ಬುಧವಾರ, ಜುಲೈ 28, 2021
21 °C

ಕೊರೊನಾ ಭಯ ಬೇಡ: ಜಾಗೃತಿ ಅಗತ್ಯ: ಸಂತೋಷ್ ಎಚ್. ಎಂ.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿದ್ದಾಪುರ (ಕಾರಟಗಿ): ‘ಕೊರೊನಾ ಕುರಿತ ಆತಂಕ ದೂರ ಮಾಡಿ, ಜಾಗೃತಿ ಕ್ರಮಗಳನ್ನು ಅನುಸರಿಸಿಕೊಂಡು ಅದರಿಂದ ಮುಕ್ತರಾಗೋಣ’ ಎಂದು ಜಿಲ್ಲಾ ಜನಸಹಾಯ ಕೆಸಿವಿಟಿ ಹೆಲ್ಪ್‌ಲಿಂಕ್ ಸಂಯೋಜಕ ಸಂತೋಷ್ ಎಚ್. ಎಂ. ಹೇಳಿದರು.

ತಾಲ್ಲೂಕಿನ ಸಿದ್ದಾಪುರ ಗ್ರಾಮದ 4ನೇ ವಾರ್ಡ್‌ನಲ್ಲಿ ಬಡವರಿಗೆ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು.

ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಅಗತ್ಯ ಕ್ರಮಕೈಗೊಂಡಿದೆ. ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಪ್ರತಿಯೊಬ್ಬರೂ ಸರ್ಕಾರದ ನೀತಿ, ನಿಯಮ ಪಾಲಿಸುವ ಮೂಲಕ ಸಾಂಕ್ರಾಮಿಕ ರೋಗ ತಡೆಗೆ ಕೈಜೋಡಿಸಬೇಕು. ರೋಗದ ಲಕ್ಷಣಗಳು ಕಾಣಿಸಿಕೊಂಡರೆ ಶೀಘ್ರವೇ ತಜ್ಞ ವೈದ್ಯರ ಬಳಿ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.

ಕೊಪ್ಪಳ ಜಿಲ್ಲಾ ಜನಸಹಾಯ ಕೆಸಿವಿಟಿ ಹೆಲ್ಪ್‌ಲಿಂಕ್ ಮುಖ್ಯಸ್ಥ ಎಂ.ಡಿ.ಸಿರಾಜ್, 4ನೇ ವಾರ್ಡ್ ಗ್ರಾಮ ಪಂಚಾಯಿತಿ ಸದಸ್ಯ ಅಜೀಂ ಮುದ್ದೀನ್, ಮಂಜುನಾಥ ಎನ್., ಅನಿಲ್ ಕುಮಾರ್, ಸಾದೀಕ್ ಎಸ್, ಕಲೀಮ್ ಹಿರೇಮನಿ, ಸೋಹಿಲ್ ಹಿರೇಮನಿ ಹಾಗೂ ಮುಮತಾಜ್ ಬೇಗಂ ಸೋಲ್ಲಾಪುರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು