ರಾರಂಭಿಸಬೇಕು ಎಂದು ಹೇಳಿದರು.

ಪ್ರತಿ ಕುಟುಂಬವು ನೂರು ದಿನಗಳ ಉದ್ಯೋಗ ಪಡೆದು ಆರ್ಥಿಕ ಸಬಲರಾಗಬೇಕು. ನರೇಗಾ ಯೋಜನೆಯಡಿ ಕೂಲಿ ಬಯಸಿ ಅರ್ಜಿ ಸಲ್ಲಿಸಿದವರಿಗೆ ಕಡ್ಡಾಯವಾಗಿ ಕೂಲಿ ಕೆಲಸ ನೀಡತಕ್ಕದ್ದು ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೂಲಿಕಾರರ ನಮೂನೆ-6 ಕಾಯಕ ಬಂದುಗಳ ಮೂಲಕ ಅರ್ಜಿ ಸಲ್ಲಿಸುವುದು ಮತ್ತು ಹೊಸದಾಗಿ ಜಾಬ್ ಕಾರ್ಡ್ ಪಡೆಯುವುದು ಕೂಲಿ ಹಣ ಪಾವತಿಸಿದ ಬಗ್ಗೆ, ತಾಂತ್ರಿಕ ಮಾಹಿತಿಯನ್ನು ಪಡೆಯುವುದು ಹಾಗೂ ಕೂಲಿ ಬಯಸಿ ಅರ್ಜಿ ಸಲ್ಲಿಸುವ ಕೂಲಿಗಾರರಿಗೆ ಅನುಕೂಲವಾಗಲು ಕಾಯಕ ಮಿತ್ರ ಆ್ಯಪ್ ಮೂಲಕ ಅವಕಾಶ ಕಲ್ಪಿಸಲಾಗಿದೆ. ದೂರುಗಳಿಗಾಗಿ ಟೋಲ್ ಫ್ರೀ ಸಂ: 1800-425-8666 ಗೆ ಸಂಪರ್ಕಿಸಿ ದೂರುಗಳನ್ನು ಸಲ್ಲಿಸಬಹುದು ಎಂದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶರಣಬಸವರಾಜ, ಕೃಷಿ ಇಲಾಖೆ ಉಪನಿರ್ದೇಶಕ ಸಿದ್ದೇಶ್ವರ, ಪ್ರವೀಣ್, ಕೃಷ್ಣ ಉಕ್ಕುಂದ, ಟಿ.ವೆಂಕೋಬಪ್ಪ, ಶರಣಯ್ಯ ಸಸಿಮಠ, ಮಂಜುನಾಥ ಕನ್ನಾರಿ, ರಾಜೇಶ್ ಗಂಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT