ಭಾನುವಾರ, ಆಗಸ್ಟ್ 1, 2021
26 °C

ವೈದ್ಯರ ಕರ್ತವ್ಯದ ಮಹತ್ವ ತಿಳಿಯಿತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನುಮಸಾಗರ: ಕೊರೊನಾದಿಂದ ಎಷ್ಟೆಲ್ಲ ನೋವು ಅನುಭವಿಸಿದೆವು ಎಂಬುದಕ್ಕಿಂತ ಕೊರೊನಾದಿಂದ ವೈದ್ಯರ ಕರ್ತವ್ಯದ ಮಹತ್ವ ಎಷ್ಟಿದೆ ಎಂಬುದು ಪೂರ್ಣ ಅರ್ಥವಾಯಿತು.

ನಾನು ಮದುವೆಯಾಗಿ ಈಗ ಐದು ತಿಂಗಳಾಗಿದೆ ಅಷ್ಟೆ.  ಕೆಲ ದಿನ ರಜೆ ಹಾಕು ಎಂದು ಮನೆಯಲ್ಲಿ ಒತ್ತಾಯಿಸಿದ್ದರು. ಏನೇ ಆಗಲಿ ನೋಡೋಣ ಎಂದು ಬಂದಿದ್ದೆ. ಬರೋಬ್ಬರಿ ಮೂರು ತಿಂಗಳಾಯಿತು ಮನೆಗೆ ಹೋಗಿಲ್ಲ. ಕುಟುಂಬದವರ ದರ್ಶನ ಮಾಡಿಲ್ಲ. ಏನಿದ್ದರೂ ಫೋನ್ ಕಾಲ್, ವಿಡಿಯೊ ಕಾಲ್‍ನಲ್ಲಿಯೇ ಭೇಟಿ.

ಇಲ್ಲಿಯವರೆಗೆ 2500ಕ್ಕೂ ಹೆಚ್ಚು ಜನರನ್ನು ಆರೋಗ್ಯ ತಪಾಸಣೆ ಮಾಡಿದ್ದೇವೆ. ಯಾವೂ ಪೊಸಿಟಿವ್ ಬಂದಿಲ್ಲ. ಆರಂಭದಲ್ಲಿ ಜನರಿಗೆ ಕೊರೊನಾ ಭಯ ಬಿಡಿಸುವುದೇ ನಮಗೆ ಸವಾಲು ಆಯಿತು. ರಾತ್ರಿ ಹಗಲು ಎನ್ನದೆ ಬರುವ ಅಧಿಕಾರಿಗಳ, ಸಾರ್ವಜನಿಕರ ಕರೆಗಳನ್ನು ಅಟೆಂಡ್ ಮಾಡಿ ಸುಸ್ತಾಗುತ್ತಿದ್ದೆವು.

ರಾತ್ರಿ ಪೂರ್ಣ ಪ್ರಮಾಣದಲ್ಲಿ ಊಟ ಮಾಡಿದರೆ ನಿದ್ರೆ ಬರುತ್ತದೆ ಎಂದು ಕೇವಲ ಹಣ್ಣು, ಹಾಲು ಸೇವಿಸಿ ಇರುತ್ತಿದ್ದೆವು.
ಡ್ಯೂಟಿ ಮುಗಿಸಿಕೊಂಡು ಮನೆಗೆ ಹೋಗಿ ಸ್ನಾನ ಮಾಡಿ, ಬಟ್ಟೆ ಬದಲಾಯಿಸಿದ ಮರು ಕ್ಷಣದಲ್ಲಿಯೇ ಆಸ್ಪತ್ರೆಗೆ ಬಂದ ಉದಾಹರಣೆಗಳಿವೆ. ಮನೆಗೆ ಹೋಗುವುದೇ ಬೇಡ ಎಂದು ಬಹುತೇಕ ಸಮಯ ಆಸ್ಪತ್ರೆಯಲ್ಲಿಯೇ ಇರುತ್ತಿದ್ದೆವು.

-ಡಾ.ವಿನಾಯಕ ಪಟ್ಟಣಶೆಟ್ಟಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಹನುಮಸಾಗರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.