ಮುನಿರಾಬಾದ್: ಕೊಪ್ಪಳದ ಸಮಾನಮನಸ್ಕ ಶಿಕ್ಷಕರ ತಂಡ ‘ಕಲರವ’ ಎಂಬ ಸಂಘಟನೆ, ಸಮೀಪದ ಮಹಮ್ಮದ್ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣ ಸ್ವಚ್ಛಗೊಳಿಸುವ ಜೊತೆಗೆ ಶಾಲಾ ಕಟ್ಟಡಕ್ಕೆ ಬಣ್ಣ ಹಚ್ಚಿದ್ದಾರೆ.

ಕಲರವ ಶಿಕ್ಷಕರ ಸೇವಾ ಬಳಗದ ವತಿಯಿಂದ ಈ ತಿಂಗಳ ಸೇವಾ ಕಾರ್ಯವನ್ನು ತಾಲ್ಲೂಕಿನ ಕೊನೆಯ ಹಳ್ಳಿಯಾದ ಮಹ್ಮದ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಆಯ್ಕೆ ಮಾಡಿಕೊಂಡು ಆ ಶಾಲೆಯನ್ನು ಸ್ವಚ್ಛಗೊಳಿಸುವ ಜೊತೆಗೆ ಸುಣ್ಣ ಹಾಗೂ ಬಣ್ಣ ಹಚ್ಚುವ ಕಾಯಕದಲ್ಲಿ ಕಲರವ ತಂಡದ ಎಲ್ಲಾ ಸದಸ್ಯರು ನಿರತರಾಗಿದ್ದರು.

ಕೊಪ್ಪಳದ ಸಮಾನ ಮನಸ್ಕ ಶಿಕ್ಷಕರು ಸೇರಿಕೊಂಡು ಶೈಕ್ಷಣಿಕ ಸೇವೆ ಮಾಡಬೇಕು ಎಂಬ ಉದ್ದೇಶದಿಂದ ‘ಕಲರವ’ ಶಿಕ್ಷಕರ ಸೇವಾ ಬಳಗ ಎಂಬ ತಂಡ ಮಾಡಿಕೊಂಡು ಪ್ರತಿ ತಿಂಗಳು ಒಂದು ಸರ್ಕಾರಿ ಶಾಲೆಯನ್ನು ಆಯ್ಕೆ ಮಾಡಿಕೊಂಡು ಆ ಶಾಲೆಯನ್ನು ಸ್ವಚ್ಛ ಮಾಡುವುದರ ಜೊತೆಗೆ ಆ ಶಾಲೆಯ ಅಂದಚಂದ ಹೆಚ್ಚು ಮಾಡುವ ಕಾರ್ಯ ಮಾಡುತ್ತಿದೆ. ಅಲ್ಲದೇ ಇದಕ್ಕೆ ತಗುಲುವ ವೆಚ್ಚವನ್ನು ಶಿಕ್ಷಕರೇ ತಮ್ಮ ವೇತನದಲ್ಲಿ ಭರಿಸುತ್ತಾರೆ. ಈಗಾಗಲೇ ತಾಲ್ಲೂಕಿನ 30 ಶಾಲೆಗಳಿಗೆ ಈ ತಂಡ ಸೇವೆ ಸಲ್ಲಿಸಿದೆ. ಮಹ್ಮದ್ ನಗರ ಶಾಲೆಯು 31ನೇ ಶಾಲೆಯಾಗಿದೆ. ಬೆಳಿಗ್ಗೆಯಿಂದ ಸಂಜೆಯ ಹೊತ್ತಿಗೆ ಶಾಲೆಯ ಚಿತ್ರಣ ಬದಲಾಗುತ್ತದೆ. ಕಲರವ ಶಿಕ್ಷಕರ ಕಾರ್ಯಕ್ಕೆ ಅನೇಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ತಂಡದಲ್ಲಿ ಬೀರಪ್ಪ ಆಂಡಗಿ ಚಿಲವಾಡಗಿ, ಅಣ್ಣಪ್ಪ ಹಳ್ಳಿ, ಮರ್ದಾನಪ್ಪ ಬೆಲ್ಲದ, ಹನುಮಂತಪ್ಪ ಕುರಿ, ಶರಣಪ್ಪ ರಡ್ಡೇರ, ಹುಲುಗಪ್ಪ ಭಜಂತ್ರಿ, ಮಲ್ಲಪ್ಪ ಗುಡದನ್ನವರ, ವೀರೇಶ ಕೌಟಿ, ಗುರುಸ್ವಾಮಿ.ಆರ್., ಸುರೇಶ ಕಂಬಳಿ, ಕಾಶಿನಾಥ ಸಿರಿಗೇರಿ, ಚಂದ್ರು ಯಳವರ್ ಪಾಲ್ಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.