ಭಾನುವಾರ, ಜುಲೈ 3, 2022
27 °C

ಅಧಿಕಾರಿಗಳನ್ನು ಕೂಡಿ ಹಾಕಿ, ಬೀಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ನಗರಸಭೆಯ ಕಂದಾಯ ವಿಭಾಗದ ಅಧಿಕಾರಿಗಳು ಖಾತಾ ವರ್ಗಾವಣೆ ಮಾಡಿಕೊಡಲು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ನಗರಸಭೆ ಮಾಜಿ ಸದಸ್ಯ ಹುಸೇನಪ್ಪ ಹಂಚಿನಾಳ ಅವರು ಕಚೇರಿಗೆ ಬೀಗ ಜಡಿದು ಒಂದು ಗಂಟೆಗೂ ಹೆಚ್ಚುಕಾಲ ಅಧಿಕಾರಿಗಳನ್ನು ಕೂಡಿ ಹಾಕಿದರು.

‘ನಗರದ ಹಿರೇಜಂತಕಲ್ ಕಾಲೊನಿಯ ನಿವೇಶನದ ಖಾತಾ ವರ್ಗಾವಣೆ ಕೋರಿ ವರ್ಷದ ಹಿಂದೆ ಅರ್ಜಿ ಸಲ್ಲಿಸಲಾಗಿತ್ತು.  ಅದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಇದುವರೆಗೂ ಯಾವುದೇ ಪ್ರಕ್ರಿಯೆ ಮಾಡಿಲ್ಲ. ಪ್ರತಿದಿನ ಕಚೇರಿಗೆ ಭೇಟಿ ನೀಡುತ್ತಿದ್ದೇನೆ. ಸಬೂಬು ಹೇಳುತ್ತಿದ್ದಾರೆ. ಸೋಮವಾರವೂ ಖಾತಾ ವರ್ಗಾವಣೆ ಕುರಿತು ವಿಚಾರಿಸಿದರೆ ಸರಿಯಾಗಿ ಸ್ಪಂದಿಸಲಿಲ್ಲ. ಹೀಗಾಗಿ ಅಧಿಕಾರಿಗಳನ್ನು ಕಚೇರಿಯಲ್ಲಿ ಕೂಡಿ ಹಾಕಿದೆ. ನಂತರ ಸ್ಥಳೀಯರ ಮನವಿ ಮೇರೆಗೆ ಬೀಗ ತೆಗೆದೆ’ ಎಂದು ಹುಸೇನಪ್ಪ ಹಂಚಿನಾಳ ಹೇಳಿದರು.

ನಗರಸಭೆ ಪೌರಾಯುಕ್ತ ಅರವಿಂದ ಜಮಖಂಡಿ ಪ್ರತಿಕ್ರಿಯಿಸಿ, ‘ನನ್ನ ಗಮನಕ್ಕೆ ತರದೇ ಏಕಾಏಕಿ ಹೋಗಿ ಕಚೇರಿಗೆ ಬೀಗ ಹಾಕಿದ್ದು ತಪ್ಪು. ಅವರಿಗೆ ಎಚ್ಚರಿಕೆ ನೀಡಿದ್ದೇನೆ. ಅವರ ಸಮಸ್ಯೆ ಪರಿಹರಿಸುವಂತೆ ಸೂಚಿಸಿದ್ದೇನೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು