ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾರವಿ: ನಾಲ್ಕು ಜೋಡಿ ಸಾಮೂಹಿಕ ವಿವಾಹ

Last Updated 7 ಡಿಸೆಂಬರ್ 2021, 6:24 IST
ಅಕ್ಷರ ಗಾತ್ರ

ಕೊಪ್ಪಳ: ನಗರದ ಸರ್ದಾರಗಲ್ಲಿಯಲ್ಲಿ ಹಜರತ್ ಮಹೆಬೂಬೆ ಸುಬಾನಿಯವರ ಗ್ಯಾರವಿ ಹಬ್ಬದ ಪ್ರಯುಕ್ತ ಹಿರಿಯ ನಿವಾಸಿ ಹಾಜಿ ಕೆ.ಇ.ಬಿ. ಮೈನುದ್ದಿನ್‍ಸಾಬ್ ಅವರ ಪುತ್ರ ಜಹೂರ್ ಅಹ್ಮದ್‍ಸಾಬ್‍ ತಮ್ಮ ವೈಯಕ್ತಿಕ ಖರ್ಚಿನಿಂದ ನಾಲ್ಕು ಜನ ಬಡವರ ಸಾಮೂಹಿಕ ವಿವಾಹ (ನಿಖಾಃ) ಮಾಡಿ ಮಾನವೀಯತೆ ಮೆರೆದಿದ್ದಾರೆ.

ನಾಲ್ಕು ಜನ ಬಡ ಕುಟುಂಬದವರ ಮಕ್ಕಳ ಮದುವೆ ಮಾಡಿ ಅವರಿಗೆ ಜೀವನ ನಡೆಸಲು ಅನುಕೂಲ ಮಾಡಿ ಕೊಟ್ಟಿದ್ದಾರೆ.ಸೈಯದ್ ಫೌಂಡೇಶನ್‍ನ ಅಧ್ಯಕ್ಷ ಕೆ.ಎಂ.ಸಯ್ಯದ್‍ರವರು ತಮ್ಮ ಫೌಂಡೇಶನ್ ವತಿಯಿಂದ ವಧುವಿಗೆ ಬಂಗಾರದ ಮಾಂಗಲ್ಯ ಮಾಡಿಸಿಕೊಟ್ಟಿದ್ದಾರೆ.

ಖಾಜಿಸಾಬ್‍ರಾದ ಅಬ್ಬಾಸ್ ಅಲಿ ಹಾಗೂ ಮೈನುದ್ದಿನ್‍ರವರು ನಿಖಾಃ ಕಾರ್ಯ ಮಾಡಿದರು. ಮುಸ್ಲಿಮ್ ಧರ್ಮಗುರು ಮೌಲಾನಾ ಮುಫ್ತಿ ನಜೀರ್ ಅಹ್ಮದ್ ಖಾದ್ರಿ-ವ-ತಸ್ಕಿನಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕಾಂಗ್ರೆಸ್ ಮುಖಂಡ ಕೆ.ಎಂ.ಸಯ್ಯದ್, ಹಿರಿಯರಾದ ಮೆಹಬೂಬ್‍ಅಲಿ ಸಯ್ಯದ್, ನಗರಸಭೆ ಮಾಜಿ ಸದಸ್ಯ ಹಾಗೂ ಸಮಾಜ ಸೇವಕರಾದ ಮಾನ್ವಿಪಾಶಾ, ಮುಸ್ತಫ ಕುದುರಿಮೋತಿ, ಖಾಜಾಸಾಬ್ ಮಂಗಳಾಪುರ, ಕುತುಬದ್ದಿನ್ ಬೆಟಗೇರಿ, ಹುಸೇನ್‍ಬಾಷಾ ಮಾನ್ವಿ, ಜಿಲಾನ್‍ಸಾಬ್ ಹುರಕಡ್ಲಿ, ಗವಿಸಿದ್ದಪ್ಪ ಕಟಗರ, ಅಲ್ಲಾಸಾಬ್ ತರಕಾರಿ, ಸಾಬೀರ್‍ಹುಸೇನಿ, ಖಾಸೀಮ್‍ಸಾಬ್ ಸಂಕನೂರು, ಪ್ರಾಚಾರ್ಯ ಇಬ್ರಾಹಿಂ ಕುದುರಿಮೋತಿ, ಖಾಜೆಸಾಬ್ ಹುನಕುಂಟಿ ಹಾಗೂ ದಾದಾ ಹನಕುಂಟಿ ಇದ್ದರು. ಯುವ ನೌಜವಾಮ್ ಕಮಿಟಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT