ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇತಾಜಿಯವರದ್ದು ರಾಜಿ ರಹಿತ ಹೋರಾಟ: ಶರಣು ಗಡ್ಡಿ

ಜಿಲ್ಲೆಯ ವಿವಿಧೆಡೆ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಜನ್ಮದಿನ ಆಚರಣೆ: ಕೊಡುಗೆ ಸ್ಮರಣೆ, ಭಾವಚಿತ್ರಕ್ಕೆ ಪೂಜೆ
Last Updated 24 ಜನವರಿ 2021, 6:51 IST
ಅಕ್ಷರ ಗಾತ್ರ

ಕೊಪ್ಪಳ: ‘ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ವಾತಂತ್ರ್ಯ ಸಂಗ್ರಾಮದ ಧೀರ ನೇತಾರರಾಗಿ ಈಗಿನ ಯುವಜನರಿಗೆ ಸ್ಫೂರ್ತಿದಾಯಕ ವ್ಯಕ್ತಿಯಾಗಿದ್ದಾರೆ’ ಎಐಡಿವೈಒ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶರಣು ಗಡ್ಡಿ
ಹೇಳಿದರು.

ನಗರದಲ್ಲಿ ನಡೆದ ಬೋಸ್‌ ಅವರ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ನಮ್ಮ ಸ್ವಾತಂತ್ರ್ಯ ಸಂಗ್ರಾಮ ಎರಡು ಕವಲು ದಾರಿಗಳನ್ನು ಹೊಂದಿದೆ. ಒಂದು ರಾಜಿ ಪಂಥ, ಮತ್ತೊಂದು ರಾಜಿ ರಹಿತ ಪಂಥ. ರಾಜಿ ಪಂಥದ ಅಗ್ರಮಾನ್ಯ ನಾಯಕರಾಗಿದ್ದ ಬೋಸ್‌ ಅವರು ಬ್ರಿಟಿಷರೊಂದಿಗೆ ಯಾವುದೇ ಮುಲಾಜಿಗೆ ಒಳಗಾಗದೇ ಕೇವಲ ಅವರನ್ನು ಭಾರತದಿಂದ ತೊಲಗಿಸುವುದು ಅಷ್ಟೇ ಅಲ್ಲ, ಅನ್ಯಾಯದ ಮೇಲೆ ನಿಂತಿರುವ ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜೀವನದುದ್ದಕ್ಕೂ ಹೋರಾಟ ನಡೆಸಿ ಮಹಾನ್ ನಾಯಕರಾಗಿದ್ದರು’ ಎಂದರು.

‘ಸಂಪೂರ್ಣ ಸ್ವಾತಂತ್ರ್ಯವೇ ನಮ್ಮ ಗುರಿ, ಅನ್ಯಾಯ ಮತ್ತು ಅಸತ್ಯದೊಂದಿಗೆ ರಾಜಿ ಮಾಡಿಕೊಳ್ಳುವುದಕ್ಕಿಂತ ಅಪರಾಧ ಇನ್ನೊಂದಿಲ್ಲ ಎಂದು ನಂಬಿದ್ದರು. ಅದರಂತೆ ಬದುಕಿ ತೋರಿಸಿಕೊಟ್ಟರು. ನೇತಾಜಿಯವರು ವಿದ್ಯಾರ್ಥಿಗಳನ್ನುದ್ದೇಶಿಸಿ ಕೇವಲ ಪುಸ್ತಕ ಓದುವುದು, ಚಿನ್ನದ ಪದಕ ಪಡೆಯುವುದು, ದೊಡ್ಡ, ದೊಡ್ಡ ಹುದ್ದೆಗಳಿಗೆ ಏರುವುದು, ಜೀವನದ ಮುಖ್ಯ ಧ್ಯೇಯವಲ್ಲ, ದೇಶದ ಮರ್ದಿತ ಜನ, ಶೋಷಣೆಗೊಳಗಾದ ಜನ, ತುಳಿತಕ್ಕೊಳಗಾದ ಜನರ ಪರವಾಗಿ ಧ್ವನಿಯೆತ್ತುವುದು ಮುಖ್ಯ’ ಎಂದರು.ಪ್ರಾಚಾರ್ಯನಿಂಗಪ್ಪ, ಯಮನೂರಪ್ಪ ಮುಜಾವರ್, ಈರಪ್ಪ ಹುಣಶಾಳ, ಮೊಮ್ಮದ್ ಶಫಿ, ಅಶೋಕ್ ಪೂಜಾರಿ, ಮಂಜುನಾಥ್, ಮುತ್ತಣ್ಣ ಮುಂತಾದವರು
ಇದ್ದರು.

ಗವಿಸಿದ್ಧೇಶ್ವರ ಕಾಲೇಜು:ನಗರದ ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ನೇತಾಜಿ ಸುಭಾಸ ಚಂದ್ರಬೋಸ್‌ ಅವರ 125ನೇ ಜನ್ಮದಿನ ಕಾರ್ಯಕ್ರಮದ ಪ್ರಯುಕ್ತಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಬಹುಮಾನನೀಡಿ ಪುರಸ್ಕರಿಸಲಾಯಿತು.

ಕಾಲೇಜಿನ ಹಳೆಯ ವಿದ್ಯಾರ್ಥಿಕೆಎಎಸ್‌ ಅಧಿಕಾರಿ ಮಂಜುನಾಥ ಮಲ್ಲಪ್ಪ ಗುಂಡೂರ ಪಾರಿತೋಷಕ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ಬಡತನವನ್ನು ಸವಾಲಾಗಿ ಸ್ವೀಕರಿಸಿ ತಮ್ಮ ಸ್ವ ಪ್ರಯತ್ನ, ತಾಳ್ಮೆ, ಅಧ್ಯಯನಗಳ ಮೂಲಕ ಯಾವುದೇ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಉತ್ತೀರ್ಣರಾಗಬಹುದು. ಜೀವನದ ಕಷ್ಟದ ಸಂದರ್ಭದಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳದೇ ಹಿಡಿದ ಗುರಿ ಸಾಧಿಸುವ ಛಲವಿದ್ದರೇ ಮಾತ್ರ ಇಂದಿನ ಕಾಲದಲ್ಲಿ ಯಶಸ್ಸು ಸಾಧ್ಯವಾಗುತ್ತದೆ ಎಂದರು.

ಪ್ರೊ.ಶರಣಪ್ಪ ಬಿಳಿಎಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಡಾ. ದಯಾನಂದ ಸಾಳುಂಕೆ ವಾರ್ಷಿಕ ವರದಿ ವಾಚಿಸಿದರು. ಪ್ರಾಚಾರ್ಯ ಡಾ.ಜೆ.ಎಸ್.ಪಾಟೀಲಅಧ್ಯಕ್ಷತೆ ವಹಿಸಿದ್ದರು.

ಅತ್ಯುತ್ತಮ ಫಲಿತಾಂಶ ತೋರಿದ ವಿದ್ಯಾರ್ಥಿನಿ ಗೌರಮ್ಮಳನ್ನು ಸನ್ಮಾನಿಸಲಾಯಿತು. ಪ್ರಶಾಂತ ಕೊಂಕಲ್ ನಿರ್ವಹಿಸಿದರು. ನಿವೃತ್ತ ಪ್ರಾಚಾರ್ಯ ಸಿ.ವಿ.ಕಲ್ಮಠ, ಪಾಲಕರ ಪ್ರತಿನಿಧಿ ಗವಿಸಿದ್ಧಯ್ಯ ಹಿರೇಮಠ ಇದ್ದರು.

ಸೇನಾನಿ ಸ್ಮರಣೆ
ಕಾರಟಗಿ:
ಪಟ್ಟಣದ ಶರಣಬಸವೇಶ್ವರ ಇಂಗ್ಲಿಷ್‌ ಹಾಗೂ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಸುಭಾಷ್ ಚಂದ್ರಬೋಸ್‌ ಅವರ ಜನ್ಮದಿನ ಆಚರಿಸಲಾಯಿತು.

ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಜಿ.ಅರಳಿ ಮಾತನಾಡಿ,‘ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಡಿಮೆ ಅವಧಿಯಲ್ಲಿ ಪರಿಣಾಮಕಾರಿ ಬೋಧನೆಗಾಗಿ ಶಿಕ್ಷಕ ವರ್ಗ ಶ್ರಮಿಸಿದೆ. ವಿದ್ಯಾರ್ಥಿಗಳು ಕಲಿಕೆಯ ಜತೆಗೆ ಸ್ವಸಾಮರ್ಥ್ಯವನ್ನು ಬೆರೆಸಿ ಉತ್ತಮ ಫಲಿತಾಂಶ, ಉತ್ತಮ ಸಾಧನೆ ಮಾಡಲು ಮುಂದಾಗಬೇಕು’ ಎಂದರು.

ವಿದ್ಯಾರ್ಥಿಗಳಾದ ಅಮನರಾಜ್ ಅರಳಿ, ಭೂಮಿಕಾ, ದೀಪಾ ಹಾಗೂ ಸಂತೋಷ ಮಾತನಾಡಿದರು.

ಸಂಸ್ಥೆಯ ಉಪಾಧ್ಯಕ್ಷ ಜಗದೀಶ್ ಅವರಾದಿ, ನಿರ್ದೇಶಕ ಸಿದ್ದರಾಮಪ್ಪ ಪಲ್ಲೇದ, ರುದ್ರೇಶ್ ಗಣಾಚಾರಿ, ಮಲ್ಲಿಕಾರ್ಜುನ ಹಿಂದಪೂರ ಮುಖ್ಯಗುರುಗಳಾದ ವೀರೇಶ್ ಮ್ಯಾಗೇರಿ, ವಿಜಯಲಕ್ಷ್ಮಿ ಮೇಲಿನಮನಿ, ರೂಪಾ, ಅಮರೇಶ್ ಪಾಟೀಲ, ಮಹಾಂತೇಶ್ ಗದ್ದಿ, ಶಿಕ್ಷಕರಾದ ಡಿ. ಎಸ್.‌ಪಾಟೀಲ, ರವೀಂದ್ರ ಭಟ್. ಜಗದೀಶ್ ಹಳ್ಳೂರ, ಜಗದೀಶ್ ಭಜಂತ್ರಿ, ದೇವೇಂದ್ರಪ್ಪ, ಲಿಂಗರಾಜ, ಬಸವರಾಜ ರೆಡ್ಡಿ, ಶರಣಪ್ಪ, ವಿಶ್ವನಾಥ, ಬಸವರಾಜ ಸಾಹುಕಾರ, ಮಧುಕಲಾ, ಶಿವಪ್ಪ ಆದಿ, ಎಂ. ಡಿ. ಇಬ್ರಾಹಿಂ, ಗುಂಡಪ್ಪ ಅರಳಿ, ಅನುಷಾ ಅರಳಿ ಹಾಗೂ ವಿಜಯಲಕ್ಷ್ಮಿ ನಾಯಕ ಇದ್ದರು.

ಬಿಜೆಪಿ ಕಚೇರಿ: ಪಟ್ಟಣದ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಮಹಾನ್ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಜಯಂತಿ ಆಚರಿಸಲಾಯಿತು. ಜನ್ಮದಿನವನ್ನು ಪರಾಕ್ರಮ ದಿನ ಎಂದು ಘೋಷಿಸಲಾಯಿತು. ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಶೇಖರ ಮುಸಾಲಿ ಪ್ರಮುಖರಾದ ರತ್ನಕುಮಾರಿ, ಮಂಜುನಾಥ ಮಸ್ಕಿ, ರಮೇಶ ಸಾಲೋಣಿ, ಶಶಿ ಮೇದಾರ, ಧನಂಜಯ, ರಾಜುಗೌಡ, ಬಸವರಾಜ, ಭದ್ರಗೌಡ ಹಾಗೂ ವೀರೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT