ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ಸ್ಥಳದಲ್ಲೇ ನರೇಗಾ ಕಾರ್ಮಿಕರಿಗೆ ಯೋಗಾಭ್ಯಾಸ ಮಾಡಿಸಿದ ಅಧಿಕಾರಿಗಳು

Last Updated 21 ಜೂನ್ 2022, 7:12 IST
ಅಕ್ಷರ ಗಾತ್ರ

ಕುಷ್ಟಗಿ: ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಕೇವಲ ಶಾಲಾ ಕಾಲೇಜು ಮತ್ತು ಸಾರ್ವಜನಿಕರು ಮಾತ್ರವಲ್ಲದೆ ಗ್ರಾಮಾಂತರ ಪ್ರದೇಶದ ಕೂಲಿಕಾರರೂ ಪಾಲ್ಗೊಂಡಿದ್ದು ಮಂಗಳವಾರ ಕಂಡುಬಂದಿತು.

ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಹಳ್ಳಿಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ಕೆರೆ, ಕಾಲುವೆಗಳಲ್ಲಿ ಹೂಳು ತೆಗೆಯುವ ಮತ್ತಿತರೆ ಕೆಲಸ ಕಾಮಗಾರಿಗಳಲ್ಲಿ ತೊಡಗಿದ್ದ ನರೇಗಾ ಕೂಲಿಕಾರರಿಗೆ ಯೋಗದ ಮಹತ್ವ ಕುರಿತು ಯೋಗ ಶಿಕ್ಷಕರು ಅರಿವು ಮೂಡಿಸಿದರು. ಮಹಿಳೆಯರು ಸೇರಿದಂತೆ ನೂರಾರು ಜನರು ಕೆಲಸದ ಸ್ಥಳದಲ್ಲಿಯೇ ಯೋಗಾಭ್ಯಾಸ ನಡೆಸಿದ್ದು ವಿಶೇಷವಾಗಿತ್ತು.

ದೈನಂದಿನ ಕೆಲಸ ಕಾರ್ಯಗಳ ಜೊತೆಗೆ ಯೋಗವನ್ನು ಅಳವಡಿಸಿಕೊಂಡರೆ ಉತ್ತಮ ಆರೋಗ್ಯ ಹೊಂದುವುದಕ್ಕೆ ಸಾಧ್ಯವಾಗುತ್ತದೆ ಎಂದು ಕಾರ್ಮಿಕರಿಗೆ ಯೋಗಪಟುಗಳು ವಿವರಿಸಿದರು

ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT