ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಗಿರಿಯಲ್ಲಿ ಉತ್ಸವದ ಸಂಭ್ರಮ: ದೀಪಗಳಿಂದ ಝಗಮಗಿಸುತ್ತಿರುವ ‘ಸುವರ್ಣಗಿರಿ’

Published 2 ಮಾರ್ಚ್ 2024, 5:49 IST
Last Updated 2 ಮಾರ್ಚ್ 2024, 5:49 IST
ಅಕ್ಷರ ಗಾತ್ರ

ಕನಕಗಿರಿ: ಕನಕಾಚಲಪತಿ ದೇವಸ್ಥಾನ, ಬಾವಿ ಹಾಗೂ ಐತಿಹಾಸಿಕ ಕಾರಣದಿಂದಾಗಿ ಖ್ಯಾತಿ ಹೊಂದಿರುವ ಕನಕಗಿರಿಯಲ್ಲಿ ಈಗ ಉತ್ಸವದ ಸಂಭ್ರಮ. ಎಲ್ಲಿ ನೋಡಿದರೂ ವಿದ್ಯುತ್‌ ದೀಪಗಳ ಹೊಳಪು, ಬ್ಯಾನರ್‌ಗಳು ರಾರಾಜಿಸುತ್ತಿವೆ.

ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಉತ್ಸವ ನಡೆಯಲಿದ್ದು ಇದಕ್ಕಾಗಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ರಸ್ತೆಗಳಿಗೆ ಡಾಂಬರೀಕರಣ, ಪಟ್ಟಣದಲ್ಲಿ ವಿದ್ಯುತ್‌ ದೀಪಗಳನ್ನು ಅಳವಡಿಸುವುದು, ಕನಕಾಚಲಪತಿ ದೇವಸ್ಥಾನಕ್ಕೆ ಕಣ್ಣು ಕೊರೈಸುವ ಅಲಂಕಾರ, ಓಟದ ಸಂಭ್ರಮ, ಕ್ರೀಡಾಕೂಟಗಳು ಹೀಗೆ ಎಲ್ಲೆಡೆಯೂ ಸಡಗರ ಕಂಡು ಬರುತ್ತಿದೆ. ಮೂರು ದಿನಗಳ ಹಿಂದೆ ಆರಂಭವಾಗಿರುವ ಕ್ರೀಡಾಕೂಟಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸ್ಪರ್ಧಿಗಳು ತಮ್ಮ ಸಾಮರ್ಥ್ಯ ತೋರಿಸಿದ್ದಾರೆ.

ಕೊಪ್ಪಳ, ಗಂಗಾವತಿ ಹಾಗೂ ಕಾರಟಗಿ ಭಾಗದಿಂದ ಕನಕಗಿರಿ ಪಟ್ಟಣಕ್ಕೆ ಬರುವ ಮಾರ್ಗದುದ್ದಕ್ಕೂ ಬ್ಯಾನರ್‌ಗಳು ರಾರಾಜಿಸುತ್ತಿವೆ. ಹಿಂದೆ ಶಿವರಾಜ ತಂಗಡಗಿ ಅಧಿಕಾರದಲ್ಲಿದ್ದಾಗ 2010ರಲ್ಲಿ, 2013 ಹಾಗೂ 2015ರಲ್ಲಿ ಉತ್ಸವ ನಡೆದಿತ್ತು. ಬಳಿಕ ಉತ್ಸವ ನಡೆಸಬೇಕು ಎನ್ನುವ ಬೇಡಿಕೆ ಅನೇಕ ಬಾರಿ ಕೇಳಿ ಬಂದಿದ್ದರೂ ಕಾರ್ಯಕ್ರಮ ನಡೆದಿರಲಿಲ್ಲ. ಈಗ ಮತ್ತೆ ಉತ್ಸವ ನಡೆಯುತ್ತಿರುವ ಇಲ್ಲಿನ ಜನರ ಖುಷಿಗೆ ಕಾರಣವಾಗಿದೆ.

ತರಹೇವಾರಿ ಕಾರ್ಯಕ್ರಮ: ಉತ್ಸವವನ್ನು ಯಶಸ್ವಿಯಾಗಿ ನಡೆಸಲು ಜಿಲ್ಲಾಡಳಿತ ಒಂದು ತಿಂಗಳಿನಿಂದ ಸರಣಿ ಸಭೆಗಳನ್ನು ಮಾಡಿಕೊಂಡು ಸಿದ್ಧತೆ ಮಾಡಿಕೊಂಡಿದೆ. ಶನಿವಾರ ಬೆಳಿಗ್ಗೆ 9 ಗಂಟೆಗೆ ಎದುರು ಹನುಮಪ್ಪ ದೇವಸ್ಥಾನದಿಂದ ರಾಜಬೀದಿ ಮೂಲಕ ಕನಕಾಚಲಪತಿ ದೇವಸ್ಥಾನದ ತನಕ ಮೆರವಣಿಗೆ ನಡೆಯಲಿದ್ದು, ಹಲವು ಕಲಾ ತಂಡಗಳು ಪಾಲ್ಗೊಳ್ಳಲಿವೆ.

ಈ ಮೆರವಣಿಗೆ ಕಾರ್ಯಕ್ಕೆ ತಂಗಡಗಿ ಚಾಲನೆ ನೀಡಲಿದ್ದು ಎಪಿಎಂಸಿ ಸಮುದಾಯ ಭವನದ ಹಿಂಭಾಗದಲ್ಲಿರುವ ರಾಜಾ ಉಡಚಪ್ಪ ನಾಯಕ ವೇದಿಕೆಯಲ್ಲಿ ನಡೆಯಲಿರುವ ಭವ್ಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಅನೇಕು ಜನಪ್ರತಿನಿಧಿಗಳು ಹಾಗೂ ತಾರೆಯರು ಪಾಲ್ಗೊಳ್ಳುವರು.

ಮುಖ್ಯ ವೇದಿಕೆಯಲ್ಲಿಯೇ ಭರತನಾಟ್ಯ, ಕ್ಲಾರಿಯೋನೆಟ್‌ ವಾದನ, ಶಾಸ್ತ್ರೀಯ ಸಂಗೀತ, ವಚನ ಸಂಗೀತ, ಭರತನಾಟ್ಯ, ಸಮೂಹ ನೃತ್ಯ, ಸುಗಮ ಸಂಗೀತ, ಜಾನಪದ ಸಂಗೀತ ಹೀಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಸಂಜೆ 6.30ಕ್ಕೆ ಉದ್ಘಾಟನಾ ಸಮಾರಂಭ

ಮುಖ್ಯ ವೇದಿಕೆಯಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭ ಶನಿವಾರ ಸಂಜೆ 6.30ಕ್ಕೆ ನಡೆಯಲಿದೆ.  ಇದೇ ವೇಳೆ ಇಮಾಮ್‌ ಸಾಹೇಬ್‌ ಹಡಗಲಿ ಅವರು ಕನಕಗಿರಿ ಸೀಮೆಯ ಸ್ಥಳನಾಮಗಳು ಮತ್ತು ಡ್ರೋನ್‌ ಮೂಲಕ ಪುನೀತ್‌ ರಾಜಕುಮಾರ್‌ ಅವರ ಕುರಿತು ಎಐ ಪ್ರದರ್ಶನದ ಡ್ರೋನ್‌ ಮೂಲಕ ಲೈಟಿಂಗ್ ಪ್ರದರ್ಶನ ನಡೆಯಲಿದ್ದು ಇದು ಪ್ರಮುಖ ಆಕರ್ಷಣೆಯಾಗಲಿದೆ. ಕನಕಾಚಲಪತಿ ದೇವಸ್ಥಾನ ಹತ್ತಿರದಲ್ಲಿ ಡಾ. ಪಂಡಿತ್‌ ಪುಟ್ಟರಾಜ ಗವಾಯಿಗಳ ವೇದಿಕೆ ನಿರ್ಮಿಸಲಾಗಿದ್ದು ಎಲ್ಲಿ ವಿಚಾರಗೋಷ್ಠಿ ಮಹಿಳಾ ವಿಚಾರಗೋಷ್ಠಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಯಾಗಿರುವ. ಶನಿವಾರ ಸಂಜೆ 6.30ಕ್ಕೆ ಸಮಾರೋಪ ಜರುಗಲಿದೆ.

ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಕನಕಗಿರಿಯ ದ್ವಾರಬಾಗಿಲು
ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಕನಕಗಿರಿಯ ದ್ವಾರಬಾಗಿಲು
ಕನಕಗರಿ ಉತ್ಸವ ಲಾಂಛನ
ಕನಕಗರಿ ಉತ್ಸವ ಲಾಂಛನ
ಕನಕಗಿರಿ ವೆಂಕಟಾಚಲಪತಿ ಬಾವಿಗೆ ಮಾಡಿರುವ ವಿದ್ಯುತ್‌ ಅಲಂಕಾರ
ಕನಕಗಿರಿ ವೆಂಕಟಾಚಲಪತಿ ಬಾವಿಗೆ ಮಾಡಿರುವ ವಿದ್ಯುತ್‌ ಅಲಂಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT