ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಕ್ಕೆ ಆದ್ಯತೆ | 153 ವರ್ಷದ ರೋಮನ್ ಕ್ಯಾಥೋಲಿಕ್ ಮಿಷನ್ ಶಾಲೆ

ಕನ್ನಡಕ್ಕೂ ಆದ್ಯತೆ ನೀಡಿದ ಮಿಷನರಿ, ಮುಸ್ಲಿಂ ಆಡಳಿತಗಾರರು
ಶರಣಪ್ಪ ಆನೆಹೊಸೂರು
Published 2 ನವೆಂಬರ್ 2023, 5:46 IST
Last Updated 2 ನವೆಂಬರ್ 2023, 5:46 IST
ಅಕ್ಷರ ಗಾತ್ರ

ಮುದಗಲ್: ಪಟ್ಟಣದಲ್ಲಿ ಮೊದಲು ಪ್ರಾರಂಭವಾದ ರೋಮನ್ ಕ್ಯಾಥೋಲಿಕ್ ಮಿಷನ್ ಪ್ರಾಥಮಿಕ ಶಾಲೆ ಲಕ್ಷಾಂತರ ಶೋಷಿತ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ತಾಲ್ಲೂಕಿನಲ್ಲಿ ಜ್ಞಾನಾರ್ಜನೆ ತಾಣವಾಗಿದೆ. ಕಡು ಬಡವರ ಮಕ್ಕಳಿಗೆ ಶಿಕ್ಷಣ ನೀಡಿದ ಶಾಲೆಗೆ ಇದೀಗ 153ರ ಸಂಭ್ರಮ.

ಕ್ರಿ.ಶ. 1557 ರಲ್ಲಿ ವಿಜಯಪುರದ ಇಬ್ರಾಹಿಂ ಆದಿಲ್ ಶಾಹಿ ಚರ್ಚೆಗೆ ಇನಾಮು ಭೂಮಿ ನೀಡಿದ್ದರು ಎಂದು ಡೆಪ್ಯೂಟಿ ಕಮಿಷನರ್ ಬಶೀರ್ ಅಹ್ಮದ್ ಅವರು ರಚಿಸಿರುವ ‘ವಿಜಯಪುರ ಇತಿಹಾಸ‘ ಕೃತಿಯಲ್ಲಿ ಉಲ್ಲೇಖಿಸಲಾಗಿದೆ.

ಮುದಗಲ್ ಪಟ್ಟಣ ವ್ಯಾಪಾರ ಕೇಂದ್ರವಾಗಿತ್ತು, ಪೋರ್ಚುಗೀಸರು ಗೋವೆಯ ಮೂಲಕ ಮುದಗಲ್‌ಗೆ ವ್ಯಾಪಾರಕ್ಕಾಗಿ ಬಂದು ಇಲ್ಲಿಯೇ ನೆಲೆ ನಿಂತರು. ವ್ಯಾಪಾರಿಗಳು ತಮ್ಮ ದೇವರ ಆರಾಧನೆಗಾಗಿ ವಿಜಯಪುರದ ಇಬ್ರಾಹಿಂ ಆದಿಲ್ಶಾಹಿ ಅವರಿಂದ ಇನಾಮು ಭೂಮಿ ಪಡೆದು ಚರ್ಚ್ ನಿರ್ಮಿಸಿದ್ದರು.

ಶೈಕ್ಷಣಿಕವಗಿ ಹಿಂದುಳಿದಿರುವುದನ್ನು ಮನಗಂಡ ಫಾದರ್ ಒಬ್ಬರು ಚರ್ಚ್‌ ಆಶ್ರಯದಲ್ಲಿ ಕ್ರಿ. ಶ 1870ರಲ್ಲಿ ಪ್ರಾಥಮಿಕ ಶಾಲೆ ಪ್ರಾರಂಭಿಸಿದರು. ಕ್ರಿ.ಶ. 1870 ರಲ್ಲಿ ಮುದಗಲ್ ಮುಸ್ಲಿಂ ದೊರೆಗಳ ಆಡಳಿತದಲ್ಲಿತ್ತು. ಇದರಿಂದ ಇಲ್ಲಿ ಉರ್ದು ಮಾಧ್ಯಮದಲ್ಲಿ ಶಾಲೆ ಆರಂಭಿಸಿತು. ನಂತರ ದಿನಗಳಲ್ಲಿ ಕನ್ನಡ ಹಾಗೂ ಅಂಗ್ಲ ಮಾಧ್ಯಮದಲ್ಲಿ ಪಾಠ ಬೋಧನೆ ಸಹ ಶುರುವಾಯಿತು.

ಈ ಶಾಲೆ ಕ್ರಿ.ಶ. 1918 ರಲ್ಲಿ ನಿಜಾಮ ಸರ್ಕಾರದ ಅಧೀನಕ್ಕೆ ಒಳಪಟ್ಟಿತು. ನಿಜಾಮ ಸರ್ಕಾರದಲ್ಲಿ ಇಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕರಿಗೆ ತಿಂಗಳಿಗೆ ₹ 10. ವೇತನ ನೀಡುತ್ತಿದ್ದರು. ಕ್ರಿ.ಶ. 1936 ರಲ್ಲಿ ಬಳ್ಳಾರಿ ದೇವಾಲಯದ ಚರ್ಚ್ ಫಾದರ್ ಬಿಸೆಪ್ ಓಗನ್ ಅವರು ಮುದಗಲ್ದಲ್ಲಿದ್ದ ಶಾಲೆಯನ್ನು ಚರ್ಚ್ ಆಡಳಿತದಿಂದ ಸೇಂಟ್ ಅನ್ನಮ್ಮ ಚರ್ಚ್ ಅಡಳಿತಕ್ಕೆ ವರ್ಗಾಯಿಸಿದರು.

ಕ್ರಿ.ಶ. 1987 ಅವರಿಗೆ ಚರ್ಚ್ನ ಅಂಗಳದಲ್ಲಿ ಶಾಲೆ ನಡೆಯುತ್ತಿತ್ತು. ನಂತರ ಲಿಂಗಸುಗೂರು ರಸ್ತೆ ಬದಿಗೆ 10 ಎಕರೆ ಜಮೀನಿನಲ್ಲಿ ಶಾಲೆ ನಿರ್ಮಾಣವಾಯಿತು. ಪ್ರಸ್ತುತ 1 ರಿಂದ 10 ನೇ ತರಗತಿಗಳನ್ನು ಇಲ್ಲಿ ನಡೆಸಲಾಗುತ್ತದೆ. ಮುಸ್ಲಿಂ ಆಡಳಿತಗಾರರು ಹಾಗೂ ಮಿಷನರಿಗಳು ಸ್ಥಳೀಯ ಭಾಷೆಯಾದ ಕನ್ನಡಕ್ಕೂ ಆದ್ಯತೆ ನೀಡಿದ್ದರು ಎನ್ನುವುದು ಗಮನಾರ್ಹವಾಗಿದೆ.

ಸಾವಿರಕ್ಕೂ ಹೆಚ್ಚು ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. 35 ಕ್ಕೂ ಹೆಚ್ಚು ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ನೂರಾರು ವಿದ್ಯಾರ್ಥಿಗಳು – ವಸತಿ ನಿಲಯದಲ್ಲಿ ವಾಸ ಮಾಡಿ ಇಲ್ಲಿಯೇ ಅಭ್ಯಾಸ ಮಾಡುತ್ತಿದ್ದಾರೆ.

ಈ ಶಾಲೆಯಲ್ಲಿ ಜ್ಞಾನ ಪಡೆದ ವಿದ್ಯಾರ್ಥಿಗಳು ಅಮೆರಿಕ, ಇಂಗ್ಲೆಂಡ್, ಇಟಲಿ, ಜರ್ಮನ್ ದೇಶಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ.

ರಾಯಚೂರು ಜಿಲ್ಲೆಯ ಮುದಗಲ್‌ನಲ್ಲಿರುವ ಅತ್ಯಂತ ಹಳೆಯ ರೋಮನ್ ಕ್ಯಾಥೋಲಿಕ್ ಮಿಷನ್ ಪ್ರಾಥಮಿಕ ಶಾಲೆ
ರಾಯಚೂರು ಜಿಲ್ಲೆಯ ಮುದಗಲ್‌ನಲ್ಲಿರುವ ಅತ್ಯಂತ ಹಳೆಯ ರೋಮನ್ ಕ್ಯಾಥೋಲಿಕ್ ಮಿಷನ್ ಪ್ರಾಥಮಿಕ ಶಾಲೆ
ಲಿಲ್ಲಿ ಫೆರ್ನಾಂಡಿಸ್ ಶಾಲೆಯ ಮುಖ್ಯ ಶಿಕ್ಷಕಿ
ಲಿಲ್ಲಿ ಫೆರ್ನಾಂಡಿಸ್ ಶಾಲೆಯ ಮುಖ್ಯ ಶಿಕ್ಷಕಿ
ಗುರುಬಸಪ್ಪ ಸಜ್ಜನ್ ಶಾಲೆಯ ಹಳೆಯ ವಿದ್ಯಾರ್ಥಿ
ಗುರುಬಸಪ್ಪ ಸಜ್ಜನ್ ಶಾಲೆಯ ಹಳೆಯ ವಿದ್ಯಾರ್ಥಿ
ರೋಮನ್ ಕ್ಯಾಥೋಲಿಕ್ ಮಿಷನ್ ಪ್ರಾಥಮಿಕ ಶಾಲೆ ಗುಣಮಟ್ಟದ ಶಿಕ್ಷಣ ನೀಡಿ ಮಕ್ಕಳ ಸರ್ವತೋಮುಖ ಬೆಳವಣಿಗೆ ಹಗಲಿರುಳು ಶ್ರಮಿಸುತ್ತಿದೆ
ಇದು ತಾಲ್ಲೂಕಿನ ಅತ್ಯಂತ ಪುರಾತನ ಶಾಲೆ. 1970ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮಾರ್ಪಾಡು ಹೊಂದಿದೆ. ಅಧಿಕ ವಿದ್ಯಾರ್ಥಿಗಳ ಒತ್ತಡದಲ್ಲಿಯೂ ಗುಣಮಟ್ಟ ಕಾಯ್ದುಕೊಂಡಿದೆ
ಗುರುಬಸಪ್ಪ ಸಜ್ಜನ್ ಶಾಲೆಯ ಹಳೆಯ ವಿದ್ಯಾರ್
ರೋಮನ್ ಕ್ಯಾಥೋಲಿಕ್ ಮಿಷನ್ ಪ್ರಾಥಮಿಕ ಶಾಲೆ ಕೆಲ ವಿಶಿಷ್ಟ ಸ್ಥಾನ ಪಡೆದು ಸುಸಜ್ಜಿತವಾಗಿ ವಿದ್ಯಾದಾನ ಮಾಡುತ್ತ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ
ಪೌಲರಾಜ ಎಮ್ಮಿ ವಿದ್ಯಾರ್ಥಿ ಪಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT