ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರ ಸಂಘದ ಅಭಿವೃದ್ಧಿಗೆ ದಕ್ಷತೆ ಅಗತ್ಯ: ಬಿಇಒ ನಿಂಗಪ್ಪ ಅಭಿಮತ

Published 27 ಸೆಪ್ಟೆಂಬರ್ 2023, 5:39 IST
Last Updated 27 ಸೆಪ್ಟೆಂಬರ್ 2023, 5:39 IST
ಅಕ್ಷರ ಗಾತ್ರ

ಯಲಬುರ್ಗಾ: ‘ಆಂತರಿಕ ಶಿಸ್ತು, ದಕ್ಷತೆ, ಪಾರದರ್ಶಕತೆ ಹಾಗೂ ಸಮರ್ಪಣಾ ಮನೋಭಾವವು ಸಹಕಾರ ಸಂಘದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಿಂಗಪ್ಪ ಕೆ.ಟಿ. ಹೇಳಿದರು.

ಪಟ್ಟಣದ ಸರ್ಕಾರಿ ಕಿರಿಯ ಮಹಾವಿದ್ಯಾಲಯದ ಆವರಣದಲ್ಲಿ ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕು ಪ್ರೌಢ ಶಾಲಾ ನೌಕರರ ಪತ್ತಿನ ಸಹಕಾರ ಸಂಘದ 27ನೇ ವಾರ್ಷಿಕ ಮಹಾಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸಹಕಾರ ತತ್ವದ ಅಡಿಯಲ್ಲಿ ಅಭಿವೃದ್ಧಿಗೊಳ್ಳುವ ಸಹಕಾರ ಸಂಘದ ಸರ್ವ ಸದಸ್ಯರು ಹಾಗೂ ಆಡಳಿತ ಮಂಡಳಿಯ ಸಮನ್ವಯತೆಯು ಸಂಘ ಲಾಭ ಗಳಿಸುವಂತೆ ಮಾಡುತ್ತವೆ’ ಎಂದರು.

ಬೆಳಗಾವಿ ಡಿಡಿಪಿಐ ಶಂಕ್ರಪ್ಪ ಗಾಂಜಿ ಮಾತನಾಡಿ,‘ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಿದ ಯಲಬುರ್ಗಾ ಕ್ಷೇತ್ರದಲ್ಲಿ ಸಹಕಾರಿ ವಲಯವು ಪ್ರಗತಿಯಲ್ಲಿರುವುದನ್ನು ಕಾಣುತ್ತಿದ್ದೇವೆ. ಶಿಕ್ಷಕರ ಸಂಘವು ಸಹಕಾರ ವಲಯದ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡುತ್ತಿದೆ’ ಎಂದರು.

ಸಹಕಾರಿ ಧುರೀಣ ಶೇಖರಗೌಡ ಉಳ್ಳಾಗಡ್ಡಿ ಮಾತನಾಡಿದರು. ಜಿಲ್ಲಾ ಪ್ರೌಢ ಶಾಲಾ ವಿಭಾಗದಿಂದ ಉತ್ತಮ ಪ್ರಶಸ್ತಿ ಪಡೆದ ಶಿಕ್ಷಕರನ್ನು, ನಿವೃತ್ತ ಶಿಕ್ಷಕರನ್ನು ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.

ಅಶೋಕ ಮಾಲಿಪಾಟೀಲ, ವಾದಿರಾಜ ಇಟಗಿ, ಗಂಗಾವತಿಯ ರವಿಚೇತನ, ಅಮರಪ್ಪ ಶಿವರಡ್ಡಿ, ಸಂಘದ ಅಧ್ಯಕ್ಷ ಅಮರೇಶ ಲಾಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ತಿಪ್ಪಣ್ಣ ಚಲವಾದಿ ವಾರ್ಷಿಕ ವರದಿ ಓದಿದರು.

ಸಂಘದ ಪದಾಧಿಕಾರಿಗಳಾದ ಬಸವರಾಜ ಮಾಸ್ತಿ, ಗಾಳೆಪ್ಪ ಎಚ್. ಶಿವಪ್ಪ ಕುಲಕರ್ಣಿ, ಜಗದೀಶ ಬಳಿಗೇರ, ವೆಂಕಟೇಶ ಗೌಡರ, ವ್ಹಿ.ಎಸ್. ಬೆಣಕಲ್, ವೀರಣ್ಣ ಕಟ್ಟಿ, ರಾಮಣ್ಣ ಕೇಸೂರು, ಗಂಗಪ್ಪ ಜತ್ತಿ, ಹನಮಂತಗೌಡ ದಾದ್ಮಿ, ಚೇತನಾ ನಾಡಗೇರ, ಪೂರ್ಣಿಮಾ ಹಳ್ಳಿಕೇರಿ, ದೇವೇಂದ್ರಪ್ಪ ಜಿರ್ಲಿ, ರಾಮಣ್ಣ ತಳವಾರ, ನೀಲನಗೌಡ ಪವಾಡಿಗೌಡ್ರ, ಪಾಲಾಕ್ಷಾಚಾರ ಬಡಿಗೇರ, ಶಂಕ್ರಪ್ಪ ಕುಂಟೋಜಿ, ಸಂಗಪ್ಪ ಚಳಗೇರಿ, ದೇವಪ್ಪ ಹಾದಿಮನಿ ಸೇರಿದಂತೆ ಪ್ರೌಢ ಶಾಲಾ ಶಿಕ್ಷಕ ವರ್ಗ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT