ಸೋಮವಾರ, ಜೂನ್ 14, 2021
26 °C

ಕೊಪ್ಪಳ | ಅಕ್ರಮವಾಗಿ ರೆಮ್‌ಡಿಸಿವಿರ್‌ ಚುಚ್ಚುಮದ್ದು ಸಂಗ್ರಹ: ಅಧಿಕಾರಿಗಳ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಜಿಲ್ಲೆಯ ಗಂಗಾವತಿ ನಗರದ ಎರಡು ಖಾಸಾಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಬಳಸುವ ರೆಮ್ ಡಿಸಿವರ್ ಚುಚ್ಚು ಮದ್ದು ಅಕ್ರಮವಾಗಿ ಸಂಗ್ರಹಿಸಿ ಬಳಕೆ ಮಾಡಲಾಗುತ್ತಿದೆ ಎನ್ನುವ ದೂರಿನ ಮೇಲೆ ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ನೇತೃತ್ವದ ತಂಡ ಶುಕ್ರವಾರ ರಾತ್ರಿ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿದೆ. 

ಕಂಪ್ಲಿ ರಸ್ತೆಯಲ್ಲಿರುವ ಸಿಟಿ ಕ್ಲಿನಿಕ್ ಗೆ ದಾಖಲಾದ ಕೋವಿಡ್ ರೋಗಿಯನ್ನು ಪಕ್ಕದ ನಿಶಾ ವಸತಿ ಗೃಹದಲ್ಲಿಯ ಕೊಠಡಿಯಲ್ಲಿ ಇರಿಸಿ  ಚಿಕಿತ್ಸೆ ನೀಡಲಾಗುತ್ತಿತ್ತು. 

ಜೊತೆಗೆ ರೋಗಿಗೆ ಪರವಾನಿಗೆ ಇಲ್ಲದೆ ರೆಮ್ ಡಿಸಿವರ್ ಇಂಜಕ್ಷನ್ ನೀಡಲಾಗುತ್ತಿತ್ತು. 

ಅದೇ ರೀತಿಯಾಗಿ ಚಂದ್ರಪ್ಪ ಆಸ್ಪತ್ರೆ ಮೇಲೆ ಕೂಡ ದಾಳಿ ನಡೆಸಿ. ಒಟ್ಟು ನಗರದಲ್ಲಿ ಡೋಸ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಆಸ್ಪತ್ರೆಯ ಔಷಧ ಅಂಗಡಿಗಳನ್ನು ಸೀಜ್ ಮಾಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.