ಕನಕಗಿರಿ: ವಿವಿಧ ಗ್ರಾಮದ ವಿದ್ಯಾರ್ಥಿಗಳು ಬಸ್ ಸಂಚಾರದ ಕೊರತೆ ವಿರುದ್ದ ಬುಧವಾರ ಪ್ರತಿಭಟಿಸಿದರು.

ವಿದ್ಯಾರ್ಥಿಗಳಾದ ರಮೇಶ, ನಂದಿನಿ ಮಾತನಾಡಿ ‘ಗೌರಿಪುರ, ಗಾಣದಾಳ, ಬಸರಿಹಾಳ ಹಾಗೂ ದೇವಲಾಪುರದಿಂದ ಬರುವ ವಿದ್ಯಾರ್ಥಿಗಳಿಗೆ ಸಮರ್ಪಕವಾದ ಬಸ್ ಸೌಲಭ್ಯಗಳು ಇಲ್ಲ. ಬೆಳಿಗ್ಗೆ 7.45ಕ್ಕೆ ದೇವಲಾಪುರ ಬಿಡಬೇಕಾಗಿದ್ದ ಬಸ್ ಬಹುಬೇಗನೆ ಕನಕಗಿರಿಗೆ ಬರುತ್ತದೆ. ಪರೀಕ್ಷೆ ಸಮಯದಲ್ಲಿ ಆಟೋ ಬಾಡಿಗೆ ಮಾಡಿಕೊಂಡು ಕಾಲೇಜಿಗೆ ಬಂದು ಪರೀಕ್ಷೆ ಬರೆಯಲಾಗಿದೆ’ ಎಂದು ಅಳಲು ತೋಡಿಕೊಂಡರು.

‘ಈ ರಸ್ತೆಯಲ್ಲಿ ಓಡಾಡುತ್ತಿದ್ದ ಕುಷ್ಟಗಿ ಡಿಪೋದ ಬಸ್ ಬಾರದೆ ನಾಲ್ಕು ದಿನಗಳಾಗಿದ್ದು ಪರೀಕ್ಷೆಯ ಸಮಯವಾಗಿದ್ದರಿಂದ ಬಸ್ಗಾಗಿ ರೋಸಿಹೋಗಿದ್ದೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಂಗಾವತಿ, ಕುಷ್ಡಗಿ, ಯಲಬುರ್ಗಾ ಡಿಪೋದ ಬಸ್ಗಳು ಸರಿಯಾದ ಸಮಯಕ್ಕೆ ಬಂದರೆ ಏನು ಸಮಸ್ಯೆ ಆಗುವುದಿಲ್ಲ. ಇಲ್ಲದಿದ್ದರೆ ತರಗತಿ, ಪರೀಕ್ಷೆ, ಲ್ಯಾಬ್, ಗ್ರಂಥಾಲಯ ಇತರೆ ಸೌಲಭ್ಯಗಳಿಂದ ವಂಚಿತ ರಾಗಬೇಕಾಗುತ್ತದೆ ಎಂದು ಅವರು ವಿವರಿಸಿದರು.

ಎಸ್ಎಫ್ಐ ಜಿಲ್ಲಾಧ್ಯಕ್ಷ ಶಿವಕುಮಾರ ಈಚನಾಳ ಮಾತನಾಡಿ, ‘ಸರ್ಕಾರ ಬಸ್ ಸೌಲಭ್ಯ ಒದಗಿಸಿ ಶೈಕ್ಷಣಿಕ ಗುಣಮಟ್ಟ ಹೆಚ್ವಳಕ್ಕೆ ಒತ್ತು ನೀಡಬೇಕು ಎಂದು ಆಗ್ರಹಿಸಿದರು.

ಎಸ್ಎಫ್ಐ ತಾಲ್ಲೂಕು ಅಧ್ಯಕ್ಷ ಹನುಮೇಶ ಮ್ಯಾಗಡೆ, ವಿದ್ಯಾರ್ಥಿ ಅಶ್ವಿನಿ, ದ್ಯಾಮಮ್ಮ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.