ಕೊಪ್ಪಳ: ಫೋಟೋಗ್ರಾಫಿಕ್ ಸೊಸೈಟಿ ಆಫ್ ಅಮೆರಿಕದ ವತಿಯಿಂದ ಕೋಲ್ಕತ್ತದಲ್ಲಿ ನಡೆದ ಕಿಪಾ ಅಂತರರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆಯಲ್ಲಿ ನಗರದ ಛಾಯಾಗ್ರಾಹಕ ಪ್ರಕಾಶ ಕಂದಕೂರ ಅವರು ಸೆರೆಹಿಡಿದಿರುವ ʻದಿ ಫೀಯರ್ʼ ಶೀರ್ಷಿಕೆಯ ಚಿತ್ರ ಎರಡು ಪಿಎಸ್ಎ ಚಿನ್ನದ ಪದಕಗಳನ್ನು ಪಡೆದುಕೊಂಡಿದೆ.

18 ದೇಶಗಳ 65ಕ್ಕೂ ಹೆಚ್ಚು ಜನ ಛಾಯಾಗ್ರಾಹಕರ 1,300ಕ್ಕೂ ಹೆಚ್ಚು ಚಿತ್ರಗಳು ಸ್ಪರ್ಧೆಯಲ್ಲಿದ್ದವು. ಅಂತರರಾಷ್ಟ್ರೀಯ ಛಾಯಾಗ್ರಾಹಕರಾದ ಪಿಂಕು ಡೇ, ಶಾಮಲ್ ಕುಮಾರ್ ಸಹಾ, ಸುದೀಪ್ ರಾಯ್ ಚೌಧರಿ, ಅಮರನಾಥ್ ದತ್ತಾ ಮತ್ತು ಪಿಹೂ ಮಿತ್ರಾ ಅವರ ತಂಡಗಳು ಚಿತ್ರಗಳ ಆಯ್ಕೆಯಲ್ಲಿ ಭಾಗವಹಿಸಿದ್ದವು. ಡಿ. 30ರ ನಂತರ ಪ್ರಶಸ್ತಿ ವಿಜೇತ ಚಿತ್ರಗಳನ್ನು ಸ್ಪರ್ಧೆಯ ಆನ್ಲೈನ್ ಗ್ಯಾಲರಿಯಲ್ಲಿ ವೀಕ್ಷಿಸಬಹುದಾಗಿದೆ ಎಂದು ಸ್ಪರ್ಧೆಯ ಸಂಘಟಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.