ಸೋಮವಾರ, ಆಗಸ್ಟ್ 8, 2022
23 °C

ಜನ, ರೈತಪರ ಯೋಜನೆ ಜಾರಿ: ಆರ್.ಅಶೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಭಾರತವನ್ನು ವಿಶ್ವಕ್ಕೆ ಯೋಗ ಗುರು ಎಂದು ಪರಿಚಯಿಸಿದ ಕೀರ್ತಿ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ. ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಗುರುವಾರ ಬಿಜೆಪಿ ಯುವ ಮೋರ್ಚಾದ ವತಿಯಿ‌ಂದ ನಡೆದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

‘ಮಂಗಳ ಗ್ರಹಕ್ಕೆ ಉಪಗ್ರಹ ಉಡಾವಣೆ ಮಾಡಿದ್ದಾರೆ. ಮೋದಿ ಚೀನಾ ಮತ್ತು ಪಾಕಿಸ್ಥಾನ ದೇಶಗಳನ್ನು ಎದುರಿಸಿದ್ದಾರೆ. ಅವರಿಂದಾಗಿ ಪ್ರಸ್ತುತ ಭಾರತದ ಪರವಾಗಿ ಇಡೀ ಜಗತ್ತು ನಿಂತಿದೆ. ಎಲ್ಲ ರಂಗದಲ್ಲೂ ಉತ್ತಮ ಬೆಳವಣಿಗೆ ತಂದಿದ್ದಾರೆ. ರೈತರ ಹಾಗೂ ಬಡವರ ಪರವಾಗಿ ಹಲವಾರು ಕೆಲಸ ಮಾಡಿದ್ದಾರೆ. ದೇಶವನ್ನು ಪ್ರಗತಿಯತ್ತ ತೆಗೆದುಕೊಂಡ ಹೋಗುವ ಶಕ್ತಿ ಪ್ರಧಾನಿ ಮೋದಿ ಹೊಂದಿದ್ದಾರೆ. ಹಾಗಾಗಿ ಮುಂದಿನ ಅವಧಿಯ ಐದು ವರ್ಷವೂ ದೇಶವನ್ನೂ ಮುನ್ನಡೆಸುವ ಶಕ್ತಿ ಅವರಿಗೆ ಸಿಗಲಿ‘ ಎಂದರು.

ಮೋದಿ ಜನ್ಮದಿನದ ಅಂಗವಾಗಿ ಜನ್ಮ ಸಪ್ತಾಹವನ್ನು ಆಚರಿಸಲಾಗುತ್ತಿದೆ. ರಕ್ತದಾನ, ಆರೋಗ್ಯ, ಅಸಿದವರಿಗೆ ಅನ್ನ, ಸಸಿ ನೆಡುವುದು ಸೇರಿ ಇಂತಹ ಹಲವಾರು ಕಾರ್ಯಕ್ರಮಗಳನ್ನು ತಾಲ್ಲೂಕು, ಗ್ರಾಮಗಳಲ್ಲಿ ಅಭಿಯಾನದ ರೀತಿಯಲ್ಲಿ ಆಯೋಜಿಸಲಾಗಿದೆ ಎಂದರು.

‘ನಾನೂ ಕೂಡಾ ಯುವ ಮೋರ್ಚಾ ಪ್ರಾಡಕ್ಟ್ ಆಗಿದ್ದು, ನಾನೂ ಕೂಡಾ ಜೈಲಲ್ಲಿ ಇದ್ದು, ಯುವ ಮೋರ್ಚಾ ಅಧ್ಯಕ್ಷನಾಗಿ, ಶಾಸಕನಾಗಿ, ಉಪಮುಖ್ಯಮಂತ್ರಿಯಾಗಿ, ಪ್ರಸ್ತುತ ಸಚಿವನಾಗಿದ್ದೇನೆ. ಇದಕ್ಕೆಲ್ಲಾ ಕಾರಣ ಯುವ ಮೋರ್ಚಾ. ಹಾಗಾಗಿ ಯುವ ಮೋರ್ಚಾ ಕಾರ್ಯಕರ್ತರಿಗೆ ಒಳ್ಳೆ ಭವಿಷ್ಯ ಇದೆ‘ ಎಂದರು.

ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್, ಬಿಜೆಪಿ ಯುವ ಮುಖಂಡರಾದ ಅಮರೇಶ ಕರಡಿ, ನವೀನ್‌ ಗುಳಗಣ್ಣವರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು