ಶುಕ್ರವಾರ, ಅಕ್ಟೋಬರ್ 22, 2021
21 °C
ತಾಲ್ಲೂಕು ಕಟ್ಟಡ ನಿರ್ಮಾಣ ವಲಯ ಕಾರ್ಮಿಕರ ಸಮ್ಮೇಳನ

‘ಕಟ್ಟಡ ಕಾರ್ಮಿಕರ ಬದುಕು ಅತಂತ್ರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ಭವ್ಯ ಕಟ್ಟಡಗಳ ನಿರ್ಮಾಣದ ಮೂಲಕ ಸುಂದರ ಸಮಾಜ ಕಟ್ಟುವಲ್ಲಿ ಶ್ರಮಿಸುತ್ತಿರುವ ಲಕ್ಷಾಂತರ ಕಟ್ಟಡ ಕಾರ್ಮಿಕರ ಬದುಕು ಅತಂತ್ರವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ ಹೇಳಿದರು.

ಇಲ್ಲಿನ ಕನ್ನಡ ಜಾಗೃತಿ‌ ಸಮಿತಿ ಭವನದಲ್ಲಿ ನಡೆದ ತಾಲ್ಲೂಕು ಕಟ್ಟಡ ನಿರ್ಮಾಣ ವಲಯ ಕಾರ್ಮಿಕರ ಪ್ರಥಮ ಸಮ್ಮೇಳನ ಕಾರ್ಯಕ್ರಮ ‌ಉದ್ಘಾಟಿಸಿ ಮಾತನಾಡಿ‌ದರು.

ಕೋವಿಡ್ ವೇಳೆಯಲ್ಲಿ ಕೆಲ ಕಟ್ಟಡ ಕಾರ್ಮಿಕರ ಬದುಕು ಬೀದಿ ಪಾಲಾಗಿತ್ತು. ಈ ಕುರಿತು ಯಾವ ಸರ್ಕಾರವು ಸರಿಯಾದ ನೆರವು ನೀಡಲಿಲ್ಲ. ಕಲ್ಯಾಣ ಮಂಡಳಿ ಕೆಲ ಸೌಲಭ್ಯಗಳು ನೀಡಿದರು, ಸಕಾಲಕ್ಕೆ ಕಾರ್ಮಿಕರಿಗೆ ತಲುಪಲೆ ಇಲ್ಲ.

ಇದಕ್ಕೆ‌ಮುಖ್ಯ ಕಾರಣ ಕಾರ್ಮಿಕರಿಗೆ ತಿಳುವಳಿಕೆ ಕೊರತೆ. ಆದ್ದರಿಂದ ಇದನ್ನು ಹೋಗಲಾಡಿಸಲು ಸಿಐಟಿಯು ನೇತೃತ್ವದಲ್ಲಿ ವ್ಯವಸ್ಥಿತವಾಗಿ ಸಂಘಟಿತ ರಾಗುವುದು ಅವಶ್ಯವಿದೆ ಎಂದರು.

ಕಾರ್ಮಿಕ‌ ನಿರೀಕ್ಷಕ ಗೋಪಾಲ್ ಧೂಪದ್ ಮಾತನಾಡಿ, ಕಟ್ಟಡ ಕಾರ್ಮಿಕರಿಗೆ ಸರ್ಕಾರ ನೀಡುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು, ಬದುಕು ಹಸನು ಮಾಡಿಕೊಳ್ಳಬೇಕು ಎಂದರು.

ಸಿಐಟಿಯು ಜಿಲ್ಲಾ ಅಧ್ಯಕ್ಷ ನಿರುಪಾದಿ‌ ಬೆಣಕಲ್ ಮಾತನಾಡಿ, ಜಿಲ್ಲೆಯ ಕೃಷಿ ಕೇತ್ರದಲ್ಲಿ ಉಂಟಾದ ಬಿಕ್ಕಟ್ಟಿನ ಪರಿಣಾಮದಿಂದ ಸಾವಿರಾರು ಜನರು ಕಟ್ಟಡ ಕಾರ್ಮಿಕ ವಲಯಕ್ಕೆ ಬಂದು ಜೀವನ ಸಾಗಿಸುತ್ತಿದ್ದಾರೆ. ಅಂತವರಿಗೆ ಸರ್ಕಾರ ಸಾಮಾಜಿಕ ಸುರಕ್ಷತೆ ಒದಗಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆಯಲ್ಲಿ ನೂತನ 22 ಸದಸ್ಯರನ್ನು ಒಳಗೊಂಡ ತಾಲ್ಲೂಕು ಸಮಿತಿ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಮುತ್ತಣ್ಣ, ಕಾರ್ಯದರ್ಶಿ ಯಾಗಿ ಮಂಜುನಾಥ್ ಡಗ್ಗಿ, ಖಜಾಂಚಿಯಾಗಿ ಮಹಾದೇವ್ ಗೌಳಿ ಅವರನ್ನು ಆಯ್ಕೆ ಮಾಡಲಾಯಿತು.

ಈ ವೇಳೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ‌ಕಾಶಿಂ ಸರ್ಧಾರ್, ಲಕ್ಷ್ಮೀ ದೇವಿ,‌ ಮುತ್ತಣ್ಣ,‌ ಹನುಮಂತಪ್ಪ‌ ಬೋವಿ, ಕಾಶಿಂ ಸಾಬ್ ವಡ್ಡರಹಟ್ಟಿ, ರಮೇಶ ಬೂದಗುಂಪ, ಮಹೇಶ‌,‌ಮೈನೂದ್ದೀನ್, ಟಿ.ರಘು, ಮಾದೇವ್ ಗೌಳಿ, ಮುತ್ತಣ್ಣ,ಮಂಜುನಾಥ‌ ಡಗ್ಗಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು