ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶಾನ್ಯ ಪದವೀಧರರ ಮತಕ್ಷೇತ್ರದ ಪಟ್ಟಿ ಪ್ರಕಟ: ಪುರುಷ ಮತದಾರರೇ ಹೆಚ್ಚು

Published 31 ಡಿಸೆಂಬರ್ 2023, 14:24 IST
Last Updated 31 ಡಿಸೆಂಬರ್ 2023, 14:24 IST
ಅಕ್ಷರ ಗಾತ್ರ

ಕೊಪ್ಪಳ: ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಈಶಾನ್ಯ ಪದವೀಧರರ ಮತಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಶನಿವಾರ ಪ್ರಕಟಿಸಲಾಗಿದ್ದು ಜಿಲ್ಲೆಯಲ್ಲಿ ಪುರುಷ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಒಟ್ಟು 8.926 ಪುರುಷರು ಹಾಗೂ 4.479 ಮಹಿಳೆಯರು ಸೇರಿದಂತೆ ಜಿಲ್ಲೆಯಲ್ಲಿ 13.405 ಪದವೀಧರ ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗಿದೆ. ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ, ಸಹಾಯಕ ಆಯುಕ್ತರ ಕಚೇರಿಯಲ್ಲಿ ಹಾಗೂ ಸಂಬಂಧಪಟ್ಟ ತಹಶೀಲ್ದಾರ್ ಕಚೇರಿಗಳಲ್ಲಿ ಅತವಾ ಜಿಲ್ಲಾ ವೆಬ್‌ಸೈಟ್  https://koppal.nic.in/ ಹೆಸರು ಪರಿಶೀಲಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ತಿಳಿಸಿದ್ದಾರೆ.

ಜಿಲ್ಲೆಯ ಕುಷ್ಟಗಿ, ಕನಕಗಿರಿ, ಕಾರಟಗಿ, ಗಂಗಾವತಿ, ಯಲಬುರ್ಗಾ, ಕುಕನೂರು ಹಾಗೂ ಕೊಪ್ಪಳ ತಾಲ್ಲೂಕುಗಳಲ್ಲಿ ಒಟ್ಟು 23 ಮತಗಟ್ಟೆಗಳಿದ್ದು, ಕುಷ್ಟಗಿ ತಾಲ್ಲೂಕಿನಲ್ಲಿ 1.523 ಪುರುಷರು, 620 ಮಹಿಳೆಯರು ಸೇರಿ ಒಟ್ಟು 2,143 ಪದವೀಧರ ಮತದಾರರು ಇದ್ದಾರೆ.

ಕನಕಗಿರಿ ತಾಲ್ಲೂಕಿನಲ್ಲಿ 474 ಪುರುಷ, 182 ಮಹಿಳೆಯರು ಸೇರಿ 656 ಮತದಾರರು, ಕಾರಟಗಿ ತಾಲ್ಲೂಕಿನಲ್ಲಿ 767 ಪುರುಷ, 347 ಮಹಿಳೆಯರು ಸೇರಿ 1.114, ಗಂಗಾವತಿ ತಾಲ್ಲೂಕಿನಲ್ಲಿ 1908 ಪುರುಷ, 1,229 ಮಹಿಳೆಯರು ಸೇರಿ 3,137 ಪದವೀಧರ ಮತದಾರರು ಇದ್ದಾರೆ.

ಯಲಬುರ್ಗಾ ತಾಲ್ಲೂಕಿನಲ್ಲಿ 928 ಪುರುಷ, 380 ಮಹಿಳೆಯರು ಸೇರಿದಂತೆ 1,308 ಮತದಾರರು, ಕುಕನೂರು ತಾಲ್ಲೂಕಿನಲ್ಲಿ 718 ಪುರುಷ, 358 ಮಹಿಳೆಯರು ಸೇರಿದಂತೆ 1,076 ಮತದಾರರು, ಕೊಪ್ಪಳ ತಾಲ್ಲೂಕಿನಲ್ಲಿ 2,608 ಪುರುಷ, 1,363 ಮಹಿಳೆಯರು ಸೇರಿದಂತೆ 3,971 ಪದವೀಧರ ಮತದಾರರು ಇದ್ದಾರೆ ಅವರು ಹೇಳಿದ್ದಾರೆ.

ಪ್ರಕ್ರಿಯೆ ನಿರಂತರ:

ಈಶಾನ್ಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವುದು ನಿರಂತರ ಪ್ರಕ್ರಿಯೆಯಾಗಿದ್ದು ನವೆಂಬರ್‌ 1ರ 2023ರ ಅಂತ್ಯಕ್ಕೆ ಮೂರು ವರ್ಷಗಳ ಪೂರ್ವದಲ್ಲಿ  ವಿಶ್ವವಿದ್ಯಾಲಯದಿಂದ ಪದವಿ ಪಡೆದ ಪದವೀಧರರು ನಿಗದಿಪಡಿಸಿದ ನಮೂನೆ-18 ರಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT