ಕೊಪ್ಪಳ: ಸ್ಪಷ್ಟ ಮಾತು, ಮನೋಜ್ಞ ಅಭಿನಯ ಮತ್ತು ಜನರ ಮನಸ್ಸಿಗೆ ಮುಟ್ಟುವ ರೀತಿಯಲ್ಲಿ ಇಲ್ಲಿನ ಸಾಹಿತ್ಯ ಭವನದಲ್ಲಿ ಭಾನುವಾರ ನಡೆದ ‘ನಮ್ಮೊಳಗೊಬ್ಬ ಗಾಂಧಿ’ ನಾಟಕ ಪ್ರೇಕ್ಷಕರನ್ನು ಹಿಡಿದಿಟ್ಟಿತು.

ಶಿವಮೊಗ್ಗದ ರಂಗಾಯಣ ಹಾಗೂ ಕೊಪ್ಪಳದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಡಿ.ಎಸ್. ಚೌಗಲೆ ವಿರಚಿತ ಈ ನಾಟಕ ಪ್ರದರ್ಶನಗೊಂಡಿತು. ಚಿದಂಬರರಾವ್ ಜಂಬೆ ಅವರ ನಿರ್ದೇಶನ, ರಂಗಾಯಣದ ರೆಪರ್ಟರಿ ಕಲಾವಿದರು ಪ್ರಸ್ತುತಪಡಿಸಿದ್ದು, ಸಾಹಿತ್ಯ, ಸಾಂಸ್ಕೃತಿಕ, ಕಲಾ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಗವಿಸಿದ್ದ ಎನ್.ಬಳ್ಳಾರಿ ಅವರ ಸಹಕಾರದೊಂದಿಗೆ ನಾಟಕ ಪ್ರದರ್ಶನ ಜರುಗಿತು.

ರಂಗಕರ್ಮಿ ಶರಣು ಶೆಟ್ಟರ್ ಮಾತನಾಡಿ, ‘ಈಗಿನ ಸ್ಥಿತಿಯಲ್ಲಿ ಆಳುವವರ ನಡುವಿನ ವ್ಯವಸ್ಥೆಯಲ್ಲಿ ಪರದಾಡಬೇಕಾಗಿದೆ. ನಮ್ಮ ಬೆವರ ಹನಿಯ ಪ್ರತಿಫಲ ನಮಗೆ ಸಿಗಬೇಕಾಗಿದ್ದು, ಇದನ್ನು ನಾಟಕದಲ್ಲಿ ಪರಿಣಾಮಕಾರಿಯಾಗಿ ತೋರಿಸಲಾಗಿದೆ’ ಎಂದರು.

ರಂಗ ಶಿಕ್ಷಕ ಗುರುರಾಜ ಮಾತನಾಡಿ, ‘ನಾಟಕ ತಂಡ ಕಟ್ಟುವಾಗ ಹಾಗೂ ಕಲಾವಿದರ ಒಳಗೆ ಗಾಂಧಿ ಇದ್ದಾರೆ. ನಮ್ಮೊಳಗೆ ಇರುವ ಗಾಂಧಿಯನ್ನು ಹೊರಗಡೆ ತರಬೇಕಿದೆ. ಗಾಂಧಿಯನ್ನು ಹೊರಗೆ ತರುವುದು ನಿರಂತರ ಪ್ರಕ್ರಿಯೆ. ಈ ನಾಟಕ ಕಲಾವಿದರಿಗೆ ದೊಡ್ಡ ಪ್ರೇರಣೆಯಾಗಿದೆ’ ಎಂದರು.

ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು, ಸಾವಿತ್ರಿ ಮುಜಮದಾರ, ರೇವತಿರಾವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ್, ಶಿಕ್ಷಕ ಮಹೇಶ ಬಳ್ಳಾರಿ, ಮಹಾಂತೇಶ ಕೊತಬಾಳ, ನಾಟಕ ತಂಡದ ವ್ಯವಸ್ಥಾಪಕ ಶಂಕರ ಬೆಳಲಕಟ್ಟಿ, ಗಾಂಧಿ ಬಳಗದ ಸದಸ್ಯರಾದ ಆನಂದತೀರ್ಥ ಪ್ಯಾಟಿ, ಬಸವರಾಜ ಸವಡಿ, ನಾಗರಾಜನಾಯಕ ಡೊಳ್ಳಿನ, ಪಿ.ಎಸ್. ಅಮರದೀಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಗಾಂಧಿ ಎಂದರೆ ಶಾಂತಿ ಸಮಾಧಾನ. ಅವರು ಎಲ್ಲವನ್ನೂ ತಮ್ಮ ಮೇಲೆ ಪ್ರಯೋಗ ಮಾಡಿಕೊಂಡಿದ್ದಾರೆ. ಯಾವ ಅಧಿಕಾರವಿಲ್ಲದೆ ಎಲ್ಲರ ಮೇಲೂ ಪ್ರಭಾವ ಬೀರಿದ್ದಾರೆ. ನನ್ನ ಬದುಕೇ ನನ್ನ ಸಂದೇಶ ಎಂದಿದ್ದಾರೆ
ಪ್ರಾಣೇಶ ಪೂಜಾರ ಶಿಕ್ಷಕ

ಕಾಲಚಕ್ರ ನಾಟಕ ಪ್ರದರ್ಶನ ಇಂದು

ಕಲಬುರಗಿ ರಂಗಾಯಣದ ರೆಪರ್ಟರಿ ಕಲಾವಿದರಿಂದ ರಚಿತವಾದ ಕಾಲಚಕ್ರ ನಾಟಕವು ಬುಧವಾರ ಸಂಜೆ 6 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಪ್ರದರ್ಶನಗೊಳ್ಳಲಿದ್ದು ಎಲ್ಲರಿಗೂ ಉಚಿತ ಪ್ರವೇಶವಿದೆ. ರಂಗಚಿಂತಕ ಪ್ರವೀಣ ಪೊಲೀಸ್ ಪಾಟೀಲ ರಂಗಕರ್ಮಿಗಳಾದ ಶರಣು ಶೆಟ್ಟರ್ ಲಕ್ಷ್ಮಣ ಪಿರಗಾರ ಹಾಗೂ ಕವಿ ಹಾಲಯ್ಯ ಹುಡೇಜಾಲಿ ಅವರು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಹುಲುಗಪ್ಪ ಕಟ್ಟಿಮನಿ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ನಾಟಕದಲ್ಲಿ ವೃದ್ಧಾಪ್ಯದ ಸೂಕ್ಷ್ಮ ಸಂವೇದನೆಗಳನ್ನು ಕಲಾವಿದರು ಮನೋಜ್ಞವಾಗಿ ಪ್ರದರ್ಶಿಸುವರು’ ಎಂದು ಹೇಳಿದರು. ಕೊಪ್ಪಳ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ರಮೇಶ್ ಕೆ. ಉದ್ಘಾಟನೆ ನೆರವೇರಿಸಲಿದ್ದು ಸಾಹಿತಿ ಡಿ.ಎಂ. ಬಡಿಗೇರ ಸೇರಿದಂತೆ ಅನೇಕರು ಪಾಲ್ಗೊಳ್ಳುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.