ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಅಭಿಯಾನ

Published 3 ಏಪ್ರಿಲ್ 2024, 12:58 IST
Last Updated 3 ಏಪ್ರಿಲ್ 2024, 12:58 IST
ಅಕ್ಷರ ಗಾತ್ರ

ಕೊಪ್ಪಳ: ಕೊಪ್ಪಳ ತಾಲ್ಲೂಕು ಪಂಚಾಯಿತಿ ವತಿಯಿಂದ ವಣ ಬಳ್ಳಾರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿನ್ನಾಪುರ ಚಿಕ್ಕತಾಂಡಾ ಹಾಗು ದೊಡ್ಡ ತಾಂಡಾದಲ್ಲಿ ಮಂಗಳವಾರ ‘ವಲಸೆ ಯಾಕ್ರೀ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಅಭಿಯಾನ’ ನಡೆಯಿತು.

ತಾಲ್ಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ ‘ಬರಗಾಲ ಇರುವುದರಿಂದ ಕೂಲಿ ಬಯಸಿ ಬೇರೆ ಕಡೆಗೆ ಗುಳೆ ಹೋಗುವುದನ್ನು ತಡೆದು ಸ್ಥಳಿಯವಾಗಿ ನಿರಂತರವಾಗಿ 60 ದಿನಗಳ ಕೂಲಿ ಕೆಲಸ ನೀಡುವ ಉದ್ದೇಶದಿಂದ ಗ್ರಾಮೀಣಾಭಿವೃದ್ದಿ ಆಯುಕ್ತಾಲಯವು ಈ ಅಭಿಯಾನ ಹಮ್ಮಿಕೊಳ್ಳುವಂತೆ ನಿರ್ದೇಶನ ನೀಡಿದೆ‘ ಎಂದರು.

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶ್ರೀಶೈಲಪ್ಪ, ಡಿಇಒ ಬಸವರಾಜ ಕುರಿ, ಕಾಯಕ ಮಿತ್ರ ಸುನಿತಾ ಸಂಗಳದ, ನರೇಗಾ ಸಹಾಯಕ ಶಾಂತಪ್ಪ ಮ್ಯಾದನೇರಿ, ತಾಂಡಾದ ಗೋವಿಂದಪ್ಪ, ಗಂಗಾಧರ ಪೂಜಾರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT