ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳವಂಡಿ | ನನಸಾಗದ ಹಿರೇಹಳ್ಳದ ಮೇಲ್ಸೇತುವೆ ಕನಸು

Published 20 ಡಿಸೆಂಬರ್ 2023, 5:57 IST
Last Updated 20 ಡಿಸೆಂಬರ್ 2023, 5:57 IST
ಅಕ್ಷರ ಗಾತ್ರ

ಅಳವಂಡಿ: ಅಳವಂಡಿ ಗ್ರಾಮದಿಂದ ಹಲವಾಗಲಿ, ನಿಲೋಗಿಪುರ, ಕೇಸಲಾಪುರ ಸೇರಿದಂತೆ ಅನೇಕ ಗ್ರಾಮಗಳ ಗ್ರಾಮಸ್ಥರು, ತಮ್ಮ ವ್ಯಾಪಾರ–ವಹಿವಾಟು, ವೈಯಕ್ತಿಕ ಕೆಲಸಗಳು, ವಿದ್ಯಾರ್ಥಿಗಳು ಶಾಲೆ ಕಾಲೇಜುಗಳಿಗೆ ತೆರಳಲು ಇದೇ ಸೇತುವೆಯನ್ನು ಅವಲಂಬಿಸಿದ್ದಾರೆ. ಆದರೆ ಹಳ್ಳಕ್ಕೆ ಸೇತುವೆ ನಿರ್ಮಾಣದ ಕನಸು ಮಾತ್ರ ಹಾಗೆ ಉಳಿದಿದೆ.

ಈ ಭಾಗದ ಸುಮಾರು ಗ್ರಾಮಗಳ ಗ್ರಾಮಸ್ಥರು ಹಿರೇಹಳ್ಳವನ್ನು ದಾಟಿಕೊಂಡು ಹೋಗಬೇಕಿದೆ. ಮಳೆಗಾಲದಲ್ಲಿ ಹಳ್ಳವನ್ನು ದಾಟಲು ಸಾಧ್ಯವಾಗುವುದಿಲ್ಲ. ಈ ಸಂಬಂಧ ಹಲವು ಬಾರಿ ಸೇತು ನಿರ್ಮಾಣಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಶೀಘ್ರ ಸೇತುವೆಯನ್ನು ನಿರ್ಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವ್ಯಾಪ್ತಿಯ ಅನೇಕ ಗ್ರಾಮಗಳಿಗೆ ಸಂಪರ್ಕ ಮಾಡುವಾಗ ಹಿರೇಹಳ್ಳದ ಮಾರ್ಗವಾಗಿ ಹೋಗಬೇಕಾಗುತ್ತದೆ. ಆದರೆ ಸರಿಯಾದ ಸೇತುವೆ ಇಲ್ಲದೇ ಪರದಾಡುವಂತಾಗಿದೆ. ಅದರಂತೆ ನಿಲೋಗಿಪುರ, ಹಲವಾಗಲಿ, ಕೇಸಲಾಪುರ ಜನ ಹಿರೇಹಳ್ಳ ದಾಟುವುದೇ ಸಂಕಷ್ಟವಾಗಿದೆ.

ಹಲವು ವರ್ಷಗಳ ಹಿಂದೆ, ಹಿರೇಹಳ್ಳಕ್ಕೆ ನೆಲಮಟ್ಟದ ಸೇತುವೆ ನಿರ್ಮಾಣ ಮಾಡಲಾಗಿತ್ತು. ಆದರೆ ನೆಲಮಟ್ಟದ ಸೇತುವೆ ಶಿಥಿಲಗೊಂಡು, ಕಲ್ಲುಗಳು ಕಿತ್ತು ಸಂಪೂರ್ಣ ಹಾಳಾಗಿದೆ. ಬೃಹತ್ ಗುಂಡಿ- ತಗ್ಗುಗಳು ನಿರ್ಮಾಣಗೊಂಡಿವೆಬಿದ್ದಿವೆ. ನಿತ್ಯ ಇದೇ ಮಾರ್ಗವಾಗಿ ಸಂಚರಿಸುವ ಜನರು ಪ್ರಾಯಸ ಪಡುತ್ತಿದ್ದಾರೆ.

ನಿಲೋಗಿಪುರ, ಹಲವಾಗಲಿ, ಕೇಸಲಾಪುರ ಗ್ರಾಮದ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹಾಗೂ ಜನರು ವ್ಯಾಪಾರ - ವಹಿವಾಟುಗಳಿಗೆ ಅಳವಂಡಿ ಗ್ರಾಮವನ್ನು ಅವಲಂಬಿಸಿದ್ದಾರೆ. ನಿತ್ಯ ಅಳವಂಡಿ ಗ್ರಾಮಕ್ಕೆ ಹೋಗಿ ಬರಲು ಜನರ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

ಹಿರೇಹಳ್ಳದ ಮಾರ್ಗವಾಗಿ ಸಂಚಾರ ಮಾಡುವಾಗ ವಾಹನ ಸವಾರರು ಬಿದ್ದು ಕೈ- ಕಾಲು ಮುರಿದುಕೊಂಡು ಗಾಯವಾದ ಉದಾಹರಣೆಗಳು ಇವೆ. ಹೀಗಾಗಿ ಇಲ್ಲಿನ ಜನರು ಈ ಸಮಸ್ಯೆಯಿಂದ ಸುತ್ತಿ ಬಳಸಿ ಅಳವಂಡಿಗೆ ತೆರಳುವುದು ಸಾಮಾನ್ಯ. ಈ ಹಿರೇಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡುವಂತೆ ಹಲವಾರು ಬಾರಿ ಸಂಬಂಧ ಪಟ್ಟ ಜನಪ್ರತಿನಿಧಿಗಳು ಅಧಿಕಾರಿಗಳಿಗೆ‌ ಮನವಿ ಮಾಡಿದರು ಯಾವುದೇ ರೀತಿ ಪ್ರಯೋಜನವಾಗಿಲ್ಲ.

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹಿರೇಹಳ್ಳಕ್ಕೆ ಮೇಲ್ಸೇತುವೆ ನಿರ್ಮಾಣ ಮಾಡಲು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಹೀಗಾಗಿ ಕೂಡಲೇ ಸದ್ಯ ತಾತ್ಕಾಲಿಕ ದುರಸ್ತಿ ಮಾಡಿ, ನಂತರ ಸೇತುವೆ ನಿರ್ಮಾಣ ಮಾಡಬೇಕು ಎಂಬುದು ಈ ಭಾಗದ ಜನರ ಒತ್ತಾಯವಾಗಿದೆ.

ರಸ್ತೆ ಮಾರ್ಗವಾಗಿ ನಿತ್ಯ ನೂರಾರು ಜನರು ಸಂಚರಿಸುತ್ತಾರೆ. ಹೀಗಾಗಿ ರಸ್ತೆಯ ಮಧ್ಯೆ ಇರುವ ಹಿರೇಹಳ್ಳಕ್ಕೆ ಮೇಲ್ಸೇತುವೆ ನಿರ್ಮಾಣ ಮಾಡಬೇಕು. ಇದರಿಂದ ಈ ಭಾಗದವರಿಗೆ ಅನುಕೂಲವಾಗುತ್ತದೆ.
ರವಿ ಮಾಗಳ, ನಿಲೋಗಿಪುರ ಗ್ರಾಮಸ್ಥ
ವಿದ್ಯಾರ್ಥಿಗಳು, ಗ್ರಾಮಸ್ಥರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಹೀಗಾಗಿ ಮಳೆಗಾಲದಲ್ಲಿ‌ ತೀವ್ರ, ತೊಂದರೆಯಾಗುತ್ತದೆ.‌ ಸದ್ಯ ತಾತ್ಕಾಲಿಕ ದುರಸ್ತಿ ಮಾಡಿ ತದನಂತರ ಮೇಲ್ಸೇತುವೆ ನಿರ್ಮಾಣ ಮಾಡಬೇಕು.
ಭೀಮನಗೌಡ, ಹಲವಾಗಲಿ ಗ್ರಾಮಸ್ಥ
ನೆಲಮಟ್ಟದ ಸೇತುವೆಯ ಕಲ್ಲುಗಳು ಕಿತ್ತು ಸಂಪೂರ್ಣ ಹದೆಗೆಟ್ಟಿದ್ದು.
ನೆಲಮಟ್ಟದ ಸೇತುವೆಯ ಕಲ್ಲುಗಳು ಕಿತ್ತು ಸಂಪೂರ್ಣ ಹದೆಗೆಟ್ಟಿದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT