ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಆರ್‌ಪಿಪಿ: ಗ್ರಾ.ಪಂ ಸದಸ್ಯರು ಸೇರ್ಪಡೆ

Published : 31 ಜನವರಿ 2023, 4:50 IST
ಫಾಲೋ ಮಾಡಿ
Comments

ಗಂಗಾವತಿ: ಗಾಲಿ ಜನಾರ್ದನರೆಡ್ಡಿ ಸ್ಥಾಪಿತ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ (ಕೆಆರ್‌ಪಿಪಿ) ವಿವಿಧಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಸೇರ್ಪಡೆಯಾಗುವುದು ಮುಂದು ವರೆದಿದೆ.

ಆನೆಗೊಂದಿ ಗ್ರಾಮ ಪಂಚಾಯಿತಿ ಸದಸ್ಯರು: ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲಿಕಾರ್ಜುನ ಹಿರೇಮ ಠ,ವೆಂಕಟೇಶ ಮಡ್ಡೆರ, ಸುಶೀಲಾಬಾಯಿ ಸಂತೋಷ, ರಾಜಶೇಖರ ಬಸವನ ದುರ್ಗಾ, ಗಾಳೆಮ್ಮ ಚಿಕ್ಕರಾಂಪುರ, ಕಿರಣ್ಮಯ ಮೌನೇಶ ಮತ್ತಿತರರು ಸೇರ್ಪಡೆಯಾದರು.

ಗಂಗಾವತಿ: ಇಲ್ಲಿನ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಅಮರಜ್ಯೋತಿ ನರಸಪ್ಪ, ರಾಮಾ ನಾಯ್ಕ, ಸಿಎಂಸಿ ಮಾಜಿ ಅಧ್ಯಕ್ಷ ಪಂಪಣ್ಣ‌ ನಾಯಕ್, ಪುತ್ತೂರು ಶ್ರೀನಿವಾಸ, ಈ.ರಾಮಕೃಷ್ಣ,ಸೈಯದ್ ಇಬ್ರಾಹಿಂ, ಬಿ.ನಾಗರಾಜ, ಬಲಿಜ ಸಮಾಜದ ಅಧ್ಯಕ್ಷ ಟಿ‌.ಜಿ‌.ಬಾಬು ಆನೆಗೊಂದಿ, ಮಲ್ಲಪ್ಪ ಸಜ್ಜನ್ ಸೇರಿ 30ಕ್ಕೂ ಹೆಚ್ಚು ಜನರು ಪಕ್ಷಕ್ಕೆ ಸೇರಿದರು.

ಚಿಲಕುಮುಕಿ: ಇರಕಲ್ ಗಡ ಹೋಬಳಿ ಚಿಲಕಮುಕಿ ಗ್ರಾಮ ದ ಕಾಂಗ್ರೆಸ್ ಮುಖಂಡ ಮಲ್ಲೇಶಪ್ಪ ಗುಮಗೇರಿ, ಸಂಗ ಮೇಶ ಬಾದವಾಡಿ, ಇರಕಲ್ ಗಡ ಗ್ರಾ.ಪಂ ವಿರೇಶ ಹಿರೇ ಮಠ,ರಾಮನಗೌಡ ದಳಪತಿ ಸೇರಿ ಚಾಮಲಾಪುರ, ಜಿನ್ನಾ ಪುರ ತಾಂಡ, ಒಣಬಳ್ಳಾರಿ ಗ್ರಾಮದ ಯುವಕರು ಸೇರಿದರು.

‘ಕೆಆರ್‌ಪಿಪಿಗೆ ಜನರಿಂದ ಬೆಂಬಲ, ಪ್ರೀತಿ ವ್ಯಕ್ತವಾಗುತ್ತಿದೆ. ತುಂಬಾ ಸಂತೋ ಷವಾಗುತ್ತಿದೆ. ಈ ಬಾರಿ ಶಕ್ತಿಮೀರಿ ಗೆಲುವಿಗೆ ಶ್ರಮಿಸಿ, ಜನತೆಗೆ ಅಭಿವೃದ್ಧಿ ಕೆಲಸ ಮಾಡಲಾಗುವುದು’ ಎಂದು ಗಾಲಿ ಜನಾರ್ದನ ರೆಡ್ಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT