ಮಂಗಳವಾರ, ಡಿಸೆಂಬರ್ 7, 2021
24 °C

ಮುಸ್ಲಿಮರ ಅಂಗಡಿಗಳಲ್ಲೂ ಲಕ್ಷ್ಮಿಪೂಜೆ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನುಮಸಾಗರ: ದೀಪಾವಳಿ ನಿಮಿತ್ತ ಇಲ್ಲಿನ ಹಳೆಬಜಾರ್‌ನಲ್ಲಿ ವ್ಯಾಪಾರಿಗಳಾದ ಮೌಲಾಸಾಬ ಭಾಗವಾನ್, ಚಾಂದಬಿ ಗೋಡಾನ್, ಮಲೀಕಸಾಬ್ ಇಲಕಲ್ಲ ಅವರು ತಮ್ಮ ತರಕಾರಿ ಮಳಿಗೆಗಳಲ್ಲಿ ಶುಕ್ರವಾರ ಲಕ್ಷ್ಮಿಪೂಜೆ ನೆರವೇರಿಸಿದರು.

ದೇವಿಯ ಭಾವಚಿತ್ರಕ್ಕೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ಹೋಳಿಗೆ ನೈವೇದ್ಯ ಅರ್ಪಿಸಿದರು. ಮುಸ್ಲಿಂ ಸಮಾಜದ ಖಾಜಿಯವರು ಇಲ್ಲಿನ ಮೂರು ಅಂಗಡಿಗಳಲ್ಲಿ ಲಕ್ಷ್ಮಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪೂಜೆಯ ನಂತರ ನೆರೆಹೊರೆಯವರಿಗೆ ಸಿಹಿಯೂಟ
ಉಣಬಡಿಸಿದರು.

ಈ ಕುರಿತು ಮಾಹಿತಿ ನೀಡಿದ ಮೌಲಾಸಾಬ ಭಾಗವಾನ್, ‘ಹಿಂದೂಗಳಂತೆ ನಾವು ನಮ್ಮ ಅಂಗಡಿಯಲ್ಲಿ ಪರಂಪರಾಗತವಾಗಿ ಲಕ್ಷ್ಮಿಪೂಜೆ ನೆರವೇರಿಸುತ್ತೇವೆ. ಹಿಂದೂಗಳ ಬಹುತೇಕ ಹಬ್ಬಗಳನ್ನೂ ಆಚರಿಸುತ್ತೇವೆ. ನಮಗೆ ಎಲ್ಲರೂ ಬೇಕು. ಹೀಗಾಗಿ ನಮ್ಮಲ್ಲಿ ಯಾವುದೇ ತಾರತಮ್ಯ ಇಲ್ಲ. ಲಕ್ಷ್ಮಿಪೂಜೆಯಿಂದ ಸಂತೃಪ್ತಿ ದೊರಯುತ್ತಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

 ‘ನಮ್ಮ ಅಜ್ಜನಾದ ಹಸನಸಾಬ ಗೋಡಾನ್ ಅವರ ಕಾಲದಿಂದಲೂ ನಮ್ಮ ಅಂಗಡಿಯಲ್ಲಿ ಲಕ್ಷ್ಮಿಪೂಜೆ ನಡೆಯುತ್ತಿದೆ. ಅದನ್ನು ಈಗಲೂ ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ದೇವಿಯ ದರ್ಶನಕ್ಕೆ ಬರುವ ನೂರರು ಜನರಿಗೆ ಪ್ರಸಾದ ವಿತರಿಸುತ್ತೇವೆ’ ಎಂದು ‌ಚಾಂದಬಿ ಗೋಡಾನ್ ಹೇಳಿದರು.

ಬಾನೂಬಿ ಗೋಡಾನ್, ಇಮಾಮಸಾಬ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.