ಬೆಣಕಲ್ ಗ್ರಾಮದ ಕೊಟ್ರೇಶ್ ಗೊನ್ನಿ ಎಂಬುವವರು ತಮ್ಮ ಜಮೀನಿನ ಅಭಿವೃದ್ಧಿಗಾಗಿ ಫಾರಂ 9/11 ನೀಡುವಂತೆ ಕೃಷ್ಣರೆಡ್ಡಿ ಬಳಿ ಹೋದಾಗ ₹50 ಸಾವಿರ ಲಂಚ ನೀಡುವಂತೆ ಕೇಳಿದ್ದರು. ಚೌಕಾಸಿ ಮಾಡಿದ ಬಳಿಕ ₹40 ಸಾವಿರಕ್ಕೆ ಒಪ್ಪಿಕೊಂಡಿದ್ದರು. ಪಿಡಿಒ ಖಾಸಗಿ ವ್ಯಕ್ತಿಯ ಮೂಲಕ ಲಂಚ ಪಡೆಯುವಾಗ ಅಧಿಕಾರಿಗಳು ದಾಳಿ ನಡೆಸಿದರು ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ.