ಅಂಜನಾದ್ರಿಯ ಮೂಲ ಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಪ್ರವಾಸೋದ್ಯಮ ಅಭಿವೃದ್ಧಿಯ ಮೂರನೇ ಮಾರ್ಗ ಕೊಪ್ಪಳದಿಂದ ಆರಂಭಿಸಲಾಗಿದೆ
ಎಚ್.ಕೆ. ಪಾಟೀಲ ಪ್ರವಾಸೋದ್ಯಮ ಇಲಾಖೆ ಸಚಿವ
ಸ್ಮಾರಕಗಳ ಸಂರಕ್ಷಣೆಗೆ ಮನವಿ
ಆನೆಗೊಂದಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯಕ ಅವರು ಆನೆಗೊಂದಿ ದುರ್ಗಾದೇವಿ ಕೋಟೆ ನವೀಕರಣ ಸ್ಮಾರಕಗಳ ರಕ್ಷಣೆ ಆರೋಗ್ಯ ಕೇಂದ್ರ ಸ್ಥಾಪನೆಗೆ ಒತ್ತಾಯಿಸಿ ಸಚಿವರಿಗೆ ಮನವಿ ಸಲ್ಲಿಸಿದರು. ಕರವೇ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ ಸಾಣಾಪುರ ಆನೆಗೊಂದಿ ಸಂಗಾಪುರ ಮಲ್ಲಾಪುರ ಗ್ರಾಮಗಳಿಗೆ ಗ್ರಾಮ ಠಾಣ ವ್ಯವಸ್ಥೆ ಅಂಜನಾದ್ರಿ ಬೆಟ್ಟದಲ್ಲಿ ಅರ್ಚಕ ವಿದ್ಯಾದಾಸಬಾಬ ಮತ್ತು ಅಧಿಕಾರಿಗಳ ನಡುವಿನ ತಿಕ್ಕಾಟ ಸಮಸ್ಯೆ ಇತ್ಯರ್ಥಕ್ಕೆ ಒತ್ತಾಯಿಸಿ ಮನವಿ ಕೊಟ್ಟರು.