ಮಹಿಳಾ ಸ್ನೇಹಿ ಯೋಜನೆ: ಕಿನ್ನಾಳ ಗ್ರಾಮ ಪಂಚಾಯಿತಿಗೆ ರಾಷ್ಟ್ರೀಯ ಪುರಸ್ಕಾರ
ಕೇಂದ್ರದಿಂದ ಪ್ರಶಸ್ತಿ ಪಡೆದ ಕಲ್ಯಾಣ ಕರ್ನಾಟಕದ ಭಾಗದ ಏಕೈಕ ಗ್ರಾಮ ಪಂಚಾಯಿತಿ ಕಿನ್ನಾಳ
ಪ್ರಮೋದ ಕುಲಕರ್ಣಿ
Published : 12 ಡಿಸೆಂಬರ್ 2024, 5:53 IST
Last Updated : 12 ಡಿಸೆಂಬರ್ 2024, 5:53 IST
ಫಾಲೋ ಮಾಡಿ
Comments
ರಾಹುಲ್ ರತ್ನಂ ಪಾಂಡೆಯ
ಕಿನ್ನಾಳ ಗ್ರಾಮ ಪಂಚಾಯಿತಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದು ಜಿಲ್ಲೆಯ ಹೆಮ್ಮೆ ಹೆಚ್ಚಿಸಿದ. ಈ ಪಂಚಾಯಿತಿಯ ಕೆಲಸ ಉಳಿದ ಎಲ್ಲರಿಗೂ ಮಾದರಿಯಾಗಲಿ
ರಾಹುಲ್ ರತ್ನಂ ಪಾಂಡೆಯಜಿಲ್ಲಾ ಪಂಚಾಯಿತಿ ಸಿಇಒ, ಕೊಪ್ಪಳ
ನವದೆಹಲಿಯಲ್ಲಿ ಬುಧವಾರ ನಡದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕಿನ್ನಾಳ ಗ್ರಾಮ ಪಂಚಾಯಿತಿ ಸಿಬ್ಬಂದಿ
ದಕ್ಷಿಣ ಮೀರಿಸಿದ ಉತ್ತರದ ಜಿಲ್ಲೆ
ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳ ವಿಚಾರದಲ್ಲಿ ರಾಜ್ಯದಲ್ಲಿ ದಕ್ಷಿಣ ಭಾಗದ ಜಿಲ್ಲೆಗಳೇ ಪ್ರಾಬಲ್ಯ ಮೆರೆಯುತ್ತಿದ್ದವು. ಮಂಡ್ಯ, ಮೈಸೂರು, ಮಂಗಳೂರು ಭಾಗದ ಜಿಲ್ಲೆಗಳಿಗೆ ದೊಡ್ಡ ಮಟ್ಟದ ಪ್ರಶಸ್ತಿ ಲಭಿಸಿತ್ತಿದ್ದವು. ಮೊದಲ ಬಾರಿಗೆ ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆಗೆ ರಾಷ್ಟ್ರೀಯ ಪ್ರಶಸ್ತಿಯ ಹೆಗ್ಗಳಿಕೆ ಲಭಿಸಿದೆ.
‘ಮಹಿಳಾ ಸ್ನೇಹಿ ವಿಭಾಗದಲ್ಲಿ ಕಿನ್ನಾಳ ಪಂಚಾಯಿತಿ ರಾಷ್ಟ್ರೀಯ ಮಟ್ಟದಲ್ಲಿ ಗೌರವ ಪಡೆದಿದ್ದು ಅತ್ಯಂತ ಹೆಮ್ಮೆಯ ವಿಷಯ. ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡಲು ಹಾಗೂ ಹೊಸ ಯೋಜನೆಗಳನ್ನು ರೂಪಿಸಲು ಈ ಪ್ರಶಸ್ತಿ ಪ್ರೇರಣೆಯಾಗಲಿದೆ’ ಎಂದು ಕೊಪ್ಪಳ ತಾಲ್ಲೂಕು ಪಂಚಾಯಿತಿ ಇಒ ದುಂಡಪ್ಪ ತುರಾದಿ ಹರ್ಷ ವ್ಯಕ್ತಪಡಿಸಿದರು.