ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಗಿರಿ | ಪುರಾತತ್ವ ಇಲಾಖೆ ಅಧಿಕಾರಿಗಳಿಂದ ಪುಷ್ಕರಣಿಗಳ ವೀಕ್ಷಣೆ

Published 15 ಮೇ 2024, 16:17 IST
Last Updated 15 ಮೇ 2024, 16:17 IST
ಅಕ್ಷರ ಗಾತ್ರ

ಕನಕಗಿರಿ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿರುವ ಐತಿಹಾಸಿಕ ಪುಷ್ಕರಣಿಗಳ ಸ್ಥಳಕ್ಕೆ ಬುಧವಾರ ರಾಜ್ಯ ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಹಂಪಿ ಉಪ ನಿರ್ದೇಶಕ ಆರ್.ಶೇಜೇಶ್ವರ ಭೇಟಿ ನೀಡಿ ವೀಕ್ಷಣೆ ಮಾಡಿದರು.

ಸಮೀಪದ ಸೋಮಸಾಗರ ಗ್ರಾಮದ ರೈತರ ಭೂಮಿಯಲ್ಲಿರುವ ಪುಷ್ಕರಣಿ ಭೇಟಿ ನೀಡಿ ಅಧ್ಯಯನ ನಡೆಸಿದರು. ಪುಷ್ಕರಣಿ ಸುತ್ತಲೂ ಭೇಟಿ ನೀಡಿ, ಅಲ್ಲಿರುವ ಕೆತ್ತನೆಯ ಚಿತ್ರಗಳನ್ನು ಸೆರೆ ಹಿಡಿದು ಮಾಹಿತಿ ಪಡೆದರು.

ಬಸರಿಹಾಳ ಗ್ರಾಮದ ರೈತರ ಪುಷ್ಕರಣಿ ಹಾಗೂ ಹುಲಿಹೈದರ ಗ್ರಾಮದಲ್ಲಿ ವಿವಿಧ ಪುಷ್ಕರಣಿಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿದರು.

ತಹಶೀಲ್ದಾರ್ ವಿಶ್ವನಾಥ ಮುರುಡಿ ಮಾತನಾಡಿ, ‘ತಾಲ್ಲೂಕಿನಲ್ಲಿರುವ ಎಲ್ಲಾ ಪುಷ್ಕರಣಿಗಳ ಮಾಹಿತಿಯನ್ನು ಕಲೆಹಾಕಿ ಸರ್ಕಾರದಿಂದ ಅದಿಸೂಚನೆ ಮಾಡಿಸಿ ಸಂರಕ್ಷಿಸಲಾಗುವುದು’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಲ್.ವಿರೇಂದ್ರಕುಮಾರ, ಸಹಾಯಕ ನಿರ್ದೇಶಕ ಚಂದ್ರಶೇಖರ ಕಂದಕೂರ, ಪುರಾತತ್ವ ಸಹಾಯಕ ಡಾ.ಮಂಜನಾಯ್ಕ, ಪಿಡಿಒ ಬಸವರಾಜ ಸಂಕನೂರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT