ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರಟಗಿ | ಗ್ರಂಥಾಲಯ, ಪ್ರಯೋಗಾಲಯ ಇಲ್ಲ; ಅತಿಥಿ ಉಪನ್ಯಾಸಕರೇ ಎಲ್ಲ

Published 1 ಜುಲೈ 2024, 5:28 IST
Last Updated 1 ಜುಲೈ 2024, 5:28 IST
ಅಕ್ಷರ ಗಾತ್ರ

ಕಾರಟಗಿ: ಪಟ್ಟಣದ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಪೂರ್ವ ಪ್ರಾಥಮಿಕದಿಂದ ಪಿಯುವರೆಗೆ ಶಿಕ್ಷಣದ ವ್ಯವಸ್ಥೆ ಇದೆ. ಕಲಾ, ವಾಣಿಜ್ಯ, ವಿಜ್ಞಾನ ವಿಭಾಗಗಳಿದ್ದು 550 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಪ್ರಯೋಗಾಲ, ಗ್ರಂಥಾಲಯ ಇಲ್ಲ. ಉಪನ್ಯಾಸಕರ ಕೊರತೆಯನ್ನು ಅತಿಥಿ ಉಪನ್ಯಾಸಕರು ತುಂಬಿದ್ದಾರೆ.

ವಿಜ್ಞಾನ, ಬೌತವಿಜ್ಞಾನ, ಕಲಾ ವಿಭಾಗದಲ್ಲಿ ಉಪನ್ಯಾಸಕರೇ ಇಲ್ಲ. ಪ್ರಾಚಾರ್ಯ ಅನೀಲಕುಮಾರ ಪಯತ್ನದಿಂದ ವಿಜ್ಞಾನ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ ಸೈನ್ಸ್‌ ಕಲಿಯುವ ಹಾಗೂ ಇಂಗ್ಲೀಷ್ ಬದಲು ಹಿಂದಿ ಆಯ್ಕೆ ಮಾಡಿಕೊಳ್ಳುವ ಅವಕಾಶ ಮಾಡಿಕೊಡಲಾಗಿದೆ.

ಇಲ್ಲಗಳ ಮಧ್ಯದಲ್ಲೂ ಇಲ್ಲಿನ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಶೇ 85 ಫಲಿತಾಂದ ಬಂದಿದೆ. ರಾಧಿಕಾ ಶೇ 93 ಅಂಕ ಪಡೆದಿದ್ದರೆ, ಹುಲಿಗೆಮ್ಮ ಮತ್ತು ಶರಣಬಸವ ಪಠ್ಯೇತರ ವಿಭಾಗದಲ್ಲಿ ಸಾಧನೆ ಮೆರೆದಿದ್ದಾರೆ.

ಸಿದ್ದಾಪುರ: ತಾಲ್ಲೂಕಿನ ಸಿದ್ದಾಪುರದಲ್ಲಿರುವ ಪಿಯು ಕಾಲೇಜು ಕಟ್ಟಡ ಕಪ್ಪು ಮಣ್ಣಿನಲ್ಲಿದೆ. ಸ್ವಲ್ಪ ಮಳೆಯಾದರೂ ಆವರಣವೆಲ್ಲ ಕೆಸರು ಮಯವಾಗಿ ಅಡ್ಡಾಡಲು ಕಷ್ಟವಾಗುತ್ತದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕಾಲೇಜಿಗೆ ನೀರು ಪೂರೈಕೆಯಾಗುತ್ತದೆ. ಪರ್ಯಾಯ ವ್ಯವಸ್ಥೆ ಇರದ ಕಾರಣ ವಿದ್ಯಾರ್ಥಿಗಳು ಮನೆಯಿಂದ ತಂದ ನೀರನ್ನೇ ಕುಡಿಯಬೇಕು.

ಕಾಯಂ ಪ್ರಾಚಾರ್ಯರಿಲ್ಲ, ಕ್ಲರ್ಕ್ ಇಲ್ಲ. ಇಲ್ಲಿದ್ದವರನ್ನು ಬೇರೆಡೆ ಎರವಲು ಸೇವೆಯ ಮೂಲಕ ನಿಯೋಜಿಸಿಲಾಗಿದೆ.

ಸಚಿವ ಶಿವರಾಜ ತಂಗಡಗಿ ಅವರ ಆಪ್ತ ಸಹಾಯಕ ತನಗಿರುವ ಸಚಿವರೊಂದಿನ ವಿಶ್ವಾಸ ಕುದುರಿಸಿಕೊಂಡು ಖಾಯಂ ಉಪನ್ಯಾಸಕರೊಬ್ಬರನ್ನು ಸಿಂಧನೂರಿಗೆ ಎರವಲು ಸೇವೆಯ ಮೇಲೆ ಕಳುಹಿಸಿ ಮತ್ತಷ್ಟು ಸಮಸ್ಯೆಗೆ ಕಾರಣನಾಗಿದ್ದಾನೆ. ಸಚಿವರಂಥವರು ವಿಶ್ವಾಸ ದುರುಪಯೋಗ ಆಗುವ ಬಗ್ಗೆ ಎಚ್ಚರಿಕೆ ವಹಿಸಿದರೆ ಅವರಿಗೂ ಕ್ಷೇಮ ಎಂಬುದು ವಿದ್ಯಾರ್ಥಿಗಳ ಅನಿಸಿಕೆ.

ಕಾರಟಗಿ ತಾಲ್ಲೂಕಿನ ಸಿದ್ದಾಪುರದ ಪಿಯು ಕಾಲೇಜ್‌ನ ಕಟ್ಟಡ
ಕಾರಟಗಿ ತಾಲ್ಲೂಕಿನ ಸಿದ್ದಾಪುರದ ಪಿಯು ಕಾಲೇಜ್‌ನ ಕಟ್ಟಡ
ಇದ್ದ ವ್ಯವಸ್ಥೆಯಲ್ಲಿಯೇ ನಮ್ಮ ಜವಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದೇವೆ. ಜನಪ್ರತಿನಿಧಿಗಳು ನಮಗೆ ಸಮಸ್ಯೆಗಳಿಗೆ ಸ್ಪಂದಿಸಿದರೆ ಮತ್ತಷ್ಟುಟು ಉತ್ಸಾಹದಿಂದ ಕೆಲಸ ಮಾಡಿ ಉತ್ತಮ ಸಾಧನೆ ಮಾಡಬಹುದು
ಅನೀಲಕುಮಾರ ಪ್ರಾಚಾರ್ಯ ಕೆಪಿಎಸ್‌ ಕಾರಟಗಿ
ಜನಪ್ರತಿನಿಧಿಗಳು ಸಮುದಾಯ ನಮಗೆ ಇನ್ನಷ್ಟು ಸಹಕಾರ ಪ್ರೋತ್ಸಾಹ ನೀಡಿದರೆ ಮತ್ತಷ್ಟು ಸಾಧನೆ ಮಾಡಲು ಸಾಧ್ಯವಾಗುವುದು
ಶರಣಪ್ಪ ಬನ್ನೋರ ಪ್ರಭಾರ ಪ್ರಾಚಾರ್ಯ ಪಿಯು ಕಾಲೇಜು ಸಿದ್ದಾಪುರ
‘ಶಕ್ತಿ’ಗೆ ವಿದ್ಯಾರ್ಥಿಗಳ ‘ಶಾಪ’
ನಿತ್ಯ ಬಸ್‌ನಲ್ಲಿ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಶಕ್ತಿ ಯೋಜನೆ (ಮಹಿಳೆಯರ ಉಚಿತ ಪ್ರಯಾಣ) ಬಗ್ಗೆ ತೀವ್ರ ಆಕ್ರೋಶ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಕ್ತಿ ಯೋಜನೆ ಆರಂಭದಿಂದಲೂ ವಿದ್ಯಾರ್ಥಿಗಳ ಪಾಲಿಗೆ ಮರಣ ಶಾಸನವಾಗಿದೆ. ಬಸ್‌ ನಿಲ್ದಾಣದ ಬಳಿ ಬಸ್‌ ನಿಲ್ಲದೆ ಹೋಗುವುದರಿಂದ ಶಿಕ್ಷಣದ ಬಗ್ಗೆ ನಿರಾಸೆ ಮೂಡಿಸಿದೆ. ಕಾದು ಕಾದು ಕೊನೆಗೆ ಕಾಲೇಜಿಗೆ ಹೋದರೆ ಅಲ್ಲೂ ಸಮಸ್ಯೆಗಳೇ ತಾಂಡವವಾಡುತ್ತಿವೆ. ‘ರಾಜಕೀಯ ಲಾಭಕ್ಕಾಗಿ ಗ್ಯಾರಂಟಿ ಯೋಜನೆಗಳ ಬದಲು ಅದೇ ಹಣವನ್ನು ಶಿಕ್ಷಣ ಆರೋಗ್ಯ ಬೆಲೆ ಕಡಿತಕ್ಕೆ ವಿನಿಯೋಗಿಸಿದ್ದರೆ ಈ ಸರ್ಕಾರ ಬಂದದ್ದಕ್ಕೂ ಸಾರ್ಥಕವಾಗುತ್ತಿತ್ತು. ಒಂದೆಡೆ ವಿವಿಧ ಬೆಲೆ ಏರಿಕೆ ಮಾಡಿ ಇರುವ ಹಣದ ದುರುಪಯೋಗ ಮಾಡಿ ಗ್ಯಾರಂಟಿ ಮುಂದುವರೆಸುತ್ತಿರುವುದು ಏಕೆ?’ ಎನ್ನುವುದು ವಿದ್ಯಾರ್ಥಿಗಳ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT