ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಮಕರ ಸಂಕ್ರಾಂತಿ: ಭಕ್ತರ ಪಾದಯಾತ್ರೆ

Last Updated 12 ಜನವರಿ 2022, 6:08 IST
ಅಕ್ಷರ ಗಾತ್ರ

ಕನಕಗಿರಿ: ಮಕರ ಸಂಕ್ರಾಂತಿ ಪ್ರಯುಕ್ತ ಪಟ್ಟಣದ ಕನಕಾಚಲ ಹಾಗೂ ಪ್ರತಾಪರಾಯ ಭಜನಾ ಸಂಘದ ಸದಸ್ಯರು ಹಾಗೂ ಭಕ್ತರು ಮಂತ್ರಾಲಯಕ್ಕೆ ಸೋಮವಾರ ಪಾದಯಾತ್ರೆ ಮೂಲಕ ಪಯಣ ಬೆಳೆಸಿದರು.

ಪ್ರತಿ ವರ್ಷದಂತೆ ಈ ವರ್ಷವೂ ಸಂಕ್ರಾಂತಿ ಪ್ರಯುಕ್ತ ಮಂತ್ರಾಲಯಕ್ಕೆ ಪಾದಯಾತ್ರೆ ಮೂಲಕ ಹೋಗುತ್ತಿದ್ದು, ಇದು 21ನೇ ವರ್ಷದ ಪಾದಯಾತ್ರೆಯಾಗಿದೆ ಎಂದು ಭಜನಾ ಸಂಘದ ಪದಾಧಿಕಾರಿಗಳು ತಿಳಿಸಿದರು.

60ಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದು, ಜ. 14ರಂದು ಮಂತ್ರಾಲಯ ತಲುಪಲಿದ್ದೇವೆ ಎಂದು ಅವರು ಹೇಳಿದರು.

ಪಟ್ಟಣದ ತೇರಿನ ಹನುಮಪ್ಪ ದೇವಸ್ಥಾನದಿಂದ ಪಾದಯಾತ್ರೆ ಆರಂಭಿಸಲಾಯಿತು. ರಾಜಬೀದಿ ಸೇರಿದಂತೆ ವಾಲ್ಮೀಕಿ ವೃತ್ತದ ಮೂಲಕ ನವಲಿ ಮಾರ್ಗವಾಗಿ ತೆರಳಲಾಯಿತು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ರತ್ನಮ್ಮ ಮಾದಿನಾಳ, ಪಟ್ಟಣ ಪಂಚಾಯಿತಿ ಸದಸ್ಯ ಶರಣಗೌಡ, ಪ್ರಮುಖರಾದ ಶ್ರೀನಿವಾಸರೆಡ್ಡಿ ಓಣಿಮನಿ, ರಾಮಮೂರ್ತಿ ಕಮ್ಮಾರ, ಅಂಬಣ್ಣ ಮಹಿಪತಿ, ಜಯಪ್ರಕಾಶರೆಡ್ಡಿ ಮಾದಿನಾಳ ಹಾಗೂ ಬಸವರಾಜ ತೆಗ್ಗಿನಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT