ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಗಳ ಘೋಷಣೆ ಸಿದ್ದರಾಮಯ್ಯ ‌ನಡೆ ಸರಿಯಲ್ಲ: ಜಾರಕಿಹೊಳಿ

Last Updated 16 ಡಿಸೆಂಬರ್ 2022, 8:31 IST
ಅಕ್ಷರ ಗಾತ್ರ

ಕುಷ್ಟಗಿ (ಕೊಪ್ಪಳ ಜಿಲ್ಲೆ): ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೋದಲೆಲ್ಲ ಪಕ್ಷದ ಅಭ್ಯರ್ಥಿಗಳ ಟಿಕೆಟ್ ಘೋಷಣೆ ಮಾಡುವ ನಡೆ ಸರಿಯಲ್ಲ. ಇದರಿಂದ ಅರ್ಜಿ ಸಲ್ಲಿಸಿದ ಬೇರೆ ಆಕಾಂಕ್ಷಿಗಳಿಗೆ ಅಸಮಾಧಾನವಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿ ಅರ್ಜಿ ಹಾಕಿದವರಿಗೆ ನಮಗೂ ಟಿಕೆಟ್ ಸಿಗುತ್ತದೆ ಎನ್ನುವ ಆಸೆ ಇರುತ್ತದೆ. ಅರ್ಜಿ ಹಾಕಿದವರಿಗೆ ತೊಂದರೆ ಆಗುತ್ತದೆ‌. ಅರ್ಜಿಗಳ ಪರಿಶೀಲನೆಯಾಗಿಲ್ಲ. ಆಗಲೇ ಮತ್ತೊಂದು ಕಡೆ ಇಂಥವರಿಗೇ ಮತ ಹಾಕಿ ಅನ್ನೋದು ಸರಿಯಲ್ಲ ಎಂದರು.

ಬೆಳಗಾವಿ ಗಡಿ ವಿವಾದ ಬಗ್ಗೆ ಪ್ರತಿಕ್ರಿಯಿಸಿ ಈ ವಿಷಯ ವರ್ಷಕ್ಕೆ ಒಮ್ಮೆ ಮಳೆ ಬಂದ ಹಾಗೆ. ಚುನಾವಣೆ ಬಂದಾಗೆಲೆಲ್ಲ ಗಡಿ ವಿವಾದ ಹುಟ್ಟಿಕೊಳ್ಳುತ್ತದೆಎಂದರು.

ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ 'ನಾನು ಅಭ್ಯರ್ಥಿಗಳನ್ನು ಎಲ್ಲಿಯೂ ಘೋಷಣೆ ಮಾಡಿಲ್ಲ. ಕೆಲವರಿಗೆ ಆಶೀರ್ವಾದ ಮಾಡಿ ಎಂದಿದ್ದೇನೆ' ಎಂದು ತಮ್ಮ ಹೇಳಿಕೆ ಸಮರ್ಥಿಸಿಕೊಂಡರು.

ಕಳೆದ‌ ತಿಂಗಳು ಕೊಪ್ಪಳ ಜಿಲ್ಲೆಯ ‌ವನಬಳ್ಳಾರಿಯಲ್ಲಿ‌ ನಡೆದಿದ್ದ ಕಾಂಗ್ರೆಸ್ ಮುಖಂಡರ ಮದುವೆ ‌ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರುವ ಇಕ್ಬಾಲ್ ಅನ್ಸಾರಿ (ಗಂಗಾವತಿ), ಅಮರೇಗೌಡ ಬಯ್ಯಾಪುರ (ಕುಷ್ಟಗಿ), ಶಿವರಾಜ ತಂಗಡಗಿ (ಕನಕಗಿರಿ), ಬಸವರಾಜ ರಾಯರಡ್ಡಿ (ಯಲಬುರ್ಗಾ) ಮತ್ತು ಕೆ. ರಾಘವೇಂದ್ರ ಹಿಟ್ನಾಳ (ಕೊಪ್ಪಳ) ಅವರನ್ನು ಮುಂದಿನ ಚುನಾವಣೆಯಲ್ಲಿ ಆಯ್ಕೆ ಮಾಡಿ ಕಳುಹಿಸಬೇಕು ಎಂದು ಮದುವೆ ವೇದಿಕೆಯಲ್ಲಿಯೇಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT