ಕುಷ್ಟಗಿ: ಪಟ್ಟಣದಿಂದ ಕೊಪ್ಪಳ ರಸ್ತೆಯಲ್ಲಿರುವ ಅನೂಪ್ಶೆಟ್ಟಿ ಪೊಲೀಸ್ ಕಾಲೊನಿ ವಸತಿ ಬಡಾವಣೆಯನ್ನು ಶನಿವಾರ ಸ್ವಚ್ಛಗೊಳಿಸಲಾಯಿತು.

ಬೆಳಿಗ್ಗೆ ಎರಡು ಜೆಸಿಬಿ ಯಂತ್ರಗಳೊಂದಿಗೆ ಬೆಳಿಗ್ಗೆ ಸ್ಥಳಕ್ಕೆ ಬಂದ ಪೊಲೀಸರು ಸಂಜೆವರೆಗೂ ವರ್ಷಗಟ್ಟಲೇ ಅವಧಿಯಲ್ಲಿ ಬೆಳೆದು ನಿಂತಿದ್ದ ಬಹಳಷ್ಟು ಮುಳ್ಳುಗಿಡಗಳು, ಮದ್ಯದ ಬಾಟಲಿಗಳ ರಾಶಿ ಇತರೆ ತ್ಯಾಜ್ಯಗಳನ್ನು ವಿಲೇವಾರಿ ಮಾಡಿದರು.

‘ಪ್ರಜಾವಾಣಿ’ ಫೆ.14ರ ಸಂಚಿಕೆಯಲ್ಲಿ ‘ಅನೂಪ್ಶೆಟ್ಟಿ ಪೊಲೀಸ್ ಕಾಲೊನಿ ಅಕ್ರಮಗಳ ತಾಣ’ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಇದನ್ನು ಗಮನಿಸಿದ ಪೊಲೀಸ್ ಅಧಿಕಾರಿಗಳು ವಸತಿ ಬಡಾವಣೆಗೆ ಸ್ವತಃ ಮುಂದಾಗಿದ್ದು ಕಂಡುಬಂದಿತು. ಎಲ್ಲ ರೀತಿಯ ಕಸವನ್ನೂ ತೆಗೆದು ಗೂಡಿಸಿದ ನಂತರ ಬಡಾವಣೆ ಮೊದಲಿನಂತೆ ಗೋಚರಿಸಿತು.

ಅಗತ್ಯ ಮೂಲ ಸೌಲಭ್ಯಗಳೊಂದಿಗೆ ಈ ವಸತಿ ಬಡಾವಣೆ ಅಭಿವೃದ್ಧಿಗೊಂಡ ನಂತರ ಹಸ್ತಾಂತರಗೊಂಡಿತ್ತು. ಬಡಾವಣೆಯಲ್ಲಿ ರಸ್ತೆ, ಉದ್ಯಾನ, ನಾಗರಿಕ ಸೌಲಭ್ಯಕ್ಕೆ ಮೀಸಲಾಗಿದ್ದ ಜಾಗವನ್ನು ಸ್ವಚ್ಛವಾಗಿರಿಸಿಕೊಳ್ಳುವ ಜವಾಬ್ದಾರಿ ಪುರಸಭೆಗೆ ಸೇರಿತ್ತು. ಈ ಸಮಸ್ಯೆ ಗಮನಕ್ಕೆ ಬಂದರೂ ಸ್ಥಳಕ್ಕೆ ಭಾರದ ಪುರಸಭೆ ಸಿಬ್ಬಂದಿ ಮತ್ತೆ ನಿರ್ಲಕ್ಷ್ಯವಹಿಸಿದ್ದರಿಂದ ಪೊಲೀಸರೇ ತಮ್ಮ ವಸತಿ ಬಡಾವಣೆಯನ್ನು ಸ್ವಚ್ಛಗೊಳಿಸಿಕೊಳ್ಳುವ ಅನಿವಾರ್ಯತೆ ಎದುರಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.