ಗಂಗಾವತಿ: ಮಕರ ಸಂಕ್ರಾಂತಿ ಹಿನ್ನೆಲೆ ಸಂಕ್ರಾಂತಿಯ ಮುನ್ನಾದಿನ ನಗರದ ಅಕ್ಷರ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ಬೋಗಿ ಆಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಶಾಲೆಯ ಶಿಕ್ಷಕರು ಸೇರಿದಂತೆ ಮಕ್ಕಳು ಕೂಡ ಹಳ್ಳಿಯ ವೇಷಭೂಷಣಗಳಲ್ಲಿ ಕಂಗೊಳಿಸಿದರು.

ಬಳಿಕ ಶಾಲಾ ಆವರಣದಲ್ಲಿ ಬೆರಣಿಗಳನ್ನು ಸುಡುವ ಮೂಲಕ ಹಾಲು ಉಕ್ಕಿಸಿ ಹಬ್ಬವನ್ನು ಆಚರಣೆ ಮಾಡಲಾಯಿತು.

ಈ ವೇಳೆ ಸಂಕ್ರಾತಿಯ ಚಿತ್ರಗೀತೆಗಳಿಗೆ ಶಿಕ್ಷಕಿಯರು ಮತ್ತು ಮಕ್ಕಳು ಹೆಜ್ಜೆ ಹಾಕಿದರು. ಈ ವೇಳೆ ಸಂಸ್ಥೆಯ ನಿರ್ದೇಶಕ ರವಿಚೈತನ್ಯ ರೆಡ್ಡಿ, ಪ್ರಾಂಶುಪಾಲರಾದ ಎಸ್.ಹೀಮಾ ಹಾಗೂ ಶಿಕ್ಷಕಿಯರು ಇದ್ದರು.

ಚಿಣ್ಣರ ಕೆಸರು ಗದ್ದೆ ಓಟ: ಇನ್ನು, ಜಯನಗರದ ಮಹಾನ್ ಕಿಡ್ಸ್ ಶಾಲೆಯಲ್ಲಿ ಸಂಕ್ರಾಂತಿ ಹಬ್ಬವನ್ನು ವಿಭಿನ್ನವಾಗಿ ಆಚರಣೆ ಮಾಡಲಾಯಿತು.

ಮಕ್ಕಳಿಗಾಗಿಯೇ ಕೆಸರು ಗದ್ದೆ ಓಟ ಸ್ಪರ್ಧೆ ಆಯೋಜಿಸಲಾಗಿತ್ತು. ಎಲ್.ಕೆ.ಜಿ, ಯು.ಕೆ.ಜಿ ಸೇರಿದಂತೆ ಒಂದರಿಂದ 7ನೇ ತರಗತಿಯವರೆಗಿನ ಎಲ್ಲಾ ಮಕ್ಕಳು ಕೆಸರು ಗದ್ದೆ ಓಟದಲ್ಲಿ ಉತ್ಸಾಹದಲ್ಲಿ ಪಾಲ್ಗೊಂಡರು. ಇದರ ಜತೆ ಪಾಲಕರನ್ನು ಕೆಸರುಗದ್ದೆಯಲ್ಲಿ ಓಡಿಸಲಾಯಿತು.

ಸಂಸ್ಥೆಯ ಮುಖ್ಯಸ್ಥ ನೇತ್ರಾಜ್ ಗುರುವಿನಮಠ, ಪ್ರಾಚಾರ್ಯರಾದ ಸವಿತಾ, ಶಿಕ್ಷಕಿಯರಾದ ದೀಪಾ, ರೇಣುಕಾ, ಶ್ವೇತಾ, ಪ್ರತೀಕಾ, ಸೌಜನ್ಯ, ಪವಿತ್ರ, ವೀರಮ್ಮ, ರಾಗಿಣಿ, ಬಸಮ್ಮ, ಜಯಶ್ರೀ ಹಾಗೂ ಮಕ್ಕಳ ಪೋಷಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.