ಸೋಮವಾರ, ಜನವರಿ 17, 2022
21 °C

ಕವಲೂರು: ಸಂಘಟನಾ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಳವಂಡಿ: ಸಮೀಪದ ಕವಲೂರು ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅಮೃತ ರೈತ ಉತ್ಪಾದಕರ ಸಂಘದ ಸಂಘಟನಾ ಸಭೆ ಹಾಗೂ ಸಹರಾ ಸಂಸ್ಥೆಯ ಗ್ರಾಮ ಮಟ್ಟದ ಸಂಘ ರಚನೆ ಕುರಿತು ಮಾಹಿತಿ ಸಭೆ ನಡೆಯಿತು.

ಜಿಲ್ಲಾ ಸಂಯೋಜಕ ಅಲ್ಲಾಗಿರಿರಾಜ ಕನಕಗಿರಿ ಮಾತನಾಡಿ,‘ರೈತ ಸಂಘ ರಚಿಸಿ, ರೈತರು ಬೆಳೆದ ಬೆಳಗಳಿಗೆ ಮಾರುಕಟ್ಟೆ ವ್ಯವಸ್ಥೆ, ಗೊಬ್ಬರ, ಬೀಜ ಮಾರಾಟ, ಬೆಂಬಲ ಬೆಲೆ ಒದಗಿಸುವುದು ಹಾಗೂ ರೈತರಿಗೆ ಅನುಕೂಲ ಕಲ್ಪಿಸುವ ಕೆಲಸ ಮಾಡಲಾಗುವುದು. ಸದಸ್ಯತ್ವ ಪಡೆದುಕೊಳ್ಳಬೇಕು’ ಎಂದು ಅವರು ಹೇಳಿದರು.

ಪಿಡಿಒ ಶಂಕ್ರಮ್ಮ, ಸಂಪನ್ಮೂಲ ವ್ಯಕ್ತಿ ಎನ್.ಎಸ್‌.ತಾವರಗೇರಾ, ಎಎಒ ವೀರೇಶ, ಆತ್ಮ ಯೋಜನೆಯ ತಾರಾ, ಕುಶಾಲ್ ರಾಜಾಪುರೋಹಿತ, ರೈತರಾದ ಶರಣಪ್ಪ ಯರಾಶಿ, ಹನುಮಂತ ಭೋವಿ, ಮಲ್ಲಣ್ಣ ಯರಾಶಿ, ಪರಮೇಶಪ್ಪ ಶಿಳ್ಳಿನ, ಚಂದ್ರ ಯರಾಶಿ, ಸಂಗಪ್ಪ ಹಾಗೂ ದೇವರಾಜ ಅಂಗಡಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.