ಜೋಡೆತ್ತುಗಳ ಮೂರ್ತಿಗಳಿಗೆ ಬೇಡಿಕೆ

ಮಂಗಳವಾರ, ಜೂಲೈ 23, 2019
25 °C

ಜೋಡೆತ್ತುಗಳ ಮೂರ್ತಿಗಳಿಗೆ ಬೇಡಿಕೆ

Published:
Updated:
Prajavani

ಯಲಬುರ್ಗಾ: ಗ್ರಾಮೀಣ ಭಾಗದ ಜನರ ಸಂಭ್ರಮದ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ.

ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸುವ ಮೂಲಕ ಭೂತಾಯಿಗೆ ಮೊದಲ ಗೌರವ ಸಲ್ಲಿಸಲಾಗುತ್ತದೆ.

ಈ ಹಬ್ಬಕ್ಕೆ ಸ್ಥಳೀಯ ಕುಂಬಾರ ಹಾಗೂ ಬಡಿಗೇರ ಕುಟುಂಬಗಳು   ಮಣ್ಣಿನಿಂದ ಎತ್ತುಗಳನ್ನು ತಯಾರಿಸುತ್ತವೆ.

 ಕಲಾವಿದ ವಿರೂಪಾಕ್ಷಪ್ಪ ಬಡಿಗೇರ ಮಣ್ಣೆತ್ತಿನ ಮೂರ್ತಿಗಳನ್ನು ತಯಾರಿಸಿದ್ದು, ಜೋಡಿ ಎತ್ತುಗಳಿಗೆ ₹20ರಿಂದ 40 ಗೆ ಮಾರಾಟ ಮಾಡಲಾಗುತ್ತದೆ.

ಹಬ್ಬದ ಒಂದು ತಿಂಗಳ ಮುಂಚಿತವಾಗಿಯೇ ಮಣ್ಣನ್ನು ತಂದು ತಯಾರಿಸಿಟ್ಟುಕೊಳ್ಳುವ ಇವರು ಕಳೆದ 20 ವರ್ಷಗಳಿಂದಲೂ ಈ ಕಾಯಕದಲ್ಲಿ ನಿರತರಾಗಿದ್ದಾರೆ.

ನಿರೀಕ್ಷಿಸಿದಷ್ಟು ಲಾಭ ಸಿಗದಿದ್ದರೂ ಪೂರ್ವಜರ ಕಾಲದಿಂದಲೂ ಮಾಡಿಕೊಂಡು ಬಂದಿರುವ ಕಲೆ ಮತ್ತು ಕಸುಬು ಕೈಬಿಡಬಾರದೆಂದು ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಎಂದು ವಿರೂಪಾಕ್ಷಪ್ಪ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !