ಉಡಾನ್ ಯೋಜನೆಯಡಿ ಮೂರು ವರ್ಷಗಳ ತನಕ ಮಾತ್ರ ಸರ್ಕಾರದಿಂದ ಸಬ್ಸಿಡಿ ಸಿಗುತ್ತದೆ. ಆದ್ದರಿಂದ ಕೊಪ್ಪಳದಲ್ಲಿ ವಿಮಾನ ನಿಲ್ದಾಣ ಆರಂಭ ವಿಳಂಬವಾಗುತ್ತಿದೆ. ಸಬ್ಸಿಡಿ ಹತ್ತು ವರ್ಷಕ್ಕೆ ಏರಿಸಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆರಾಜಶೇಖರ ಹಿಟ್ನಾಳ ಸಂಸದ
ವಿಮಾನ ನಿಲ್ದಾಣಕ್ಕೆ ಜಿಲ್ಲೆಯಲ್ಲಿ ಜಾಗ ಅಂತಿಮಗೊಳಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತ್ವರಿತವಾಗಿ ಕಾಮಗಾರಿ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಕೇಂದ್ರಕ್ಕೆ ಈ ಕುರಿತು ಪತ್ರ ಬರೆಯುವೆಅಶೋಕಸ್ವಾಮಿ ಹೇರೂರು ಅಧ್ಯಕ್ಷ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆ
ವಿಮಾನ ಸೇವೆ ಎಷ್ಟು ಬೇಗ ಆರಂಭವಾಗುತ್ತದೆ ಅಷ್ಟು ವೇಗವಾಗಿ ವಾಣಿಜ್ಯ ವಹಿವಾಟು ಹಾಗೂ ಜಿಲ್ಲೆಯ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ. ವಿಮಾನ ನಿಲ್ದಾಣ ಆರಂಭಕ್ಕೆ ತ್ವರಿತ ಕ್ರಮವಾಗಬೇಕುಶ್ರೀನಿವಾಸ ಗುಪ್ತಾ ಕೂದಲೋದ್ಯಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.