ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದಾಬಳ್ಳಿ: ಕುಂಬದ ಮೆರವಣಿಗೆ

Last Updated 5 ಅಕ್ಟೋಬರ್ 2022, 14:02 IST
ಅಕ್ಷರ ಗಾತ್ರ

ಕೊಪ್ಪಳ: ತಾಲ್ಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ ದ್ಯಾಮವ್ವ ದೇವಿ ಸದ್ಭಕ್ತ ಮಂಡಳಿ ವತಿಯಿಂದ ಒಂಬತ್ತು ದಿನಗಳ ಕಾಲ ಪುರಾಣ ಪ್ರವಚನ ಕಾರ್ಯಕ್ರಮ ನೆರವೇರಿ, ಬುಧವಾರ ಬನ್ನಿ ಮುಡಿಯಲಾಯಿತು. ಗುರುವಾರ ಗ್ರಾಮದಲ್ಲಿ ಕುಂಬಾಭಿಷೇಕ, ಕುಂಬದ ಮೆರವಣಿಗೆ ಹಾಗೂ ಸಂಜೆ 6 ಗಂಟೆಗೆ ಸಾಂಸ್ಕೃತಿಕ ಸೌರಭ ಜರುಗಲಿದೆ.

ದ್ಯಾಮವ್ವ ದೇವಿ, ಮುದ್ದಾಂಬಿಕಾ ದೇವಿ ಹಾಗೂ ಅನ್ನಪೂಣೇಶ್ವರಿ ದೇವಿ ಮೂರ್ತಿಗಳಿಗೆ ವಿಶೇಷ ಕುಂಬಾಭಿಷೇಕ ನೆರವೇರಲಿದೆ. ಮೆರವಣಿಗೆ ವೇಳೆ ಫಕೀರೇಶ್ವರ ಸ್ವಾಮೀಜಿ ಪಾಲ್ಗೊಳ್ಳುವರು. ಸಂಜೆ 6 ಗಂಟೆಗೆ ಕೆ.ಎಫ್.ಮುದ್ದಾಬಳ್ಳಿ ಅವರ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಯಾಗಿವೆ.

ನವರಾತ್ರಿ ಅಂಗವಾಗಿ ಗ್ರಾಮದಲ್ಲಿ ಗಣೇಶ ಶಾಸ್ತ್ರಿ ಹಾಗೂ ಗುರುನಾಥಸ್ವಾಮಿ ಏಕದಂಡಿಗಿಮಠ ಅವರಿಂದ ಪುರಾಣ ಪ್ರವಚನ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT