ತಾವರಗೇರಾ: ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶನಾಲಯ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ಒಟ್ಟು 824 ವಸತಿ ಶಾಲೆಗಳಿವೆ ಎಂದು ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಇಲ್ಲಿಗೆ ಸಮೀಪದ ಮೆಣೇಧಾಳ ಗ್ರಾಮದ ಹೊರ ವಲಯದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಗಳಿಗೆ ಶಂಕುಸ್ಥಾಪನೆ ಮತ್ತು ನಾಮಫಲಕ ಅನಾವರಣ ಮಾಡಿ ಮಾತನಾಡುತ್ತಿದರು.

ಮೊರಾರ್ಜಿ ವಸತಿ ಶಾಲೆ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ, ಕಿತ್ತೂರರಾಣಿ ಚನ್ನಮ್ಮ ವಸತಿ ಶಾಲೆ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಮತ್ತು ಆಶ್ರಮ ಶಾಲೆಗಳಿದ್ದು, ಇವುಗಳಲ್ಲಿ 639 ಹಾಸ್ಟೆಲ್‌ಗಳಿದ್ದು, ಒಟ್ಟು ನಾಲ್ಕು ಲಕ್ಷ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ ಎಂದರು.

ಬಡ ಮಕ್ಕಳಿಗಾಗಿ ಉತ್ತಮ ಶಿಕ್ಷಣ ನೀಡಲು ಇನ್ನೂ ಹೆಚ್ಚಿನ ವಸತಿ ಶಾಲೆಗಳನ್ನು ಆರಂಭಿಸಲು ಯೋಜನೆ ಮಾಡಲಾಗಿದೆ. ಬಡ ಹೆಣ್ಣು ಮಕ್ಕಳಿಗಾಗಿ ರಾಜ್ಯದಲ್ಲಿ 5 ವಸತಿ ಪದವಿ ಕಾಲೇಜುಗಳನ್ನು ಆರಂಭಿಸಲಾಗುತ್ತದೆ. ಇವುಗಳನ್ನು ರಾಜ್ಯದ 5 ವಿಭಾಗಗಳಿಗೆ ತಲಾ ಒಂದರಂತೆ ನೀಡಲಾಗುವುದು ಎಂದು ಹೇಳಿದರು.

ಕೇಂದ್ರ ಸರ್ಕಾರವು ವಿವಿಧ ಅಭಿವೃದ್ಧಿಗೆ ಕೌಶಲ ತರಬೇತಿಗಳಿಗೆ ₹3,0445 ಕೋಟಿ ನಿಗದಿಪಡಿಸಿದೆ. ಬಡ ರೈತರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ವಿವಿಧ ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದರು. ತೊಗರಿ ಖರೀದಿ ಕೇಂದ್ರವನ್ನು ಪ್ರಾರಂಭಿಸಲು ಶೀಘ್ರದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಕೇಂದ್ರ ಸರ್ಕಾರದಿಂದ ಕ್ವಿಂಟಲ್‌ಗೆ ₹5,800 ಅದರಲ್ಲಿ ರಾಜ್ಯ ಸರ್ಕಾರದ ₹300 ಇರುತ್ತದೆ. ಕೃಷ್ಣಾ ಬಿಸ್ಕಿಂ ತಮ್ಮ ಸರ್ಕಾರದ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಸಂಸದ ಸಂಗಣ್ಣ ಕರಡಿ, ಜಿಪಂ ಸದಸ್ಯ ಕೆ ಮಹೇಶ, ಮಾತನಾಡಿದರು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಇಲಾಖೆಯ ಉಪ ನಿರ್ದೇಶಕರಾದ ಜೆ ರಾಜು ಮಾತನಾಡಿ,‘₹4 ಕೋಟಿ 50 ಲಕ್ಷ ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ನಿರ್ಮಾಣವಾಗಲಿದೆ. ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ₹4 ಕೋಟಿ, ₹81 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಕುಷ್ಟಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ತಿಮ್ಮಪ್ಪ, ಕುಷ್ಟಗಿ ತಹಶೀಲ್ದಾರ್ ಎಂ ಸಿದ್ದೇಶ, ಮೆಣೇಧಾಳ ಜಿಪಂ ಸದಸ್ಯ ಹನಮಗೌಡ ಪೊಲೀಸ್ ಪಾಟೀಲ್, ಕುಷ್ಟಗಿ ತಾಪಂ ಅಧ್ಯಕ್ಷೆ ಮಹಾಂತಮ್ಮ ಪೂಜಾರ, ತಾಪಂ ಉಪಾಧ್ಯಕ್ಷೆ ವಿಶಾಲಾಕ್ಷಿ, ಮೆಣೇಧಾಳ ತಾಪಂ ಸದಸ್ಯೆ ಶಾರದಮ್ಮ ಹವಾಲ್ದಾರ, ಮೆಣೇಧಾಳ ಗ್ರಾಪಂ ಅಧ್ಯಕ್ಷೆ ನಾಗಮ್ಮ ಬುಡಕುಂಟಿ, ಕೊಪ್ಪಳ ಜಿಲ್ಲಾ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕರಾದ ದೇವಲ್ ನಾಯಕ್, ಮೆಣೇಧಾಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಸೌಭಾಗ್ಯ, ಜಿಪಂ ಮಾಜಿ ಅಧ್ಯಕ್ಷ ಮಾಲತಿ ನಾಯಕ, ಮಾಜಿ ಸದಸ್ಯ ಫಕೀರಪ್ಪ ಚಳಗೇರಿ, ದೊಡ್ಡಯ್ಯ ಗದ್ದಡಕಿ, ಶಿವಶಂಕರಗೌಡ ಕಡೂರ, ಉದ್ಯಮಿ ಬಸನಗೌಡ ಪಾಟೀಲ, ನಾರಾಯಣಗೌಡ ಮೆದಿಕೇರಿ, ದುರಗೇಶ ನಾರಿನಾಳ, ಲಿಂಗರಾಜ ಹಂಚಿನಾಳ, ವೀರಯ್ಯಸ್ವಾಮಿ ಬೊಮ್ಮನಾಳ ಇದ್ದರು.

ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಮಾತನಾಡಿದರು.

ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಕುಷ್ಟಗಿ ತಾಲುಕಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗ್ಯಾನನಗೌಡ ಸ್ವಾಗತಿಸಿದರು. ಶಿಕ್ಷಕ ಜೀವನ್ ಸಾಬ ಬಿನ್ನಾಳ ನಿರೂಪಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.